Home
ಸುದ್ದಿಜಾಲ

ಟೆಕ್ನೋ ಸಂಸ್ಥೆಯಿಂದ ಅಚ್ಚರಿಯ ಲ್ಯಾಪ್‌ಟಾಪ್‌ ಬಿಡುಗಡೆ! 12 ಗಂಟೆಗಳ ಬ್ಯಾಟರಿ ಬ್ಯಾಕಪ್!

ಟೆಕ್ನೋ ಕಂಪೆನಿ ತನ್ನ ಭಿನ್ನ ಮಾದರಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಲ್ಯಾಪ್‌ಟಾಪ್‌ ವಲಯದಲ್ಲಿ ಇತ್ತೀಚಿಗೆ ತನ್ನ ಪ್ರಾಬಲ್ಯ ಸಾಧಿಸುತ್ತಿರುವ ಟೆಕ್ನೋ ಕಂಪೆನಿ ಇದೀಗ ಮತ್ತೊಂದು ಲ್ಯಾಪ್‌ಟಾಪ್‌ ಪರಿಚಯಿಸಿದೆ. ಇದನ್ನು ಮೆಗಾಬುಕ್‌ S1 ಲ್ಯಾಪ್‌ಟಾಪ್‌ ಎಂದು ಹೆಸರಿಸಲಾಗಿದೆ. ಈ ಲ್ಯಾಪ್‌ಟಾಪ್‌ ಅನ್ನು ಗ್ಲೋಬಲ್‌ ಲಾಂಚ್‌ ಈವೆಂಟ್‌ನಲ್ಲಿ ಅನಾವರಣಗೊಳಿಸಿದೆ.

ಟೆಕ್ನೋ

ಹೌದು, ಟೆಕ್ನೋ ಕಂಪೆನಿ ಹೊಸ ಮೆಗಾಬುಕ್‌ S1 ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇದು ಟೆಕ್ನೋ ಕಂಪನಿ ಪರಿಚಯಿಸುತ್ತಿರುವ ಎರಡನೇ ಲ್ಯಾಪ್‌ಟಾಪ್ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 12 ನೇ-ಜನ್ ಕೋರ್ ಪ್ರೊಸೆಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು 7nm ಫ್ಯಾಬ್ರಿಕೇಶನ್ ಪ್ರೊಸೆಸ್‌ ಬಳಸಿ ಮಾಡಲಾಗಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಟು-ಇನ್-ಒನ್ ಫಿಂಗರ್‌ಪ್ರಿಂಟ್ ಪವರ್ ಬಟನ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಗಾಬುಕ್‌

ಟೆಕ್ನೋ ಮೆಗಾಬುಕ್‌ S1 ಲ್ಯಾಪ್‌ಟಾಪ್‌ 15.6-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 3.2K ಹೈ ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಈ ಡಿಸ್‌ಪ್ಲೇ 16:10 ವೈಡ್ ಸ್ಕ್ರೀನ್ ಅನ್ನು ಹೊಂದಿದ್ದು, 90% ಸ್ಕ್ರೀನ್ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 120Hz ಸ್ಕ್ರೀನ್ ರಿಫ್ರೆಶ್ ರೇಟ್‌ ಹೊಂದಿದ್ದು, 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಹಾಗೆಯೇ DC ಡಿಮ್ಮಿಂಗ್ ಸ್ಮಾರ್ಟ್ ಸೆನ್ಸಿಂಗ್, TUV SUD ಐ ಕಂಫರ್ಟ್‌ ಪ್ರಮಾಣೀಕರಣ ಮತ್ತು 180 ಡಿಗ್ರಿ ವ್ಯೂ ಆಂಗಲ್‌ ಅನ್ನು ಒಳಗೊಂಡಿದೆ.

