ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನು ಮೊದಲೇ ನೋಡಿದ್ದ 'ಭಾರತ ರತ್ನ'!!

|

ಭಾರತೀಯ ರಾಜಕೀಯ ರಂಗದ 'ಭಾರತ ರತ್ನ' ಎಂದೇ ಕರೆಸಿಕೊಳ್ಳುವ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪರಿಶ್ರಮವಿಲ್ಲದಿದ್ದರೆ, ವಿಶ್ವ ಮಾಹಿತಿ ತಂತ್ರಜ್ಞಾನದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ಭಾರತದ ಐಟಿ ಉದ್ಯಮ ಇಂದು ಈ ರೀತಿ ಇರುತ್ತಿರಲಿಲ್ಲ. ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ವಾಜಪೇಯಿ ಅವರು ನೀಡಿದ ಕೊಡುಗೆಯ ಫಲವಾಗಿಯೇ ಭಾರತವಿಂದು ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜನಾಗಿ ಭದ್ರವಾಗಿ ತಳವೂರಲು ಸಾಧ್ಯವಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಹೌದು, ರಾಜಕೀಯ ನಿಪುಣರಾಗಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ತಂತ್ರಜ್ಞಾನ ಕ್ಷೇತ್ರವನ್ನು ಭಾರತದ ಭವಿಷ್ಯವನ್ನಾಗಿ ನೋಡಿದ್ದರು. ಹಾಗಾಗಿಯೇ, ದೇಶದ ಒಟ್ಟು ಸ್ಥಳೀಯ ಆದಾಯದ (ಜಿಡಿಪಿ) ಪ್ರತಿಶತ 2 ರಷ್ಟನ್ನಾದರೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿನಿಯೋಗಿಸುವುದಾಗಿ ಸಂಕಲ್ಪ ತೊಟ್ಟ ಮೊದಲ ಪ್ರಧಾನಿ ಅವರು 2003ರಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ- 2003ರ ಸಂಕ್ಷಿಪ್ತ ವಿವರ ನೀಡಿದ್ದರು.!

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನು ಮೊದಲೇ ನೋಡಿದ್ದ 'ಭಾರತ ರತ್ನ'!!

2003ರಲ್ಲಿ ನಡೆದಿದ್ದ ತೊಂಬತ್ತನೇ ಅಖಿಲ ಭಾರತ ವಿಜ್ಞಾನ ಮೇಳ ಉದ್ಘಾಟಿಸಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದ್ದ ವಾಜಪೇಯಿ ಅವರು, ಈ ಹೊಸ ನೀತಿಯಿಂದ ಬಡತನ ಮತ್ತು ಪ್ರಾದೇಶಿಕ ಅಸಮತೋಲನವನ್ನು ನೇರವಾಗಿ ಕಿತ್ತೊಗೆಯುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ದಕ್ಕಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರಶಾಹಿ ರಹಿತವಾಗಿ ರೂಪುಗೊಳ್ಳಲಿದೆ. ಎಂಬ ಮಾತುಗಳನ್ನು ಭಾರತೀಯ ತಂತ್ರಜ್ಞಾನ ಕ್ಷೇತ್ರ ಎಂದೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ, ಅವರ ಮಾತು ಈಗ ನಿಜವಾಗಿದೆ.

1983ರ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯನ್ನು 2003ರಲ್ಲಿ ಜಾರಿಗೆ ತಂದ ವಾಜಪೇಯಿ ಅವರು, ನೈಸರ್ಕಿಕ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಳ್ಳುವ, ಪರಿಸರಕ್ಕೂ ಪೆಟ್ಟು ಕೊಡದಂತೆ ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಅವಶ್ಯಕತೆಯಿದೆ. ಇದನ್ನು ಕಟ್ಟಿಕೊಡುವುದು ವಿಜ್ಞಾನಿಗಳ ಹೊಣೆಯಾಗಬೇಕು. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳನ್ನು ವಿವಿಧ ಕ್ಷೇತ್ರಗಳ ಯಶಸ್ಸಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಂದಿನ ಭಾಷಣದಲ್ಲಿ ಹೇಳಿದ್ದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನು ಮೊದಲೇ ನೋಡಿದ್ದ 'ಭಾರತ ರತ್ನ'!!

ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ಕೊಡುವಂತಹ ಆವಿಷ್ಕಾರಗಳಿಗೆ ವಿಜ್ಞಾನ ಸಮುದಾಯ ಮೊದಲ ಆದ್ಯತೆ ಕೊಡಬೇಕು. ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳಲ್ಲಿ ವಯಸ್ಸು ಆಧರಿಸಿ ಬಡ್ತಿ ಕೊಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಸರಿಸುಮಾರು 15 ವರ್ಷಗಳ ಹಿಂದೆಯೇ ಪ್ರಸ್ತಾಪಿಸಿದ್ದ ವಾಜಪೇಯಿ ಅವರು ವಿಜ್ಞಾನ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ 25 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ಕೊಡುವುದಾಗಿ ಘೋಷಿಸಿದ್ದನ್ನು ನೋಡಿ ಅಂದಿನ ವಿಜ್ಞಾನ ಸಮೂಹವೇ ಬಾಯಲ್ಲಿ ಬೆರಳಿಟ್ಟು ನೋಡಿತ್ತು.

Best Mobiles in India

English summary
technology : a Thing that must You Know About Former Prime Minister Atal Bihari Vajpayee. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X