Home
ಸುದ್ದಿಜಾಲ

Tecno Pop 9 5G ಸೇಲ್ ಶುರು: ಇಷ್ಟು ಕಡಿಮೆ ಬೆಲೆಯೇ? ಡಿಸ್ಕೌಂಟ್ ನೋಡಿ

ಟೆಕ್ನೋ (Tecno) ಕಂಪನಿಯು ಇತ್ತೀಚೆಗೆ ಹೊಸ 5G ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದು ಟೆಕ್ನೋ ಪಾಪ್ 9 5G (Tecno Pop 9 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶೇಷವೆಂದರೆ, ಕಂಪನಿಯು ಈ ಫೋನನ್ನು ಅಗ್ಗದ ಬೆಲೆಗೆ ಪರಿಚಯಿಸಿದೆ. ಅಂದಹಾಗೆ, ನೂತನ ಮೊಬೈಲ್ ಇಂದಿನಿಂದ (ಅ.7) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಈ ಮೊಬೈಲ್ ಅನ್ನು ಖರೀದಿಸಬಹುದು. ಮೊದಲ ದಿನವೇ ಖರೀದಿಸಿದರೆ, ಭರ್ಜರಿ ಆಫರ್‌ ಲಭ್ಯವಿದೆ.

ಕಂಪನಿಯು ಟೆಕ್ನೋ ಪಾಪ್ 9 5G (Tecno Pop 9 5G) ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ 48 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಲಭ್ಯವಿದೆ. 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯೋಣ.

Tecno Pop 9 5G ಸೇಲ್ ಶುರು: ಇಷ್ಟು ಕಡಿಮೆ ಬೆಲೆಯೇ? ಡಿಸ್ಕೌಂಟ್ ನೋಡಿ

ಟೆಕ್ನೋ ಪಾಪ್ 9 5G ಬೆಲೆ ಮತ್ತು ರಿಯಾಯಿತಿ

4GB RAM + 64GB = 9,499 ರೂ.
4GB RAM + 128GB = 9,999 ರೂ.

ಆಫರ್‌ ಬೆಲೆ

4GB RAM + 64GB = 8,499 ರೂ.
4GB RAM + 128GB = 8,999 ರೂ.

ಕಂಪನಿಯು ಟೆಕ್ನೋ ಪಾಪ್ 9 5G ಫೋನಿನ 4GB RAM+64GB ಸ್ಟೋರೇಜ್‌ ಆಯ್ಕೆಯನ್ನು 9,499 ರೂ.ಗೆ ಮಾರಾಟ ಮಾಡುತ್ತಿದೆ. 4GB RAM+128GB ಸ್ಟೋರೇಜ್‌ ರೂಪಾಂತರವನ್ನು 9,999 ರೂ. ಬೆಲೆಗೆ ಮಾರಾಟ ಮಾಡಲಿದೆ. ಇದು ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್‌ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಈ ಫೋನನ್ನು ಮಾರಾಟ ಮಾಡುತ್ತಿದೆ.

ಟೆಕ್ನೋ ಪಾಪ್ 9 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ 6.67 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಟೆಕ್ನೋ ಪಾಪ್ 9 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಚಿಪ್‌ಸೆಟ್‌ ಅನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 4GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ, ವಿಸ್ತೃತ RAM ಸಹಾಯದಿಂದ 4GB ಬೆಂಬಲವನ್ನು ಒದಗಿಸಲಾಗಿದೆ. ನೀವು 8GB ವರೆಗೆ ಶಕ್ತಿಯನ್ನು ಬಳಸಬಹುದು.

Tecno Pop 9 5G ಸೇಲ್ ಶುರು: ಇಷ್ಟು ಕಡಿಮೆ ಬೆಲೆಯೇ? ಡಿಸ್ಕೌಂಟ್ ನೋಡಿ

ಕ್ಯಾಮೆರಾ ರಚನೆ

ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್‌ ಅನ್ನ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ರಿಂಗ್ ಎಲ್ಇಡಿ ಲೈಟ್‌ ಒಳಗೊಂಡಿದೆ. ಈ ಫೋನಿನಲ್ಲಿ IMX582 ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಬ್ಯಾಕಪ್‌

ಟೆಕ್ನೋ ಪಾಪ್ 9 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು, 15W ವೇಗದ ಚಾರ್ಜಿಂಗ್ ಬೆಂಬಲವಿದೆ. ಇದು, ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮೋಸ್, ಡ್ಯುಯಲ್ ಸಿಮ್ 5G, Wi-Fi ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
tecno pop 9 5g first sale in india: check price offers, availability, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+