Home
ಸುದ್ದಿಜಾಲ

ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G! ಅಚ್ಚರಿಯ ವಿನ್ಯಾಸ!

ಕೆಲ ದಿನಗಳಿಂದ ಭಾರಿ ಸಂಚಲನ ಮೂಡಿಸಿದ್ದ ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಟೆಕ್ನೋ ಕಂಪೆನಿಯ ಎರಡನೇ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಆಗಿದೆ. ಇನ್ನು ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ ವೃತ್ತಾಕಾರದ ಔಟರ್‌ ಡಿಸ್‌ಪ್ಲೇಯೊಂದಿಗೆ ಬರುತ್ತದೆ.

ಹೌದು, ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ. ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G! ಅಚ್ಚರಿಯ ವಿನ್ಯಾಸ!

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಡಿಸ್‌ಪ್ಲೇ ವಿಶೇಷ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ 6.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 1000 ನೀಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಇದಲ್ಲದೆ 1.32 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕವರ್‌ ಡಿಸ್‌ಪ್ಲೇ ಮೂಲಕವೇ ಬಳಕೆದಾರರು ಸಂದೇಶಗಳಿಗೆ ರಿಪ್ಲೇ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಪ್ರೊಸೆಸರ್‌ ಯಾವುದು?
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Arm Mali-G77 GPU ಸಪೊರ್ಟ್‌ ಪಡೆದಿದ್ದು, ಆಂಡ್ರಾಯ್ಡ್‌ 13.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಅನ್ನು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ 16GB ವರೆಗೆ ವರ್ಚುವಲ್‌ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದು ಕ್ವಾಡ್ ಫ್ಲ್ಯಾಶ್‌ಲೈಟ್ ಯೂನಿಟ್‌ನೊಂದಿಗೆ ಬರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಬ್ಯಾಟರಿ ಮತ್ತು ಇತರೆ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಜೊತೆಗೆ ಎಲ್ಲಾ GPT 3.0 ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಸ್ಮಾರ್ಟ್‌ಫೋನ್‌ ಅನ್ನು ನೀವು ಫೋಲ್ಡ್‌ ಮಾಡಿದಾಗ 88.77mm x 74.05mm x 14.95mm ಗಾತ್ರದಲ್ಲಿರಲಿದೆ.

ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಬೆಲೆ ಮತ್ತು ಲಭ್ಯತೆ
ಟೆಕ್ನೋ ಫ್ಯಾಂಟಮ್‌ V ಫ್ಲಿಪ್ 5G ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್‌ ಆಯ್ಕೆಗೆ ಭಾರತದಲ್ಲಿ 49,999ರೂ ಬೆಲೆಯನ್ನು ಹೊಂದಿದೆ. ಇದು ಐಕಾನಿಕ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಡಾನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಅಮೆಜಾನ್‌ನಲ್ಲಿ ಇದೇ ಅಕ್ಟೋಬರ್ 1 ರಂದು 12PM ಗಂಟೆಯ ನಂತರ ಖರೀದಿಸಬಹುದಾಗಿದೆ.

Best Mobiles in India

English summary
Tecno Phantom V Flip 5G Launched in India: Price and Specifications details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+