ಮೆಗಾಬುಕ್

ಇನ್ನು ಮೆಗಾಬುಕ್ S1 ಲ್ಯಾಪ್‌ಟಾಪ್‌ ಇಂಟೆಲ್‌ನ 12 ನೇ-ಜನ್ ಕೋರ್ ಪ್ರೊಸೆಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು 7nm ಫ್ಯಾಬ್ರಿಕೇಶನ್ ಪ್ರೊಸೆಸ್‌ ಬಳಸಿ ತಯಾರಿಸಲಾಗಿದೆ. ಅಲ್ಲದೆ ಇದು i7 ಮತ್ತು i5 ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ನೀಡಲಾಗಿದೆ. ಈ ಲ್ಯಾಪ್‌ಟಾಪ್ ವಿಸಿ ಕೂಲಿಂಗ್ ಟೆಕ್ನಾಲಜಿಯನ್ನು ಒಳಗೊಂಡಿರುವ ಐಸ್ ಸ್ಟಾರ್ಮ್ ಕೂಲಿಂಗ್ ಸಿಸ್ಟಮ್ ಒಳಗೊಂಡಿದೆ. ಅಲ್ಲದೆ ಹೆಚ್ಚಿನ ಒತ್ತಡದ ಸಂದರ್ಭಗಳನ್ನು ನಿಭಾಯಿಸುವುದಕ್ಕಾಗಿಯೇ ಡ್ಯುಯಲ್ ಫ್ಯಾನ್‌ಗಳನ್ನು ಸಹ ಒಳಗೊಂಡಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಟು-ಇನ್-ಒನ್ ಫಿಂಗರ್‌ಪ್ರಿಂಟ್ ಪವರ್ ಬಟನ್ ಅನ್ನು ಒಳಗೊಂಡಿದೆ. ಇದು ಸ್ಟಾರ್ರಿ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ಬಿಗ್‌ ಟಚ್‌ಪ್ಯಾಡ್‌ನೊಂದಿಗೆ ಬರಲಿದೆ. ಇದರಲ್ಲಿ ಆಡಿಯೊಗಾಗಿ ಒಟ್ಟು ಆರು ಸ್ಪೀಕರ್‌ಗಳನ್ನು ಹೊಂದಿದ್ದು, DTS:X ಅಲ್ಟ್ರಾ ಸಿನಿಮೀಯ ಸೌಂಡ್‌ ಸಿಸ್ಟಂಗೆ ಬೆಂಬಲವನ್ನು ನೀಡಲಿದೆ. ಇದಲ್ಲದೆ ಕಾನ್ಫರೆನ್ಸ್ ಕರೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಲ್ಯಾಪ್‌ಟಾಪ್ AI ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಟೆಕ್ನಾಲಜಿಯೊಂದಿಗೆ ಡ್ಯುಯಲ್ ಮೈಕ್ ಅನ್ನು ಹೊಂದಿದೆ. ಅಲ್ಲದೆ AI ಆಂಟಿ-ಪೀಪ್ ಡಿಟೆಕ್ಷನ್‌ನಂತಹ ಅಪ್ಡೇಟ್‌ ಫೀಚರ್ಸ್‌ಗಳೊಂದಿಗೆ ಸ್ಮಾರ್ಟ್ AI ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಲ್ಯಾಪ್‌ಟಾಪ್‌

ಟೆಕ್ನೋ ಮೆಗಾಬುಕ್‌ S1 ಲ್ಯಾಪ್‌ಟಾಪ್‌ 70Whr ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 12 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬ್ಯಾಟರಿಯನ್ನು 65W GaN ವೇಗದ ಚಾರ್ಜರ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6 ಮತ್ತು ಏಳು ಪೋರ್ಟ್‌ಗಳನ್ನು ಹೊಂದಿದೆ. ಇದರಲ್ಲಿ TF ಕಾರ್ಡ್ ರೀಡರ್, 3.5mm ಜ್ಯಾಕ್, ಎರಡು USB 3.1-A ಪೋರ್ಟ್‌ಗಳು, USB 4.0 ಪೋರ್ಟ್, HDMI 2.0 ಪೋರ್ಟ್ ಮತ್ತು USB ಟೈಪ್- ಸಿ ಪೋರ್ಟ್‌ಗಳು ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೆಗಾಬುಕ್‌ S1 ಲ್ಯಾಪ್‌ಟಾಪ್‌ 16GB RAM ಮತ್ತು 1TB SSD ಸ್ಟೋರೇಜ್‌ ರೂಪಾಂತರದ ಆಯ್ಕೆಯು 1599 USD (ಅಂದಾಜು 1,31,770ರೂ.) ಆದರೆ 16GB RAM ಮತ್ತು 512GB ಸ್ಟೋರೇಜ್‌ ರೂಪಾಂತರದ ಆಯ್ಕೆಯ ಬೆಲೆ 14909 USD (ಅಂದಾಜು 3,000ರೂ.)ಬರಲಿದೆ. ಆದರೆ ಈ ಲ್ಯಾಪ್‌ಟಾಪ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Tecno Megabook S1 laptop with two-in-one fingerprint power button Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+