Home
ಸುದ್ದಿಜಾಲ

ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಅನಾವರಣ!.. ಪ್ರೊಸೆಸರ್‌ ಯಾವುದು?

ಟೆಕ್ನೋ ಕಂಪೆನಿಯ ಸ್ಮಾರ್ಟ್‌ಫೋನ್‌ ಟೆಕ್‌ ವಲಯದಲ್ಲಿ ವಿಶೇಷ ಸ್ಥಾನವಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಸದ್ಯ ಇದೀಗ ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಟೆಕ್ನೋ ಸ್ಪಾರ್ಕ್ 20 ಪ್ಲಾಸ್ಟಿಕ್ ಯುನಿಬಾಡಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೋಲ್-ಪಂಚ್ ವಿನ್ಯಾಸವು ಡೈನಾಮಿಕ್ ಪೋರ್ಟ್ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಅನಾವರಣ!.. ಪ್ರೊಸೆಸರ್‌ ಯಾವುದು?

ಟೆಕ್ನೋ ಸ್ಪಾರ್ಕ್‌ 20 ಡಿಸ್‌ಪ್ಲೇ ರಚನೆ
ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ.

ಟೆಕ್ನೋ ಸ್ಪಾರ್ಕ್‌ 20 ಪ್ರೊಸೆಸರ್‌ ಯಾವುದು?
ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ HiOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಹಾಗೂ 6GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಅನಾವರಣ!.. ಪ್ರೊಸೆಸರ್‌ ಯಾವುದು?

ಟೆಕ್ನೋ ಸ್ಪಾರ್ಕ್‌ 20 ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದುಕೊಂಡಿದೆ. ಎರಡನೇ ಕ್ಯಾಮೆರಾ ಸೆಕೆಂಡರಿ ಕ್ಯಾಮೆರಾದ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದನ್ನು AI ಕ್ಯಾಮೆರಾ ಎಂದು ಹೆಸರಿಸಲಾಗಿದೆ. ಈ ಸೆಟಪ್ ಅನ್ನು LED ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್‌ 20 ಬ್ಯಾಟರಿ ಮತ್ತು ಇತರೆ
ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, 3.5mm ಹೆಡ್‌ಫೋನ್ ಜ್ಯಾಕ್, ಸ್ಟೀರಿಯೋ ಸ್ಪೀಕರ್‌, USB-C ಪೋರ್ಟ್ ಅನ್ನು ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಪಡೆಯುತ್ತದೆ.

ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಅನಾವರಣ!.. ಪ್ರೊಸೆಸರ್‌ ಯಾವುದು?

ಟೆಕ್ನೋ ಸ್ಪಾರ್ಕ್‌ 20 ಬೆಲೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಇದನ್ನು ಭಾರತದಲ್ಲಿ ಅಂದಾಜು 10,000 ರೂಪಾಯಿ ಎಂದು ನಾವು ನಿರೀಕ್ಷಿಸಬಹುದು. ಈ ಸ್ಮಾರ್ಟ್‌ಫೋನ್‌ ಅನ್ನು ಗ್ರ್ಯಾವಿಟಿ ಬ್ಲ್ಯಾಕ್‌, ಸೈಬರ್‌ ವೈಟ್‌, ನಿಯೋನ್‌ ಗೋಲ್ಡ್‌ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

ಇದಲ್ಲದೆ ಟೆಕ್ನೋ ಕಂಪೆನಿ ಇತ್ತೀಚಿಗೆ ಟೆಕ್ನೋ ಸ್ಪಾರ್ಕ್‌ ಗೋ 2024 ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯುನಿಸೋಕ್‌ T606 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್-ರಿಯರ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿಯನ್ನು ಹೊಂದಿದ್ದು, USB ಟೈಪ್-C ಚಾರ್ಜಿಂಗ್ ಪೋರ್ಟ್ ಒಳಗೊಂಡಿದೆ.

Best Mobiles in India

English summary
Tecno Spark 20 Announced With 5000mAh Battery: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+