Home
ಸುದ್ದಿಜಾಲ

Tecno: ಫ್ಯಾಂಟಮ್ ವಿ2 ಫ್ಲಿಪ್ ಸ್ಮಾರ್ಟ್‌ಫೋನ್ ಸಿದ್ದಪಡಿಸಲು ಮುಂದಾದ ಟೆಕ್ನೋ ! ನಿರೀಕ್ಷಿತ ಫೀಚರ್ಸ್‌ ಏನಿರಲಿವೆ ?

ಟೆಕ್ನೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವಿದೆ. ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ ಕಂಪೆನಿ ಇದೀಗ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಒಂದನ್ನು ಈ ವರ್ಷದ ನಂತರ ಲಾಂಚ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಸಂಸ್ಥೆ ಯಾವುದೇ ನಿಖರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಆದರೂ ಕಳೆದ ವರ್ಷ ಸೆಪ್ಟಬರ್‌ನಲ್ಲಿ ಬಿಡುಗಡೆಯಾದ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್‌ನ (Tecno Phantom v Flip) ಮುಂದುವರೆದ ಸರಣಿಯನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Tecno Phantom V2 Flip ಹೆಸರಿನ ಸ್ಮಾರ್ಟ್‌ಫೋನ್ ಸಿದ್ದಪಡಿಸಲು ಕೆಲಸ ಆರಂಭಿಸಿದ್ದು, ಈ ವರ್ಷದ ನಂತರ ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗುತ್ತಿದೆ ಆದರೆ ಈ ಕುರಿತು ಕಂಪನಿಯು ನಿರೀಕ್ಷಿತ ಕ್ಲಾಮ್‌ಶೆಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಕುರಿತಾದ ಯಾವುದೇ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಪ್ರಸ್ತುತ ಲಭ್ಯವಿರುವ ಫ್ಲಿಪ್ ಮಾದರಿಯಲ್ಲಿ ಕೆಲವು ಗಮನಾರ್ಹ ಅಪ್ಡೇಟ್‌ಗಳ ಮೂಲಕ ಬರುವ ನಿರೀಕ್ಷೆ ಇದೆ. ಈ ಸ್ಮಾರ್ಟ್‌ಫೋನ್‌ ಕುರಿತು ಅನೇಕ ಪ್ರಮಾಣೀಕೃತ ಮತ್ತು ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸುತ್ತಿವೆ. ವಿನ್ಯಾಸ, ಚಿಪ್‌ಸೆಟ್, ಆಯಾಮಗಳು, ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳನ್ನು ಒಳಗೊಂಡಂತೆ ಅದರ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ವೆಬ್‌ಸೈಟ್‌ಗಳು ಸುಳಿವು ನೀಡಿವೆ.

Tecno: ಫ್ಯಾಂಟಮ್ ವಿ2 ಫ್ಲಿಪ್ ಸ್ಮಾರ್ಟ್‌ಫೋನ್ ಸಿದ್ದಪಡಿಸಲು ಮುಂದಾದ ಟೆಕ್ನೋ!

Tecno Phantom V2 Flip ನಿರೀಕ್ಷಿತ ಫೀಚರ್ಸ್‌:

ಈ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಮಾದರಿ ಸಂಖ್ಯೆ AE11 ಹೊಂದಿರುವ ಹ್ಯಾಂಡ್‌ಸೆಟ್‌ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಈ ವೆಬ್‌ಸೈಟ್ ಹ್ಯಾಂಡ್‌ಸೆಟ್ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಆಗಿರಲಿದೆ ಎಂದು ಸೂಚಿಸಿದೆ. ಈ ನಿರೀಕ್ಷಿತ ಮೊಬೈಲ್ 3,410mAh ಮತ್ತು 1,180mAh ಸಾಮರ್ಥ್ಯದ ಡ್ಯುಯಲ್ ಸೆಲ್ ಬ್ಯಾಟರಿ ಹೊಂದಿರಲಿದೆ ಎಂದು FCC ತನ್ನ ವೆಬ್‌ಸೈಟ್‌ನಲ್ಲಿ ದಾಖಲಿಸಿದೆ. ನಿರೀಕ್ಷಿತ ಹ್ಯಾಂಡ್‌ಸೆಟ್ 4,590mAh ಬ್ಯಾಟರಿ ಹೊಂದಿರಬಹುದು ಎಂದು ವೆಬ್‌ಸೈಟ್ ಸೂಚಿಸುತ್ತದೆ, ಇದು ಈ ಹಿಂದಿನ ಫೋನ್‌ನ ಬ್ಯಾಟರಿಗಿಂತ ಸುಮಾರು 15 ಪ್ರತಿಶತ ದೊಡ್ಡದಾಗಿರಲಿದೆ.

