ಟೆಕ್ನೋ ಕ್ಯಾಮನ್ 15 ಮತ್ತು ಕ್ಯಾಮನ್ 15 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಟೆಕ್‌ ಜಗತ್ತಿನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿಯೇ ಇದೆ. ಈಗಾಗ್ಲೆ ಹಲವಾರು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಗ್ರಾಹಕರು ತಮ್ಮಗೆ ಇಷ್ಟವಾದ ಬ್ರ್ಯಾಂಡ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಟೆಕ್ನೋ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿಗಷ್ಟೇ ಟೆಕ್ನೋ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌ ಆಗಿತ್ತು. ಇದೀಗ ಅಧಿಕೃತವಾಗಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.

ಹೌದು

ಹೌದು, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಲಯದಲ್ಲಿ ಗುರ್ತಿಸಿಕೊಂಡಿರುವ ಟೆಕ್ನೊ ಕಂಪೆನಿ ತನ್ನ ಹೊಸ ಟೆಕ್ನೋ ಕ್ಯಾಮನ್ 15 ಮತ್ತು ಕ್ಯಾಮನ್ 15 ಪ್ರೊ ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ 9,999 ಮತ್ತು 14,999 ರೂ. ಆಗಿದ್ದು, ಪ್ರಾರಂಭಿಕ ಹಂತದ ಆಫರ್‌ನಲ್ಲಿ 3,499 ರೂ.ಬೆಲೆ ಬಾಳುವ ವೈರ್‌ಲೆಸ್ ಸ್ಪೀಕರ್‌ಗಳನ್ನ ಉಚಿತವಾಗಿ ನೀಡಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಕ್ಯಾಮನ್ 15 ಸ್ಮಾರ್ಟ್‌ಫೋನ್‌ 6.55-ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಸ್ಕ್ರೀನ್-ಟು-ಬಾಡಿ ಅನುಪಾತ 90% ರಷ್ಟಿದೆ. ಅಲ್ಲದೆ ಉತ್ತಮ ಪಿಪಿಐ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಇನ್ನು ಕ್ಯಾಮನ್ 15 ಪ್ರೊ ಸ್ಮಾರ್ಟ್‌ಫೋನ್‌ 6.53-ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನ ಹೊಂದಿದ್ದು, ಉತ್ತಮ ವೀಡಿಯೋ ವೀಕ್ಷಣೆ ಅನುಭವ ನೀಡಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಕ್ಯಾಮನ್ 15 ಮೀಡಿಯಾ ಟೆಕ್ ಹಿಲಿಯೊ ಪಿ 35 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಸಂಗ್ರಹಣಾ ಸಾಮರ್ಥ್ಯವನ್ನ ಹೊಂದಿದೆ. ಹಾಗೇಯೇ ಕ್ಯಾಮನ್ 15 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ ಪಿ 35 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಟೆಕ್ನೊ ಕ್ಯಾಮನ್ 15 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮೊದಲನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ , ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್, ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. ಅಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಕ್ಯಾಮನ್ 15 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ,ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ ಅಲ್ಲದೆ ಇದು 32 ಮೆಗಾಪಿಕ್ಸೆಲ್ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಟೆಕ್ನೋ ಕ್ಯಾಮನ್ 15 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಆಪ್‌ ಹೊಂದಿದ್ದರೆ, ಕ್ಯಾಮನ್ 15 ಪ್ರೊ 4,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಆಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳು ಬ್ಲೂಟೂತ್‌, ಹಾಟ್‌ಸ್ಪಾರ್ಟ್‌, ವೈಫೈ, ಯುಎಸ್‌ಬಿ ಟೈಪ್‌ಸಿ ಪೋರ್ಟ್‌ ಅನ್ನು ಬೆಂಬಲಿಸಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಕ್ಯಾಮನ್ 15 ಸ್ಮಾರ್ಟ್‌ಫೋನ್‌ ಬೆಲೆ ರೂ .9,999 ಆಗಿದ್ದು, ಶೋಲ್ ಗೋಲ್ಡ್, ಕೆನ್ನೇರಳೆ, ಜೇಡ್. ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಕ್ಯಾಮನ್ 15 ಪ್ರೊ ಸ್ಮಾರ್ಟ್‌ಫೋನ್‌ ಬೆಲೆ ರೂ .14,999 ಆಗಿದ್ದು, ಇದು ಐಸ್ ಜೇಡೈಟ್ ಮತ್ತು ಒಪಲ್ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇದೇ ಫೆಬ್ರವರಿ 25 ರಿಂದ ಭಾರತದಾದ್ಯಂತ ಮಾರಾಟವಾಗಲಿವೆ.

Best Mobiles in India

English summary
Tecno Mobile has launched two new camera-focused budget smartphones in India. Check full specifications and features of Tecno Camon 15 and Camon 15 Pro.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X