ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಲಾಂಚ್ ಡೇಟ್ ಫಿಕ್ಸ್! ಜಬರ್ದಸ್ತ್ ಕ್ಯಾಮೆರಾ!
ಟೆಕ್ನೋ ಕಂಪೆನಿ ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಭಾರಿ ಆಕ್ಟಿವ್ ಆಗಿದೆ. ಒಂದು ವಾರದ ಅವಧಿಯಲ್ಲಿ ಹಲವು ಡಿವೈಸ್‌ಗಳನ್ನು ಘೋಷಣೆ ಮಾಡಿರುವ ಟೆಕ್ನೋ ಕಂಪೆನಿ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸಲು ತಯಾರಿ ನಡೆಸಿದೆ. ಅದರಂತೆ ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಜುಲೈ 7 ರಂದು ಎಂಟ್ರಿ ನೀಡಲಿದೆ.
ಹೌದು, ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಜುಲೈ 7ಕ್ಕೆ ಲಾಂಚ್ ಮಾಡುವುದಾಗಿ ಹೇಳಿದೆ. ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಮೂಲಕ ಲಭ್ಯವಾಗಲಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಮೈಕ್ರೋಸೈಟ್ ಮತ್ತು ಡಿವೈಸ್‌ನ ಲಿಸ್ಟ್ ಅನ್ನು ಬಹಿರಂಗಪಡಿಸಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಡಿಸ್‌ಪ್ಲೇ ನಿರೀಕ್ಷೆ ಏನು?
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ 6.67 ಇಂಚಿನ 10 ಬಿಟ್ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ ಸೆಂಟರ್-ಅಲೈನ್ಡ್ ಪಂಚ್-ಹೋಲ್ ಕಟೌಟ್ ಮತ್ತು ಇಂಟಿಗ್ರೇಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಜೊತೆಗೆ ಫುಲ್‌ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ಅನ್ನು ನೀಡಲಿದೆ.
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಪ್ರೊಸೆಸರ್ ಯಾವುದು?
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8050SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ ಸ್ಟೋರೇಜ್ ಹೊಂದಿರಲಿದೆ. ಇದಲ್ಲದೆ 8GB ವರ್ಚುವಲ್ RAM ಅನ್ನು ಕೂಡ ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ.
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಕ್ಯಾಮೆರಾ ಸೆಟ್‌ಅಪ್
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್, ಎರಡನೇ ಕ್ಯಾಮೆರಾ 50MP RGBW ಸೆನ್ಸಾರ್ ಹೊಂದಿರಬಹುದು. ಹಾಗೆಯೇ ಮೂರು ಮತ್ತು ನಾಲ್ಕನೇ ಕ್ಯಾಮೆರಾ 2MP ಸೆನ್ಸಾರ್ ಅನ್ನು ಹೊಂದಿರಲಿವೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ 32MP ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ವರದಿಯಾಗಿದೆ.
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಹಾಗೂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಬೆಲೆ ಮತ್ತು ಲಭ್ಯತೆ
ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್ ಬೆಲೆ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಜುಲೈ 7ಕ್ಕೆ ಬಿಡುಗಡೆ ಆಗುವುದು ಪಕ್ಕಾ ಆಗಿದೆ.
ಇನ್ನು ಇತ್ತೀಚಿಗೆ ಟೆಕ್ನೋ ಕಂಪೆನಿ ಹೊಸ ಟೆಕ್ನೋ ಪೊವಾ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080x24460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಕಸ್ಟಮೈಸ್ ಮಾಡಿದ ವಾಲ್‌ಪೇಪರ್‌ಗಳು ಮತ್ತು ಐಕಾನ್‌ಗಳ ಮೂಲಕ ಗಮನಸೆಳೆದಿದೆ. ಇದು ಮೀಡಿಯಾಟೆಕ್ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








