Tecno: ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಪಾಪ್ 8:..ಬೆಲೆ ಕೇವಲ 6,499ರೂ ಮಾತ್ರ!
ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಟೆಕ್ನೋ ಬ್ರ್ಯಾಂಡ್ ನೆಚ್ಚಿನ ಆಯ್ಕೆಯಾಗಿದೆ. ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಟೆಕ್ನೋ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ಅದೇ ಹಾದಿಯಲ್ಲಿ ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಯುನಿಸೋಕ್ T606 SoC ಪ್ರೊಸೆಸರ್ ಹೊಂದಿದೆ.
ಹೌದು, ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇನ್ನು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಡ್ಯುಯಲ್ ಫ್ಲ್ಯಾಷ್ ಯೂನಿಟ್ ಅನ್ನು ಹೊಂದಿದೆ. ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಹಾಗಾದ್ರೆ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್ನೋ ಪಾಪ್ 8 ಡಿಸ್‌ಪ್ಲೇ ರಚನೆ ಹೇಗಿದೆ?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 6.56 ಇಂಚಿನ HD+ ಡಾಟ್-ಇನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇ ಡೈನಾಮಿಕ್ ಪೋರ್ಟ್ ಫೀಚರ್ಸ್‌ನೊಂದಿಗೆ ಬರುತ್ತದೆ. ಇದು ತ್ವರಿತ ಅಧಿಸೂಚನೆಗಳನ್ನು ಒದಗಿಸುವ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಇರುತ್ತದೆ.
ಟೆಕ್ನೋ ಪಾಪ್ 8 ಪ್ರೊಸೆಸರ್ ಯಾವುದು?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ ಯುನಿಸೋಕ್ T606 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 Go ಆವೃತ್ತಿ ಆಧಾರಿತ HiOS 13ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದರೊಂದಿಗೆ RAM ಅನ್ನು ಹೆಚ್ಚುವರಿ 4GB ಯಿಂದ 8GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.

ಟೆಕ್ನೋ ಪಾಪ್ 8 ಕ್ಯಾಮೆರಾ ಸೆಟಪ್ ಏನಿದೆ?
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ AI ಸಹಾಯದ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಂ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ LED ಫ್ಲಾಷ್ ಘಟಕದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಡ್ಯುಯಲ್ ಎಲ್ಇಡಿ ಮೈಕ್ರೋ ಸ್ಲಿಟ್ ಫ್ಲ್ಯಾಷ್‌ಲೈಟ್ ಕೂಡ ಇದೆ.
ಟೆಕ್ನೋ ಪಾಪ್ 8 ಬ್ಯಾಟರಿ ಮತ್ತು ಇತರೆ
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, Wi-Fi 802.11, ಬ್ಲೂಟೂತ್ 5.0, GPS ಮತ್ತು USB ಟೈಪ್-C ಸಂಪರ್ಕವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಇದು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX2 ರೇಟಿಂಗ್‌ನೊಂದಿಗೆ ಬರಲಿದೆ. ಇನ್ನು ಈ ಫೋನ್ ಡಿಟಿಎಸ್ ಬೆಂಬಲಿತ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

ಟೆಕ್ನೋ ಪಾಪ್ 8 ಬೆಲೆ ಮತ್ತು ಲಭ್ಯತೆ
ಟೆಕ್ನೋ ಪಾಪ್ 8 ಸ್ಮಾರ್ಟ್‌ಫೋನ್ 4GB + 64GB ವೇರಿಯಂಟ್ ಆಯ್ಕೆಗೆ 6,499ರೂ ಬೆಲೆಯನ್ನು ಹೊಂದಿದೆ. ಇದೀಗ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳೊಂದಿಗೆ 5,999ರೂ ಬೆಲೆಯಲ್ಲಿ ಸೀಮಿತ ಕೊಡುಗೆಯನ್ನು ಹೊಂದಿದೆ. ಇನ್ನು ಫೋನ್ ಜನವರಿ 9 ರಿಂದ ಅಮೆಜಾನ್ ಮೂಲಕ ಖರೀದಿಸಬಹುದಾಗಿದೆ.


Click it and Unblock the Notifications








