Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಕ್ಯಾಮನ್‌ 20 ಸರಣಿ! ಅಬ್ಬಬ್ಬಾ ಬೆಂಕಿ ಪೀಚರ್ಸ್‌!

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಟೆಕ್ನೋ ಕ್ಯಾಮನ್‌ 20 ಸರಣಿಯು ಭಾರತಕ್ಕೆ ಎಂಟ್ರಿ ನೀಡಿದೆ. ಈ ಸರಣಿಯಲ್ಲಿ ಟೆಕ್ನೋ ಕ್ಯಾಮನ್‌ 20, ಟೆಕ್ನೋ ಕ್ಯಾಮನ್‌ 20 ಪ್ರೊ, ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್‌ ಫೋನ್‌ಗಳನ್ನು ಪರಿಚಯಿಸಲಾಗಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿವೆ.

ಹೌದು, ಟೆಕ್ನೋ ಕ್ಯಾಮನ್‌ 20 ಸರಣಿ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಹಿಂಭಾಗದಲ್ಲಿ ಪೆಂಟಗೋನಲ್‌ ಆಕಾರದ ಕ್ಯಾಮೆರಾ ದ್ವೀಪವನ್ನು ಹೊಂದಿವೆ. ಹಾಗಾದ್ರೆ ಟೆಕ್ನೊ ಕ್ಯಾಮನ್‌ 20 ಸರಣಿ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಕ್ಯಾಮನ್‌ 20 ಸರಣಿ! ಅಬ್ಬಬ್ಬಾ ಬೆಂಕಿ ಪೀಚರ್ಸ್‌

ಟೆಕ್ನೋ ಕ್ಯಾಮನ್‌ 20 ಸರಣಿ ವಿಶೇಷತೆ: ಟೆಕ್ನೋ ಕ್ಯಾಮನ್‌ 20 ಸರಣಿಯ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿವೆ. ಇನ್ನು ಡಿಸ್‌ಪ್ಲೇ 500 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಒಳಗೊಂಡಿವೆ.

ಟೆಕ್ನೋ ಕ್ಯಾಮನ್ 20 ಸರಣಿ ಪ್ರೊಸೆಸರ್‌: ಟೆಕ್ನೋ ಕ್ಯಾಮನ್ 20 ಸರಣಿಯಲ್ಲಿ ಟೆಕ್ನೋ ಕ್ಯಾಮನ್ 20 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಕ್ಯಾಮನ್‌ 20 ಪ್ರೊ 5G ಮತ್ತು ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ಗಳು ಡೈಮೆನ್ಸಿಟಿ 8050 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಆದರೆ ಈ ಮೂರು ಸ್ಮಾರ್ಟ್‌ಫೋನ್‌ಗಳು 8GB RAM ಅನ್ನು ಹೊಂದಿದ್ದು, 8GB ವರ್ಚುವಲ್ ಮೆಮೊರಿಗೆ ಬೆಂಬಲಿಸಲಿವೆ.

ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಕ್ಯಾಮನ್‌ 20 ಸರಣಿ! ಅಬ್ಬಬ್ಬಾ ಬೆಂಕಿ ಪೀಚರ್ಸ್‌

ಟೆಕ್ನೋ ಕ್ಯಾಮನ್ 20 ಸರಣಿ ಕ್ಯಾಮೆರಾ ಸೆಟ್‌ಅಪ್‌: ಇನ್ನು ಟೆಕ್ನೋ ಕ್ಯಾಮನ್‌ 20 ಮತ್ತು 20ಪ್ರೊ 5G ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್‌ ಪಡೆದುಕೊಂಡಿದೆ. ಆದರೆ ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ 50MP RGBW ಸೆನ್ಸಾರ್‌, 108MP ಅಲ್ಟ್ರಾ-ವೈಡ್ ಮತ್ತು 2MP ಬೊಕೆ ಲೆನ್ಸ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಕೂಡ 32MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿವೆ.

ಟೆಕ್ನೋ ಕ್ಯಾಮನ್ 20 ಸರಣಿ ಬ್ಯಾಟರಿ ಬ್ಯಾಕ್‌ಅಪ್‌: ಇದಲ್ಲದೆ ಟೆಕ್ನೋ ಕ್ಯಾಮನ್‌ 20 ಸರಣಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಇದರಲ್ಲಿ ಸ್ಟ್ಯಾಂಡರ್ಡ್ ಮತ್ತು ಪ್ರೊ ಮಾದರಿಗಳು 33W ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಆದರೆ ಪ್ರೀಮಿಯರ್ ರೂಪಾಂತರವು 45W ವೇಗವನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB-C ಪೋರ್ಟ್, 3.5mm ಜ್ಯಾಕ್, ವೈಫೈ, ಬ್ಲೂಟೂತ್, NFC, ಡ್ಯುಯಲ್ 4G VoLTE ಅನ್ನು ಒಳಗೊಂಡಿವೆ.

ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಕ್ಯಾಮನ್‌ 20 ಸರಣಿ! ಅಬ್ಬಬ್ಬಾ ಬೆಂಕಿ ಪೀಚರ್ಸ್‌

ಟೆಕ್ನೋ ಕ್ಯಾಮನ್ 20 ಸರಣಿ ಬೆಲೆ ಮತ್ತು ಲಭ್ಯತೆ: ಈ ಸರಣಿಯಲ್ಲಿ ಟೆಕ್ನೋ ಕ್ಯಾಮನ್ 20 ಸ್ಮಾರ್ಟ್‌ಫೋನ್‌ 8GB + 128GB ರೂಪಾಂತರಕ್ಕೆ 14,999 ರೂ. ಬೆಲೆ ಹೊಂದಿದೆ. ಇದನ್ನು ಪ್ರಿಡಾನ್ ಬ್ಲ್ಯಾಕ್, ಸೆರಿನಿಟಿ ಬ್ಲೂ ಮತ್ತು ಗ್ಲೇಸಿಯರ್ ಗ್ಲೋ ಬಣ್ಣಗಳಲ್ಲಿ ಮೇ 29 ರಿಂದ ಖರೀದಿಸಬಹುದು.
ಇನ್ನು ಕ್ಯಾಮನ್‌ 20ಪ್ರೊ 5G ಸ್ಮಾರ್ಟ್‌ಫೋನ್‌ 8GB + 128GB ಆಯ್ಕೆಗೆ 19,999 ರೂ. ಬೆಲೆ ಪಡೆದಿದೆ. ಹಾಗೆಯೇ 8GB + 256GB ಕಾನ್ಫಿಗರೇಶನ್ ಆಯ್ಕೆಗೆ 21,999 ರೂ. ಬೆಲೆ ಹೊಂದಿದೆ. ಇದು ಸೆರಿನಿಟಿ ಬ್ಲೂ ಮತ್ತು ಡಾರ್ಕ್ ವೆಲ್ಕಿನ್ ಬಣ್ಣಗಳಲ್ಲಿ ಜೂನ್ ಎರಡನೇ ವಾರದಿಂದ ಮಾರಾಟವಾಗಲಿದೆ.
ಇದರ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ ಜೂನ್ ಮೂರನೇ ವಾರದಿಂದ ಲಭ್ಯವಾಗಲಿದ್ದು, ಬೆಲೆ ವಿವರಗಳು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Tecno Camon 20 Series Launched In India: Price and Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+