ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಅನಾವರಣ! ಕಣ್ಣು ಕುಕ್ಕುವಂತಿದೆ ಫೋನ್ ಡಿಸೈನ್!
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಸೈಲೆಂಟ್ ಆಗಿ ಎಂಟ್ರಿ ನೀಡಿದಂತಾಗಿದೆ. ಇದು ಮೀಡಿಯಾಟೆಕ್ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಹೌದು, ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದರಲ್ಲಿ ಬೆಲೆ ಮತ್ತು ಲಭ್ಯತೆ ವಿವರಗಳು ಬಹಿರಂಗವಾಗಿಲ್ಲವಾದರೂ ಫೋನ್‌ನ ಫೀಚರ್ಸ್‌ಗಳನ್ನು ವಿವರಿಸಲಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೊಂದಿಗೆ ಬರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಡಿಸೈನ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಟೆಕ್ನೋ ಸ್ಪಾರ್ಕ್ 20C ಡಿಸ್‌ಪ್ಲೇ ರಚನೆ ಹೇಗಿದೆ?
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ 84.6% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ.
ಟೆಕ್ನೋ ಸ್ಪಾರ್ಕ್ 20C ಪ್ರೊಸೆಸರ್ ಯಾವುದು?
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G36 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ವಾಸ್ತವಿಕವಾಗಿ ಹೆಚ್ಚುವರಿಯಾಗಿ RAM ಅನ್ನು 8GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಸಾಧ್ಯವಿದೆ.

ಟೆಕ್ನೋ ಸ್ಪಾರ್ಕ್ 20C ಕ್ಯಾಮೆರಾ ಸೆಟ್‌ಅಪ್ ಏನಿದೆ?
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ನಿರ್ದಿಷ್ಟಪಡಿಸದ AI-ಬೆಂಬಲಿತ ಕ್ಯಾಮೆರಾದೊಂದಿಗೆ ಪಟ್ಟಿಮಾಡಲಾಗಿದೆ. ಇನ್ನು ಹಿಂಭಾಗದಲ್ಲಿ ಕ್ಯಾಮರಾ ಘಟಕವು ಡ್ಯುಯಲ್ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಸೆಲ್ಫಿ ಕ್ಯಾಮರಾವನ್ನು ಡಿಸ್‌ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಜೋಡಿಸಲಾದ ಹೋಲ್-ಪಂಚ್ನಲ್ಲಿ ಇರಿಸಲಾಗಿದೆ.
ಟೆಕ್ನೋ ಸ್ಪಾರ್ಕ್ 20C ಬ್ಯಾಟರಿ ಮತ್ತು ಇತರೆ
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ GPS, WiFi, Bluetooth, FM ಮತ್ತು OTG ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಇದು 3.5 ಎಂಎಂ ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಸುರಕ್ಷತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್ 20C ಬೆಲೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಇದು ಬಜೆಟ್ ಬೆಲೆಯಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಲ್ಪೆಂಗ್ಲೋ ಗೋಲ್ಡ್, ಗ್ರಾವಿಟಿ ಬ್ಲಾಕ್, ಮಿಸ್ಟರಿ ವೈಟ್ ಮತ್ತು ಮ್ಯಾಜಿಕ್ ಸ್ಕಿನ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲೇ ಇದರ ಬೆಲೆ ವಿವರಗಳು ಬಹಿರಂಗವಾಗುವ ನಿರೀಕ್ಷೆಯನ್ನು ಇಡಲಾಗಿದೆ.


Click it and Unblock the Notifications