ಪಟ್ಟಿಯ ಪ್ರಕಾರ Tecno Phantom V2 Flip ಸ್ಮಾರ್ಟ್‌ಫೋನ್, 70W ವೇಗದ ಚಾರ್ಜರ್, ಫೋನ್ ಓಪನ್‌ ಮಾಡಿದಾಗ 170 x 74 x 8mm ಗಾತ್ರವನ್ನು ಮತ್ತು ಮಡಿಚಿದಾಗ 85 x 74 x 16mm ಗಾತ್ರವನ್ನು ಹೊಂದಿರಲಿದೆ ಎಂದು ಸೂಚಿಸಿದೆ. ಇದು 8GB + 256GB ಕಾನ್ಫಿಗರೇಶನ್‌ನಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

Tecno Phantom V2 ಫ್ಲಿಪ್ ನಿರೀಕ್ಷಿತ ವಿನ್ಯಾಸ:

ಮೇಲೆ ತಿಳಿಸಿದ FCC ಪಟ್ಟಿಯಲ್ಲಿರುವ Tecno Phantom V2 Flip ಮೊಬೈಲ್‌ ಕುರಿತಾದ ರೇಖಾಚಿತ್ರವು ವಿನ್ಯಾಸದ ಕುರಿತು ಸುಳಿವು ನೀಡಿದೆ. ಅದರ ಅಂಚುಗಳ ಉದ್ದಕ್ಕೂ ಕ್ಯಾಮರಾ ಮತ್ತು ಫ್ಲ್ಯಾಷ್ ಘಟಕಗಳೊಂದಿಗೆ ವೃತ್ತಾಕಾರದ ಕವರ್ ಡಿಸ್‌ಪ್ಲೇ ವಿರುದ್ಧವಾಗಿ ಆಯತಾಕಾರದ ಹೊರಗಿನ ಡಿಸ್‌ಪ್ಲೇಯನ್ನು ಹೊಂದಿರಬಹುದು. ಕವರ್ ಪರದೆಯೊಳಗೆ ಕ್ಯಾಮೆರಾ ಮತ್ತು ಫ್ಲ್ಯಾಷ್ ಘಟಕಗಳು ಮೇಲಿನ ಎಡಭಾಗದಲ್ಲಿ ಲಂಬವಾಗಿ ಜೋಡಿಸಲ್ಪಟ್ಟಿರಲಿವೆ ಎಂದು ಹೇಳಲಾಗುತ್ತಿದೆ.

ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ವಿಶೇಷತೆಗಳು:

ಈಗಿರುವ Tecno Phantom V ಫ್ಲಿಪ್ 6.9 ಇಂಚಿನ ಫುಲ್ HD+ AMOLED ಒಳ ಪರದೆ ಮತ್ತು 1.32 ಇಂಚಿನ ವೃತ್ತಾಕಾರದ AMOLED ಕವರ್ ಪ್ಯಾನೆಲ್‌ ಹೊಂದಿದೆ. ಇದು MediaTek ಡೈಮೆನ್ಸಿಟಿ 8050 SoC ನಿಂದ ಚಾಲಿತವಾಗಿದೆ ಮತ್ತು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,000mAh ಬ್ಯಾಟರಿಯಿಂದ ಬೆಂಬಲ ಪಡೆದುಕೊಂಡಿದೆ.

ಕ್ಯಾಮೆರಾ ವಿಷಯದಲ್ಲಿ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕ ಹೊಂದಿದೆ, ಇದು 64MP ಪ್ರಾಥಮಿಕ ಸೆನ್ಸಾರ್ ಮತ್ತು 13MP ವೈಡ್ ಆಂಗಲ್ ಶೂಟರ್ ಅನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು 32MP ಸೆನ್ಸಾರ್ ಹೊಂದಿದೆ.

Best Mobiles in India

English summary
The Tecno Phantom V2 Flip smartphone is rumored to hit the market after this year. But the company is yet to reveal any details about the expected clamshell foldable smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+