Tecno: ಭಾರತಕ್ಕೆ ಬರ್ತಿದೆ ದೈತ್ಯ ಫೋನ್; 512GB ಸ್ಟೋರೇಜ್.. ಟ್ರಿಪಲ್ 50MP ಕ್ಯಾಮೆರಾ.. ಲಾಂಚ್ ಯಾವಾಗ?
ಫೋಲ್ಡಬಲ್ ಮೊಬೈಲ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ಶೀಘ್ರದಲ್ಲಿಯೇ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೌದು, ಟೆಕ್ನೋ (Tecno) ಕಂಪನಿಯು ಕಳೆದ ತಿಂಗಳಷ್ಟೇ ತನ್ನ ಎರಡು ಹೊಸ ಫೋಲ್ಡಬಲ್ ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳು, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 (Tecno Phantom V Fold 2) ಮತ್ತು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 (Tecno Phantom V Flip2) ಎಂಬ ಹೆಸರುಗಳೊಂದಿಗೆ ಬಂದಿವೆ. ಇದರಲ್ಲಿ ವಿ ಫೋಲ್ಡ್ 2 ಭಾರತಕ್ಕೆ ಲಗ್ಗೆ ಇಡಲು ಸಜ್ಜಾಗಿದೆ.
ಹೌದು, ಕಂಪನಿಯು ಸಾಮಾಜಿಕ ಜಾಲತಾಣದಲ್ಲಿ ಭಾರತದ ಬಿಡುಗಡೆ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೊಬೈಲ್ ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ 7.85 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಮತ್ತು 6.45 ಇಂಚಿನ ಕವರ್ ಡಿಸ್ಪ್ಲೇ ಲಭ್ಯವಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ಲಸ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ, ಟ್ರಿಪಲ್ ಕ್ಯಾಮೆರಾ ಸೆಟಪ್, 50 ಮೆಗಾಪಿಕ್ಸೆಲ್ ಕ್ಯಾಮೆರಾ, 70W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳು ಲಭ್ಯವಿರಲಿದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಬಿಡುಗಡೆ ಯಾವಾಗ?
ಕಂಪನಿಯು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನಿನ ಭಾರತ ಬಿಡುಗಡೆಯನ್ನು ಖಚಿತಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುಳಿವು ನೀಡಿದೆ. ಕಂಪನಿಯ ಅಧಿಕೃತ ಟೀಸರ್‌ನಲ್ಲಿ 'ಶೀಘ್ರದಲ್ಲೇ ಹೊಸ ಅಧ್ಯಾಯವು ತೆರೆದುಕೊಳ್ಳುತ್ತದೆ' ಎಂದು ಬರೆಯಲಾಗಿದೆ. ಈ ಮೂಲಕ ಫ್ಯಾಂಟಮ್ ವಿ ಫೋಲ್ಡ್ 2 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಂದು ದೃಢಪಡಿಸಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನ್ 7.85 ಇಂಚಿನ LTPO ಅಮೋಲೆಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರಲಿದೆ. ಜೊತೆಗೆ, 6.45 ಇಂಚಿನ ಕವರ್ ಡಿಸ್ಪ್ಲೇ ಇರಲಿದೆ. ಇದು LTPO ಅಮೋಲೆಡ್ ಡಿಸ್ಪ್ಲೇ ಆಗಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ಫೋಲ್ಡಬಲ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ಲಸ್ ಪ್ರೊಸೆಸರ್ ಹೊಂದಿರಲಿದೆ. ಇದು 3.2 GHz ವರೆಗೆ ಹೆಚ್ಚಿನ ಗಡಿಯಾರದ ವೇಗವನ್ನು ಹೊಂದಿದೆ. ಈ ಮೊಬೈಲ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ.

ಕ್ಯಾಮೆರಾ ಸೆಟಪ್
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. 2x ಆಪ್ಟಿಕಲ್ ಜೂಮ್ ಜೊತೆಗೆ 50 ಮೆಗಾಪಿಕ್ಸೆಲ್ ಪೋಟ್ರೇಟ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಎರಡು 32 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 ಫೋನನ್ನು 5,750mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದನ್ನು ಚಾರ್ಜ್ ಮಾಡಲು, 70W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗುವುದು. ಜೊತೆಗೆ, 15W ವೈರ್‌ಲೆಸ್ ಚಾರ್ಜಿಂಗ್ ಕೂಡ ಇರಲಿದೆ.
ಇತರೆ ವೈಶಿಷ್ಟ್ಯಗಳು
ಈ ಫೋಲ್ಡ್ ಫೋನ್ ತೆರೆದಾಗ 159 x 160.35 x 5.52 ಎಂಎಂ ಮತ್ತು ಮಡಿಸಿದಾಗ 159 x 72.16 x 11.78 ಎಂಎಂ ಅಳತೆ ಹೊಂದಿದೆ. ಜೊತೆಗೆ, 249 ಗ್ರಾಂ ತೂಕ ಹೊಂದಿರಲಿದೆ. ಈ ಫೋನಿನಲ್ಲಿ ಹಲವು ಎಐ (AI) ಕ್ಯಾಮೆರಾಗಳು ಮತ್ತು ಇತರೆ ವೈಶಿಷ್ಟ್ಯಗಳು ಇರಲಿವೆ. ಇದು ಡ್ಯುಯಲ್ ಸಿಮ್ 5G, 4G ವೈಫೈ 6E, ಬ್ಲೂಟೂತ್ 5.3 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








