ಕೇವಲ 34,999 ರೂ.! ಇಂದು ಎರಡು ಸೊಗಸಾದ Tecno ಫೋನ್ ಮಾರಾಟ; ಅಬ್ಬಾ..! ಎಂಥಾ ಫೀಚರ್ಸ್
ಟೆಕ್ನೋ ಇತ್ತೀಚೆಗೆ ಹೊಸ ಫೋಲ್ಡಬಲ್ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇವು ಟೆಕ್ನೋ ಫ್ಯಾಂಟಮ್ V ಫ್ಲಿಪ್ 2 (Tecno Phantom V Flip2) ಮತ್ತು ಫ್ಯಾಂಟಮ್ V ಫೋಲ್ಡ್ 2 (Tecno Phantom V Fold2) ಹೆಸರಿನೊಂದಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಅಂದಹಾಗೆ, ಈ ಮೊಬೈಲ್‌ಗಳು ಇಂದು (ಡಿಸೆಂಬರ್ 13) ತನ್ನ ಮೊದಲ ಮಾರಾಟವನ್ನು ಶುರು ಮಾಡಲಿವೆ. ಬನ್ನಿ, ಇವುಗಳ ಬೆಲೆ, ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಟೆಕ್ನೋ ತನ್ನ 'ಫ್ಯಾಂಟಮ್ V' (Phantom V) ಸರಣಿಯಲ್ಲಿ ಈ ಬಜೆಟ್ ಸ್ನೇಹಿ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಮೊಬೈಲ್‌ಗಳು ದೇಶದ ಅತ್ಯಂತ ಸರಳ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾಗಿವೆ. 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಈ ಮೊಬೈಲ್ ಮಾರಾಟವಾಗಲಿದೆ. ಎರಡು ಮೊಬೈಲ್‌ಗಳಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಫೋಲ್ಡ್ ಫೋನ್ 5750mAh ಬ್ಯಾಟರಿ ಮತ್ತು ಫ್ಲಿಪ್ ಫೋನ್ 4720mAh ಬ್ಯಾಟರಿ ಹೊಂದಿದೆ. ಹಾಗೆಯೇ 7.85 ಇಂಚಿನ ಡಿಸ್ಪ್ಲೇ ಮತ್ತು 6.9 ಇಂಚಿನ ಡಿಸ್ಪ್ಲೇ ಹೊಂದಿವೆ.

ಹೊಸ ಫೋಲ್ಡಬಲ್ ಮೊಬೈಲ್‌ಗಳ ಬೆಲೆ ಮತ್ತು ಲಭ್ಯತೆ
ಟೆಕ್ನೋ ಎರಡೂ ಮೊಬೈಲ್‌ಗಳನ್ನು ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವು 34,999 ರೂ.ಗೆ ಬಿಡುಗಡೆಯಾಗಿದೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನಿನ 12GB RAM + 512GB ಸ್ಟೋರೇಜ್ ಆಯ್ಕೆಯು 79,999 ರೂ.ಗೆ ಮಾರಾಟವಾಗಲಿದೆ. ನೀವು ಟ್ರಾವರ್ಟೈನ್ ಗ್ರೀನ್ ಮತ್ತು ಮೂಂಡಸ್ಟ್ ಗ್ರೇ ಬಣ್ಣಗಳಲ್ಲಿ ಕೊಳ್ಳಬಹುದು. ಇಂದು (ಡಿಸೆಂಬರ್ 13) ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಮೂಲಕ ಮಾರಾಟ ಶುರುವಾಗಲಿದೆ.
ಹೊಸ ಫೋಲ್ಡಬಲ್ ಫೋನ್‌ಗಳ ಫೀಚರ್ಸ್
ದೊಡ್ಡ ಡಿಸ್ಪ್ಲೇ
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 7.85 ಇಂಚಿನ 2K+ ಅಮೋಲೆಡ್ ಮುಖ್ಯ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 6.45 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಕವರ್ ಡಿಸ್ಪ್ಲೇ ಲಭ್ಯವಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದರಲ್ಲಿ 3.64 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಲಭ್ಯವಿದೆ.
ಶಕ್ತಿಶಾಲಿ ಮೀಡಿಯಾಟೆಕ್ ಪ್ರೊಸೆಸರ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9000 + ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ.
ಬೃಹತ್ ಸ್ಟೋರೇಜ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಸ್ಮಾರ್ಟ್‌ಫೋನ್ 12GB RAM ಜೊತೆಗೆ 512GB ಸ್ಟೋರೇಜ್ ಆಯ್ಕೆ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಟ್ರಿಪಲ್ ಕ್ಯಾಮೆರಾ ಸೆಟಪ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇದೆ. ಈ ಮೊಬೈಲ್ ಎರಡು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸಹ 32 ಮೆಗಾಪಿಕ್ಸೆಲ್ ಸೆಲ್ಫಿ ಇದೆ.
ಸುಧೀರ್ಘ ಬ್ಯಾಟರಿ ಬ್ಯಾಕಪ್
ಟೆಕ್ನೋ ಫೋಲ್ಡ್ 2 ಮೊಬೈಲ್ 5750mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು, 70W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಟೆಕ್ನೋ ಫ್ಲಿಪ್ ಮೊಬೈಲ್ 4720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಫಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಹೊಸ ಟೆಕ್ನೋ ಫೋಲ್ಡಬಲ್ ಮೊಬೈಲ್‌ಗಳು ಹಲವು ಎಐ (AI) ಕ್ಯಾಮೆರಾಗಳನ್ನು ಹೊಂದಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇವು ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








