ಹೊಸ ವರ್ಷದ ಸಂಭ್ರಮಕ್ಕೆ ಭರ್ಜರಿ ಎಂಟ್ರಿ ನೀಡಿದ ಟೆಕ್ನೋ ಫ್ಯಾಂಟಮ್ X2 5G !
ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಟೆಕ್ನೋ ಫ್ಯಾಂಟಮ್ X2 5G ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ HiOS 12.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುವ 6.8 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ಹೌದು, ಟೆಕ್ನೋ ಕಂಪೆನಿ ಭಾರತದಲ್ಲಿ ಹೊಸದಾಗಿ ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ, ಇದು 45W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ 6.8 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 93.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ 4nm ಮೀಡಿಯಾಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಜೊತೆಗೆ ಮಾಲಿ-G710 MC10 GPU ಸಪೋರ್ಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12-ಆಧಾರಿತ HiOS 12.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಒಳಗೊಂಡಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ , ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ, ಇದು 45W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದರಿಂದ ಫೋನ್ ಅನ್ನು ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 2.4G, 5G & Wi-Fi 6, ಬ್ಲೂಟೂತ್ 5.3, GPS, OTG, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ದಿಕ್ಸೂಚಿ, ಆರು-ಆಕ್ಸಿಸ್ ಗೈರೋ ಸೆನ್ಸಾರ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಟೆಕ್ನೋ ಫ್ಯಾಂಟಮ್ X2 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಪ್ರಸ್ತುತ ರಿಯಾಯಿಯಿತಿಯನ್ನು ಪಡೆದುಕೊಂಡಿದ್ದು, ಅಮೆಜಾನ್‌ನಲ್ಲಿ 39,999 ರೂ.ಬೆಲೆಯಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೊನ್ ಇದೀಗ ಅಮೆಜಾನ್‌ನಲ್ಲಿ ಫ್ರೀ ಆರ್ಡರ್‌ಗೆ ಲಭ್ಯವಿದೆ. ಇದು ಇದೇ ಜನವರಿ 9 ರಿಂದ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಮೂನ್‌ಲೈಟ್ ಸಿಲ್ವರ್ ಮತ್ತು ಸ್ಟಾರ್‌ಡಸ್ಟ್ ಗ್ರೇ ಕಲರ್ ಆಯ್ಕೆಗಳಲ್ಲಿ ಬರಲಿದೆ.


Click it and Unblock the Notifications








