ಟೆಕ್ನೋ ಕ್ಯಾಮನ್ 30 ಪ್ರೊ ಫೋನಿನ ಡಿಸೈನ್ ಬಹಿರಂಗ: ಸ್ಟೈಲಿಶ್ ಲುಕ್
ಟೆಕ್ನೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ ಕಂಪೆನಿ ಇದೀಗ ಹೊಸ ಟೆಕ್ನೋ ಕ್ಯಾಮನ್ 30 ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸರಣಿಯಲ್ಲಿ ಟೆಕ್ನೋ ಕ್ಯಾಮನ್ 30 5G, ಕ್ಯಾಮನ್ 30 ಪ್ರೊ 5G ಮತ್ತು ಕ್ಯಾಮನ್ 30 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ಗಳು ಬರಲಿವೆ.
ಹೌದು, ಟೆಕ್ನೋ ಕ್ಯಾಮನ್ 30 ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ Tecno Camon 30 Pro 5G ಸ್ಮಾರ್ಟ್‌ಫೋನ್‌ನ ಫೀಚರ್ಸ್ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ SoC ಪ್ರೊಸೆಸರ್‌ನಲ್ಲಿ ರನ್ ಆಗಲಿದೆ. ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಹಾಗಾದ್ರೆ Tecno Camon 30 Pro 5G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Tecno Camon 30 Pro 5G ಡಿಸ್‌ಪ್ಲೇ ರಚನೆ
Tecno Camon 30 Pro 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, ವೀಡಿಯೊ ಪ್ರಿಯರಿಗೆ ಸೂಕ್ತವಾದ ವಿನ್ಯಾಸದೊಂದಿಗೆ ಬರಲಿದೆ.
Tecno Camon 30 Pro 5G ಪ್ರೊಸೆಸರ್ ಯಾವುದು?
Tecno Camon 30 Pro 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೆ 12GB RAM + 256GB ಮತ್ತು 12GB RAM + 512GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ.
Tecno Camon 30 Pro 5G ಕ್ಯಾಮೆರಾ ರಚನೆ
Tecno Camon 30 Pro 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯಲ್ಲಿರಲಿದೆ. ಇದರ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ. ಎರಡನೇ ಕ್ಯಾಮೆರಾ ವಿವರ ತಿಳಿದುಬಂದಿಲ್ಲ. ಇನ್ನು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.
Tecno Camon 30 Pro 5G ಬ್ಯಾಟರಿ ಮತ್ತು ಇತರೆ
Tecno Camon 30 Pro 5G ಸ್ಮಾರ್ಟ್‌ಫೋನ್ 66W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಹೊಂದಿರಲಿದೆ.
Tecno Camon 30 Pro 5G ಬೆಲೆ ಮತ್ತು ಲಭ್ಯತೆ
Tecno Camon 30 Pro 5G ಸ್ಮಾರ್ಟ್‌ಫೋನ್ 19,999ರೂ ಆರಂಭಿಕ ಬೆಲೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ.
ಇದಲ್ಲದೆ ಟೆಕ್ನೊ ಕಂಪೆನಿ ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1080 x 2436 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಡಿಸ್‌ಪ್ಲೇಯು 393 ppi ಸಾಂದ್ರತೆಯನ್ನು ಹೊಂದಿದ್ದು, 87.2% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿ ಬರಲಿದೆ. ಇದರೊಂದಿಗೆ ಡಿಸ್‌ಪ್ಲೇಯು 1300 ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ.
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೆ ವರ್ಟಲ್ RAM ತಂತ್ರಜ್ಞಾನದೊಂದಿಗೆ 8GB ಮತ್ತು 12GB RAM ಆಯ್ಕೆಗಳನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೆ 256GB ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ.


Click it and Unblock the Notifications








