Home
ಸುದ್ದಿಜಾಲ

ನಾಳೆ ಭಾರತಕ್ಕೆ ಎಂಟ್ರಿ ನೀಡಲಿದೆ ಟೆಕ್ನೋ ಪಾಪ್‌ 7 ಪ್ರೊ! ಏನೆಲ್ಲಾ ನಿರೀಕ್ಷೆ?

ಈಗಾಗಲೇ ತನ್ನ ಸ್ಟೈಲಿಶ್‌ ಲುಕ್‌ ಇಮೇಜ್‌ಗಳ ಮೂಲಕ ಸೌಂಡ್‌ ಮಾಡುತ್ತಿರುವ ಟೆಕ್ನೋ ಪಾಪ್‌ 7 ಪ್ರೊ ಫೋನ್‌ ಬಿಡುಗಡೆಗೆ ವೇದಿಕೆ ಸಿದ್ದವಾಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 16 ರಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ನಾಳೆ ಭಾರತಕ್ಕೆ ಎಂಟ್ರಿ ನೀಡಲಿದೆ ಟೆಕ್ನೋ ಪಾಪ್‌ 7 ಪ್ರೊ! ಏನೆಲ್ಲಾ ನಿರೀಕ್ಷೆ?

ಹೌದು, ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ 3GB/4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಪಾಪ್‌ 7 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ 6.56 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಈ ಡಿಸ್‌ಪ್ಲೇ 83.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಇದಲ್ಲದ ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಮತ್ತು 269ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

ಟೆಕ್ನೋ ಪಾಪ್‌ 7 ಪ್ರೊ ಪ್ರೊಸೆಸರ್‌ ಯಾವುದು?

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಅಯ್ಕೆಯಲ್ಲಿ ಬರಲಿದೆ. ವಿಸ್ತೃತ RAM 2.0 ಫೀಚರ್ಸ್‌ ಮೂಲಕ ಇನ್‌ಬಿಲ್ಟ್‌ ಮೆಮೊರಿಯನ್ನು 7GB ವರೆಗೆ ವಿಸ್ತರಿಸಬಹುದು ಎನ್ನಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಟೆಕ್ನೋ ಪಾಪ್‌ 7 ಪ್ರೊ ಕ್ಯಾಮೆರಾ ಸೆಟ್‌ಅಪ್‌ ವಿವರ

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಡ್ಯುಯಲ್ ಫ್ಲ್ಯಾಷ್ ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ, HDR ಅನ್ನು ಹೊಂದಿರಲಿದೆ ಎನ್ನಲಾಗಿದೆ.

ನಾಳೆ ಭಾರತಕ್ಕೆ ಎಂಟ್ರಿ ನೀಡಲಿದೆ ಟೆಕ್ನೋ ಪಾಪ್‌ 7 ಪ್ರೊ! ಏನೆಲ್ಲಾ ನಿರೀಕ್ಷೆ?

ಟೆಕ್ನೋ ಪಾಪ್‌ 7 ಪ್ರೊ ಬ್ಯಾಟರಿ ಬ್ಯಾಕ್‌ಅಪ್‌ ವಿಶೇಷ

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 10W ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, GPS, Wi-Fi, ಬ್ಲೂಟೂತ್, FM ರೇಡಿಯೋ, USB ಟೈಪ್-C ಪೋರ್ಟ್ ಮತ್ತು OTG ಸೇರಿವೆ. ಜೊತೆಗೆ ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ.

ಟೆಕ್ನೋ ಪಾಪ್‌ 7 ಪ್ರೊ ಬೆಲೆ ನಿರೀಕ್ಷೆ ಏನು?

ಟೆಕ್ನೋ ಪಾಪ್‌ 7 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಫೆಬ್ರವರಿ 16 ರಂದು ಬಿಡುಗಡೆಯಾಗಲಿದೆ. ಇದರ ಬೆಲೆ ಭಾರತದಲ್ಲಿ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಟರ್ಕೋಯಿಸ್ ಸಯಾನ್ ಮತ್ತು ಅಟ್ಲಾಂಟಿಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರುವ ನಿರೀಕ್ಷೆಯಿದೆ.

Best Mobiles in India

English summary
The Tecno Pop 7 Pro features a 6.6-inch HD+ IPS display and is powered by a quad-core chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+