Home
ಸುದ್ದಿಜಾಲ

ಭಾರತದಲ್ಲಿ ಅಗ್ಗದ ಬೆಲೆಯ ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ಬಿಡುಗಡೆ!

ಟೆಕ್‌ ಮಾರುಕಟ್ಟೆಯಲ್ಲಿ ಟೆಕ್ನೋ ಕಂಪೆನಿ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸಿದೆ. ಸದ್ಯ ಇದೀಗ ತನ್ನ ಪಾಪ್‌ ಸರಣಿಯಲ್ಲಿ ಹೊಸ ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 14 ಪ್ರಾದೇಶಿಕ ಭಾಷಾ ಬೆಂಬಲದೊಂದಿಗೆ ಬರುತ್ತದೆ ಎಂದು ಟೆಕ್ನೋ ಕಂಪೆನಿ ಹೇಳಿದೆ.

ಟೆಕ್ನೋ ಪಾಪ್‌ 5 LTE

ಹೌದು, ಟೆಕ್ನೋ ಕಂಪೆನಿ ಭಾರತದಲ್ಲಿ ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಡಾಟ್‌ ನಾಚ್‌ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಿಡ್ಸ್ ಮೋಡ್, ಸಾಮಾಜಿಕ, ಟರ್ಬೊ, ಡಾರ್ಕ್ ಥೀಮ್‌ಗಳು, ಪೇರೆಂಟ್‌ ಕಂಟ್ರೋಲ್‌, ಡಿಜಿಟಲ್ ಯೋಗಕ್ಷೇಮ, ಗೆಸ್ಚರ್ ಕಾಲ್ ಪಿಕ್ಕರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಪಾಪ್ 5 LTE ಸ್ಮಾರ್ಟ್‌ಫೋನ್‌ 720x1,560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ HD+ IPS LCD ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಡಾಟ್ ನಾಚ್ ಡಿಸ್‌ಪ್ಲೇ ಆಗಿದ್ದು, 480 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಹಾಗೆಯೇ 90% ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಫೋನ್‌ ಆಕ್ಟಾ-ಕೋರ್ Unisoc SC9863 SoC ಪ್ರೊಸೆಸರ್‌ ಹೊಂದಿರಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್‌ 11 Go-ಆಧಾರಿತ HiOS 7.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್‌ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಟೆಕ್ನೋ ಪಾಪ್ 5 LTE ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ f/2.2 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ f/2.4 ಲೆನ್ಸ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ f/2.0 ಲೆನ್ಸ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಮೈಕ್ರೋ ಸ್ಲಿಟ್ ಫ್ಲ್ಯಾಶ್‌ಲೈಟ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v4.2, GPS, FM ರೇಡಿಯೋ, 3.5mm ಹೆಡ್‌ಫೋನ್ ಜ್ಯಾಕ್, ಮೈಕ್ರೋ-USB ಪೋರ್ಟ್, Wi-Fi 802.11 b/g/n, GPRS, 4G LTE ಯನ್ನು ಬೆಂಬಲಿಸಲಿದೆ. ಈ ಫೋನ್‌ ಹಿಂದಿ, ಬೆಂಗಾಲಿ, ಉರ್ದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 14 ಭಾರತೀಯ ಭಾಷೆಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ ಕಿಡ್ಸ್ ಮೋಡ್, ಸಾಮಾಜಿಕ, ಟರ್ಬೊ, ಡಾರ್ಕ್ ಥೀಮ್‌ಗಳು, ಪೇರೆಂಟ್‌ ಕಂಟ್ರೋಲ್‌, ಡಿಜಿಟಲ್ ಯೋಗಕ್ಷೇಮ, ಗೆಸ್ಚರ್ ಕಾಲ್ ಪಿಕ್ಕರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ಬೆಲೆ 6,299ರೂ.ಆಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ ಇಂಡಿಯಾ ಮೂಲಕ ಜನವರಿ 16 ರಿಂದ ಪ್ರಾರಂಭವಾಗುವ ಅಮೆಜಾನ್‌ ವಿಶೇಷ ಸೇಲ್‌ನಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಡೀಪ್‌ ಸೀ ಲ್ಯೂಸ್ಟರ್, ಐಸ್‌ ಬ್ಲೂ ಮತ್ತು Turquoise Cyan ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Tecno Pop 5 LTE was launched in India on Wednesday as the latest addition to the company's Pop Series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+