ಟೆಕ್ನೋ ಕಂಪೆನಿಯ ಅಚ್ಚರಿಯ ನಿರ್ಧಾರಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಂಪನ!
ಈ ವರ್ಷ ಟೆಕ್ನೋ ಕಂಪೆನಿ ಸ್ಮಾರ್ಟ್‌ಫೋನ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ. ತನ್ನ ಬಜೆಟ್ ಫೋನ್‌ಗಳಿಂದ ಸದ್ದು ಮಾಡ್ತಿದ್ದ ಟೆಕ್ನೋ ಕಂಪೆನಿ ಈ ವರ್ಷ ಆರರಿಂದ ಎಂಟು ಅಲ್ಟ್ರಾ ಪ್ರೀಮಿಯಂ ಫೋನ್‌ಗಳನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಟೆಕ್‌ವಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ.
ಹೌದು, ಟೆಕ್ನೋ ಕಂಪೆನಿ ಶೀಘ್ರದಲ್ಲೇ ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದು ಪಕ್ಕಾ ಆಗಿದೆ. ಜಾಗತಿಕ ಮಟ್ಟದಲ್ಲಿ ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಟೆಕ್ನೋ ಭಾರತದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಹಾಗಾದ್ರೆ ಟೆಕ್ನೋ ಕಂಪೆನಿಯ ಮುಂದಿನ ನಡೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್ನೋ ಕಂಪೆನಿ ಕೆಲ ದಿನಗಳ ಹಿಂದೆ ತನ್ನ ಹೊಸ ಫೋಲ್ಡ್ ಫೋನ್ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 5G ಪರಿಚಯಿಸಿ ಸಖತ್ ಸೌಂಡ್ ಮಾಡ್ತಿದೆ. ಇದೀಗ ಈ ಸ್ಮಾರ್ಟ್‌ಫೋನ್ ಭಾರತಕ್ಕೂ ಎಂಟ್ರಿ ನೀಡುವ ಸೂಚನೆ ಸಿಕ್ಕಿದೆ. ಇದನ್ನು ಭಾರತದ ಮೇಕ್ ಇನ್ ಇಂಡಿಯಾ ಕಾರ್ಯತಂತ್ರದ ಭಾಗವಾಗಿ ಭಾರತದಲ್ಲಿಯೇ ತಯಾರಿಸಲು ಮುಂದಾಗಿದೆ. ಇದಕ್ಕಾಗಿ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಭಾರತದಲ್ಲಿ ಟೆಕ್ನೋ ಕಂಪೆನಿ ಫೋಲ್ಡ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಪರಿಚಯಿಸಲು ಗಮನಹರಿಸಿದೆ. ಇದಕ್ಕಾಗಿ ನಾವು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ್ದೇವೆ ಎಂದು ಟೆಕ್ನೋ ಕಂಪೆನಿ ಹೇಳಿದೆ. ಅಲ್ಲದೆ ಇದು ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್‌ಗೆ ಅನುಗುಣವಾಗಿರಲಿದೆ ಎಂದು ಟೆಕ್ನೋ ಕಂಪೆನಿ ಘೋಷಣೆ ಮಾಡಿದೆ.

ಟೆಕ್ನೋ ಕಂಪೆನಿ ಭಾರತದಲ್ಲಿ ತನ್ನ ಮೊದಲ ಫೋಲ್ಡ್ ಸ್ಮಾರ್ಟ್‌ಫೋನ್ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 5G ಪರಿಚಯಿಸಲು ಮುಂದಾಗಿದೆ. ಇದು ಇದೇ ಏಪ್ರಿಲ್ 11 ರಂದು ದೇಶದಲ್ಲಿ ಲಾಂಚ್ ಆಗಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಅಮೆಜಾನ್ ಮೂಲಕ 77,777 ರೂ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಟೆಕ್ನೋ ಕಂಪೆನಿ ಘೋಷಣೆ ಮಾಡಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 5G ಫೀಚರ್ಸ್ ಹೇಗಿದೆ?
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಅಚ್ಚರಿ ಎನಿಸುವ ಸ್ಪೆಕ್ಸ್ ಶೀಟ್ ಅನ್ನು ಹೊಂದಿದೆ. ಇದು 6.42 ಇಂಚಿನ LTPO AMOLED ಕವರ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2550 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 7.85 ಇಂಚಿನ ಇನರ್‌ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದು 2000 x 2296 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದ್ದು, 2x ಜೂಮ್‌ನೊಂದಿಗೆ ಬರಲಿದೆ. ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇದರೊಂದಿಗೆ ಕವರ್ ಪರದೆಯ ಮೇಲ್ಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಹಾಗೂ ಸ್ಮಾರ್ಟ್‌ಫೋನ್ ಒಳಭಾಗದಲ್ಲಿ 16MP ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.


Click it and Unblock the Notifications








