Home
ಸುದ್ದಿಜಾಲ

TECNO: ಅಮೆಜಾನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಟೆಕ್ನೊ ಸ್ಪಾರ್ಕ್‌ 20: ಏನೆಲ್ಲಾ ನಿರೀಕ್ಷೆ!

ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವುದಕ್ಕೆ ಭರ್ಜರಿ ತಯಾರಿ ನಡೆದಿದೆ. ಈ ನಡುವೆ ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ನ ಲ್ಯಾಂಡಿಂಗ್‌ ಪೆಜ್‌ ಇದೀಗ ಅಮೆಜಾನ್‌ನಲ್ಲಿ ಕಾಣಿಸಿಕೊಂಡಿದೆ. ಬಿಡುಗಡೆ ದಿನಾಂಕ ಘೋಷಣೆಯಾಗುವ ಮೊದಲೇ ಟೆಕ್ನೋ ಸಂಸ್ಥೆ ತನ್ನ ಅಮೆಜಾನ್‌ ಪಟ್ಟಿಯೊಂದಿಗೆ ಲೈವ್‌ ಆಗಿದೆ.

ಹೌದು, ಟೆಕ್ನೊ ಸ್ಪಾರ್ಕ್‌ 20 (TECNO Spark 20) ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್‌ ಪಟ್ಟಿಯಲ್ಲಿ ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಪೇಜ್‌ ಲೈವ್‌ ಆಗ್ತಿದ್ದ ಹಾಗೇ ಇದರ ಪ್ರಮುಖ ಫೀಚರ್ಸ್‌ ವಿವರಗಳು ಬಹಿರಂಗವಾಗಿದೆ. ಅದರಂತೆ ಈ ಫೋನ್‌ ಡೈನಾಮಿಕ್ ಪೋರ್ಟ್ ಅಧಿಸೂಚನೆಗಳೊಂದಿಗೆ 90Hz ಡಿಸ್‌ಪ್ಲೇ ಮತ್ತು ಕೇಂದ್ರಿತ ಪಂಚ್ ಹೋಲ್ ನಾಚ್ ವಿನ್ಯಾಸವನ್ನು ಪಡೆದಿದೆ. ಹಾಗಾದ್ರೆ ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಟೆಕ್ನೊ ಸ್ಪಾರ್ಕ್‌ 20: ಏನೆಲ್ಲಾ ನಿರೀಕ್ಷೆ

ಟೆಕ್ನೊ ಸ್ಪಾರ್ಕ್‌ 20 ಡಿಸ್‌ಪ್ಲೇ ರಚನೆ ಸಾಧ್ಯತೆ
ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ 6.56 ಇಂಚಿನ ಪುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಇನ್ನು ಡಿಸ್‌ಪ್ಲೇಯು 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 84.6% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿರಲಿದೆ. ಜೊತೆಗೆ ಡಿಸ್‌ಪ್ಲೇಯು 20:9 ರಚನೆಯ ಅನುಪಾತದಲ್ಲಿ ಬರಲಿದ್ದು, 267 ppi ಸಾಂದ್ರತೆಯಲ್ಲಿರಲಿದೆ.

ಅಮೆಜಾನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಟೆಕ್ನೊ ಸ್ಪಾರ್ಕ್‌ 20: ಏನೆಲ್ಲಾ ನಿರೀಕ್ಷೆ

ಟೆಕ್ನೊ ಸ್ಪಾರ್ಕ್‌ 20 ಪ್ರೊಸೆಸರ್‌ ಯಾವುದು?
ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಇಂಟಿಗ್ರೇಟೆಡ್ Mali G52 GPU ಸಪೋರ್ಟ್‌ ಪಡೆದಿದ್ದು, ಆಂಡ್ರಾಯ್ಡ್‌ 13 OS ಆಧಾರಿತ HiOS 13 ಕಸ್ಟಮ್ ಸ್ಕಿನ್‌ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರಲಿದ್ದು, ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಅಮೆಜಾನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಟೆಕ್ನೊ ಸ್ಪಾರ್ಕ್‌ 20: ಏನೆಲ್ಲಾ ನಿರೀಕ್ಷೆ

ಟೆಕ್ನೊ ಸ್ಪಾರ್ಕ್‌ 20 ಕ್ಯಾಮೆರಾ ಸೆಟಪ್‌ ಏನಿರಲಿದೆ?
ಟೆಕ್ನೋ ಸ್ಪಾರ್ಕ್ 20 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಇರಲಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಇರಲಿದೆ. ಜೊತೆಗೆ ಸಹಾಯಕ ಕ್ಯಾಮೆರಾವಾಗಿ AI ಲೆನ್ಸ್ ಅನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೆ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ.

ಅಮೆಜಾನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಟೆಕ್ನೊ ಸ್ಪಾರ್ಕ್‌ 20: ಏನೆಲ್ಲಾ ನಿರೀಕ್ಷೆ

ಟೆಕ್ನೊ ಸ್ಪಾರ್ಕ್‌ 20 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌, ಕಂಪಾಸ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ IP53 ರೇಟಿಂಗ್ ಅನ್ನು ಹೊಂದಿದ್ದು, ಡಸ್ಟ್‌ ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆ ಹೊಂದಿದೆ.

ಟೆಕ್ನೊ ಸ್ಪಾರ್ಕ್‌ 20 ಬೆಲೆ ಮತ್ತು ಲಭ್ಯತೆ
ಟೆಕ್ನೊ ಸ್ಪಾರ್ಕ್‌ 20 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವ ಬೆಲೆ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ ಎಂಬ ನಿರೀಕ್ಷೆಯನ್ನು ಇಡಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಗ್ರಾವಿಟಿ ಬ್ಲಾಕ್, ಸೈಬರ್ ವೈಟ್, ನಿಯಾನ್ ಗೋಲ್ಡ್, ಮ್ಯಾಜಿಕ್ ಸ್ಕಿನ್ ಬ್ಲೂ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಇವುಗಳಲ್ಲಿ, ಮ್ಯಾಜಿಕ್ ಸ್ಕಿನ್ ಬ್ಲೂ ಬಣ್ಣದ ರೂಪಾಂತರವು ಫಾಕ್ಸ್ ಲೆದರ್ ಫಿನಿಶ್ ಅನ್ನು ಹೊಂದಿದೆ ಎಂದು ವರದಿಯಾಗಿದೆ.

Best Mobiles in India

English summary
TECNO Spark 20 Phone Listed on Amazon Ahead of India Launch: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+