ಎಂಟ್ರಿ ಕೊಟ್ಟೆ ಬಿಡ್ತು ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್! ಇದರ ವಿನ್ಯಾಸವೇ ಫುಲ್ ಡಿಫ್‌ರೆಂಟ್!
ಜನಪ್ರಿಯ ಟೆಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಟೆಕ್ನೋ ಕಂಪೆನಿ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಈಗಾಗಲೇ ಟೀಸರ್, ಫೀಚರ್ಸ್ ರಿಲೀಸ್ ಮೂಲಕ ಸದ್ದು ಮಾಡಿದ್ದ ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಈ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಲ್ಯಾಪ್‌ಟಾಪ್ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಲ್ಯಾಪ್‌ಟಾಪ್ ಪ್ರೀಮಿಯಂ ಲುಕ್ ಮತ್ತು ಅಲ್ಯೂಮಿನಿಯಂ ಮೆಟಲ್ ಬಾಡಿಯನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ ಯಾವೆಲ್ಲಾ ಫಿಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಮೆಗಾಬುಕ್ T1 ಫೀಚರ್ಸ್ ಹೇಗಿದೆ?
ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್ 15.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಡಿಸ್‌ಪ್ಲೇ 100% sRGB ಬಣ್ಣದ ಗ್ಯಾಮಟ್ ಕವರೇಜ್ ಮತ್ತು 350ನೀಟ್ಸ್ ಬ್ರೈಟ್‌ನೆಸ್‌ನೊಂದಿಗೆ ಎದ್ದುಕಾಣುವ ದೃಶ್ಯಗಳನ್ನು ನೀಡುತ್ತದೆ. ಇದರ ನಯವಾದ ವಿನ್ಯಾಸವು ಕೇವಲ 14.8mm ದಪ್ಪವನ್ನು ಹೊಂದಿದ್ದು, ಪ್ರೀಮಿಯಂ ಲುಕ್ ಹಾಗೂ ಅಲ್ಯೂಮಿನಿಯಂ ಮೆಟಲ್ ಬಾಡಿಯನ್ನು ಹೊಂದಿದೆ.
ಇನ್ನು ಈ ಲ್ಯಾಪ್‌ಟಾಪ್ ಅನ್ನು ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅದರಂತೆ DC ಅಡಾಪ್ಟಿವ್ ಡಿಮ್ಮಿಂಗ್ ತಂತ್ರಜ್ಞಾನ ಮತ್ತು TÜV ಐ ಕಂಫರ್ಟ್ ಪ್ರಮಾಣೀಕರಣವನ್ನು ಒಳಗೊಂಡಿದೆ. ಇದಲ್ಲದೆ 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 512GB ಅಥವಾ 1TB SSD ಯೊಂದಿಗೆ 8GB, 12GB, ಅಥವಾ 16GB RAM ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.
ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್ 70Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 17.5 ಗಂಟೆಗಳ ಬಾಳಿಕೆಯನ್ನು ನೀಡಲಾಗಿದೆ. ಇದು 65W ನೆಕ್ಸ್ಟ್-ಜೆನ್ GaN ಚಾರ್ಜರ್‌ನೊಂದಿಗೆ ಬರಲಿದೆ. ಇನ್ನು ಲ್ಯಾಪ್‌ಟಾಪ್ ಸ್ಟಾರ್ರಿ ಬ್ಯಾಕ್‌ಲಿಟ್ ಕೀಬೋರ್ಡ್ ಹೊಂದಿದೆ. ಇದರ ಸುರಕ್ಷಿತ ಲಾಗಿನ್‌ಗಾಗಿ ಸಂಯೋಜಿತ 2MP ಫಿಸಿಕಲ್ ಪ್ರೈವೆಸಿ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಪವರ್ ಬಟನ್‌ನೊಂದಿಗೆ ಬರಲಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಲ್ಯಾಪ್‌ಟಾಪ್ TF ಕಾರ್ಡ್ ರೀಡರ್, ಎರಡು USB 3.0 ಪೋರ್ಟ್‌ಗಳು, ಒಂದು USB 3.1 ಪೋರ್ಟ್, ಎರಡು Type-C ಪೋರ್ಟ್‌ಗಳು, HDMI ಪೋರ್ಟ್, 3.5mm ಆಡಿಯೋ ಜ್ಯಾಕ್ ಮತ್ತು ರೀಸೆಟ್ ಬಟನ್ ಸೇರಿದಂತೆ ವಿವಿಧ ಪೋರ್ಟ್‌ಗಳನ್ನು ಹೊಂದಿದೆ. ಇದಲ್ಲದೆ ಮೆಗಾಬುಕ್ T1 ಪೋರ್ಟಬಲ್ ಆಗಿದೆ. ಇದು ವಿದ್ಯಾರ್ಥಿಗಳಿಗೆ ಸೂಕ್ತವಾದ ಆಯ್ಕೆ ಎನಿಸಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಟೆಕ್ನೋ ಮೆಗಾಬುಕ್ T1 ಲ್ಯಾಪ್‌ಟಾಪ್ ಇಂಟೆಲ್ ಕೋರ್ i7, 16GB RAM, 1TB SSD ಆಯ್ಕೆಗೆ 59,999ರೂ ಬೆಲೆ ಹೊಂದಿದೆ. ಇದು ಡೆನಿಮ್ ಬ್ಲೂ, ಸ್ಪೇಸ್ ಗ್ರೇ ಮತ್ತು ಮೂನ್‌ಶೈನ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಲಭ್ಯವಿದೆ.
ಇನ್ನು ಇದರ ಇಂಟೆಲ್ ಕೋರ್ i5, 16GB RAM, 512GB SSD ಆಯ್ಕೆಯ ಬೆಲೆ 49,999ರೂ ಆಗಿದೆ.
ಇಂಟೆಲ್ ಕೋರ್ i3, 8GB RAM, 512GB SSD ಸ್ಟೋರೇಜ್ ಆಯ್ಕೆಯ ಬೆಲೆ 39,999ರೂ ಆಗಿದೆ. ಇದು ಸ್ಪೇಸ್ ಗ್ರೇ ಮತ್ತು ಮೂನ್‌ಶೈನ್ ಸಿಲ್ವರ್‌ನಲ್ಲಿ ಲಭ್ಯವಿದೆ.


Click it and Unblock the Notifications








