Home
ಸುದ್ದಿಜಾಲ

ಟೆಕ್ನೋ ಕ್ಯಾಮನ್‌ 20 ಇದೀಗ ಹೊಸ ಆಯ್ಕೆಯಲ್ಲಿ.. ಹೊಸ ಆಯ್ಕೆಯ ವಿಶೇಷತೆ ಏನ್‌ ಗೊತ್ತಾ?

ಟೆಕ್ನೋ ಕ್ಯಾಮನ್‌ 20 ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಇದೀಗ ಟೆಕ್ನೋ ಕ್ಯಾಮನ್‌ 20 ಸ್ಮಾರ್ಟ್‌ಫೋನ್‌ನ ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಹಸಿರು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇನ್ನು ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಹಾಗಾದ್ರೆ ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಕ್ಯಾಮನ್‌ 20 ಇದೀಗ ಹೊಸ ಆಯ್ಕೆಯಲ್ಲಿ.. ಹೊಸ ಆಯ್ಕೆಯ ವಿಶೇಷತೆ ಏನು?

ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಡಿಸ್‌ಪ್ಲೇ ರಚನೆ
ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ ಉಬ್ಬು ವಿನ್ಯಾಸ ಮತ್ತು ಗೀಚುಬರಹದೊಂದಿಗೆ ಲೆದರ್ ಬ್ಯಾಕ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು 500 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.

ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಪ್ರೊಸೆಸರ್‌
ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೊ G85 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ HiOS 13.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ 8GB ವರ್ಚುವಲ್ ಮೆಮೊರಿಗೆ ಬೆಂಬಲಿಸಲಿದೆ.

ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಕ್ಯಾಮೆರಾ ಸೆಟ್‌ಅಪ್‌
ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ RGBW ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ QVGA ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಬ್ಯಾಟರಿ ಮತ್ತು ಇತರೆ
ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, 4G, ಬ್ಲೂಟೂತ್ 5, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಅಕ್ಸೆಲೆರೊಮೀಟರ್, ಇ-ದಿಕ್ಸೂಚಿ, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಕೂಡ ಒಳಗೊಂಡಿದೆ.

ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಬೆಲೆ ಮತ್ತು ಲಭ್ಯತೆ
ಟೆಕ್ನೋ ಕ್ಯಾಮನ್‌ 20 ಆವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ 15,999ರೂ ಬೆಲೆಯನ್ನು ಹೊಂದಿದೆ. ಇದನ್ನು ನೀವು ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ. ಇದಲ್ಲದೆ ರಿಟೇಲ್‌ ಸ್ಟೋರ್‌ಗಳ ಮೂಲಕ ಕೂಡ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು 8GB + 256GB RAM ಸ್ಟೋರೇಜ್ ಕಾನ್ಫಿಗರೇಶನ್‌ ಆಯ್ಕೆಯಲ್ಲಿ ಮಾತ್ರ ಪರಿಚಯಿಸಲಾಗಿದೆ.

Best Mobiles in India

English summary
Tecno Camon 20 Avocado Art Edition Launched in India: Price and Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+