ಟೆಕ್ನೋ ಸಂಸ್ಥೆಯ ಫೋನ್‌ಗೆ ಬರೋಬ್ಬರಿ 36% ಡಿಸ್ಕೌಂಟ್: 128GB ಸ್ಟೋರೇಜ್ ಆಯ್ಕೆ
ಟೆಕ್ನೋ ಕಂಪೆನಿ ಭಾರತದಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಟೆಕ್ನೋ ಸ್ಪಾರ್ಕ್ 10C ಕೂಡ ಒಂದಾಗಿದ್ದು, ವಿಭಿನ್ನ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸದ್ಯ ಇದೀಗ ಈ ಸ್ಮಾರ್ಟ್‌ಫೋನ್ ಅಮೆಜಾನ್ ಸೈಟ್‌ನಲ್ಲಿ 36% ಡಿಸ್ಕೌಂಟ್ ಪಡೆದುಕೊಂಡಿದ್ದು, ಗ್ರಾಹಕರ ಹುಬ್ಬೇರುವಂತೆ ಮಾಡಿದೆ.
ಹೌದು, TECNO Spark 10C ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಬಿಗ್ ಆಫರ್ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್ ಬೆಲೆಯು ಸಾಕಷ್ಟು ಇಳಿಕೆಯಾಗಿದ್ದು, ಮೊಬೈಲ್ ಖರೀದಿಸುವವರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇನ್ನು ಈ ಹೊಸ ಆಫರ್ 8GB RAM ಮತ್ತು 128GB ಇಂಟರ್ ಸ್ಟೋರೆಜ್ ಅಯ್ಕೆಗೆ ಅನ್ವಯವಾಗಲಿದೆ. ಹಾಗಾದ್ರೆ TECNO Spark 10C ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಎಷ್ಟು ಕಡಿಮೆ ಆಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಕೌಂಟ್ ನಂತರದ ಬೆಲೆ ಎಷ್ಟು?
ಟೆಕ್ನೋ ಸ್ಪಾರ್ಕ್ 10C ಸ್ಮಾರ್ಟ್‌ಫೋನಿನ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯು ಅಮೆಜಾನ್ ತಾಣದಲ್ಲಿ 12,499ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ 36% ಡಿಸ್ಕೌಂಟ್ ಪಡೆದುಕೊಂಡಿರುವುದರಿಂದ ಸ್ಮಾರ್ಟ್‌ಫೋನ್ ಬೆಲೆ ಇದೀಗ 7,999ರೂ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಮೇಲೆ ವಿವಿಧ ಬ್ಯಾಂಕ್ ಆಫರ್‌ಗಳು ಕೂಡ ದೊರೆಯುತ್ತಿದೆ. ಇದರಿಂದ ಸ್ಮಾರ್ಟ್‌ಫೋನ್ ಬೆಲೆಯು ಇನ್ನಷ್ಟು ಕಡಿಮೆ ಆಗಲಿದೆ.
ಟೆಕ್ನೋ ಸ್ಪಾರ್ಕ್ 10C ಫೀಚರ್ಸ್ ಹೇಗಿದೆ?
ಟೆಕ್ನೋ ಸ್ಪಾರ್ಕ್ 10C 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್ ಆಗಿದ್ದು, 120 Hz ಟಚ್ ಸ್ಯಾಪ್ಲಿಂಗ್ ರೇಟ್, 84.6% ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಜೊತೆಗೆ 20:9 ರಚನೆಯ ಅನುಪಾತವನ್ನು ಪಡೆದಿದೆ.
ಟೆಕ್ನೋ ಸ್ಪಾರ್ಕ್ 10C ಪ್ರೊಸೆಸರ್ ಯಾವುದು?
ಟೆಕ್ನೋ ಸ್ಪಾರ್ಕ್ 10C ಸ್ಮಾರ್ಟ್‌ಫೋನ್ ಯುನಿಸಾಕ್ T606 (12 nm) ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ವರ್ಚುವಲ್ RAM ಅನ್ನು 16GB ವರೆಗೆ ವಿಸ್ತರಿಸುವ ಆಯ್ಕೆ ಇದೆ.
ಟೆಕ್ನೋ ಸ್ಪಾರ್ಕ್ 10C ಕ್ಯಾಮೆರಾ ಸೆಟಪ್
ಟೆಕ್ನೋ ಸ್ಪಾರ್ಕ್ 10C ಸ್ಮಾರ್ಟ್‌ಫೋನ್ ಟೆಕ್ನೋ ಸಂಸ್ಥೆಯು ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಎರಡನೇ ಕ್ಯಾಮೆರಾ AI ಸೆನ್ಸಾರ್ ಪಡೆದಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಸೆಲ್ಫಿ ಕ್ಯಾಮೆರಾ ಸಹ ನೀಡಲಾಗಿದೆ.

ಟೆಕ್ನೋ ಸ್ಪಾರ್ಕ್ 10C ಬ್ಯಾಟರಿ ಮತ್ತು ಇತರೆ ಸೌಲಭ್ಯ
ಟೆಕ್ನೋ ಸ್ಪಾರ್ಕ್ 10C ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫ್ಲಾಶ್ ಚಾರ್ಜ್ ಸೌಲಭ್ಯ ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.
ಟೆಕ್ನೋ ಸ್ಪಾರ್ಕ್ 10C ಕಲರ್ ಆಯ್ಕೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್ 10C ಸ್ಮಾರ್ಟ್‌ಫೋನ್ ಮ್ಯಾಜಿಕ್ ಸ್ಕಿನ್ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯು 36% ಡಿಸ್ಕೌಂಟ್ ಪಡೆದಿದೆ. ಆದರಿಂದ ಸ್ಮಾರ್ಟ್‌ಫೋನ್ ಅನ್ನು ನೀವು 12,499ರೂ ಗಳಿಗೆ ಬದಲಿಗೆ 7,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








