Home
ಸುದ್ದಿಜಾಲ

ಕೈಗೆಟಕುವ ಬೆಲೆಯ ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ ಬಿಡುಗಡೆ!

ಭಾರತದ ಮಾರುಕಟ್ಟೆಯಲ್ಲಿ ಟೆಕ್ನೋ ಕಂಪೆನಿ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ಬೆಲೆಯಲ್ಲಿ ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಕೃತಕ ಬುದ್ಧಿಮತ್ತೆ (AI) ಆಧಾರಿತ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಇದು 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್‌ 8C

ಹೌದು, ಟೆಕ್ನೋ ಕಂಪೆನಿ ಭಾರತದಲ್ಲಿ ಹೊಸ ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡಾಟ್ ನಾಚ್ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್‌ ಯೂನಿಸೋಕ್‌ T606 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 3GB RAM + 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ 720 × 1,612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ HD+ ಡಾಟ್ ನಾಚ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 89.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಅಲ್ಲದೆ 262ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಇನ್ನು ಸ್ಮಾರ್ಟ್‌ಫೋನ್ ಆಕ್ಟಾ ಕೋರ್‌ ಯೂನಿಸೋಕ್‌ T606 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ HiOS v7.6 ಜೊತೆಗೆ ರನ್ ಆಗುತ್ತದೆ.ಹಾಗೆಯೇ 3GB RAM + 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಫೋನ್‌ ಫ್ಯೂಷನ್ ವರ್ಚುವಲ್ RAM ಫೀಚರ್ಸ್‌ ಹೊಂದಿದ್ದು, RAM ಅನ್ನು 3GB ಯಷ್ಟು ಹೆಚ್ಚಿಸುತ್ತದೆ. ಅಂದರೆ 6GB ವರೆಗೆ ವಿಸ್ತರಣೆ ಮಾಡಬಹುದಾಗಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ AI-ಚಾಲಿತ ಡ್ಯುಯಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್ ಹೊಂದಿದೆ. ಇನ್ನು ರಿಯರ್‌ ಕ್ಯಾಮೆರಾ AI ಬ್ಯೂಟಿ 3.0, ವೈಡ್ ಸೆಲ್ಫಿ, ಪೋರ್ಟ್ರೇಟ್ ಮೋಡ್, HDR ಮತ್ತು ಫಿಲ್ಟರ್‌ಗಳಂತಹ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಕ್ಯಾಮೆರಾ 1080p ಟೈಮ್-ಲ್ಯಾಪ್ಸ್ ಫೋಟೋಗ್ರಫಿ ಮತ್ತು 120fps ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಬೆಂಬಲಿಸಲಿವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 53 ಗಂಟೆಗಳ ಕಾಲ ಟಾಕ್‌ಟೈಂ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, 4G VoLTE, Wi-Fi, ಬ್ಲೂಟೂತ್, FM ರೇಡಿಯೋ, GPS/ A-GPS ಮತ್ತು 3.5mm ಆಡಿಯೋ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಸೇರಿದೆ. ಇನ್ನು ಹೆಚ್ಚುವರಿಯಾಗಿ, ಈ ಸ್ಮಾರ್ಟ್‌ಫೋನ್‌ DTS ಸೌಂಡ್ ಅನ್ನು ಪ್ಯಾಕ್ ಮಾಡುತ್ತದೆ ಮತ್ತು HiParty ಅಪ್ಲಿಕೇಶನ್ ಜೊತೆಗೆ ಪ್ಲೇಬ್ಯಾಕ್‌ಗಾಗಿ ಸಂಗೀತ ಟ್ರ್ಯಾಕ್‌ಗಳನ್ನು ಕಸ್ಟಮೈಸ್ ಮಾಡಲು ಸಹಾಯ ಮಾಡಲು SOPlay 2.0 ಅಪ್ಲಿಕೇಶನ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 8C ಸ್ಮಾರ್ಟ್‌ಫೋನ್‌ ಏಕೈಕ 3GB + 64GB ಸ್ಟೋರೇಜ್ ರೂಪಾಂತರಕ್ಕೆ 7,499.ರೂ ಬೆಲೆ ಹೊಂದಿದೆ. ಈ ಫೋನ್ ಡೈಮಂಡ್ ಗ್ರೇ, ಐರಿಸ್ ಪರ್ಪಲ್, ಮ್ಯಾಗ್ನೆಟ್ ಬ್ಲಾಕ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದು ಫೆಬ್ರವರಿ 24 ರಿಂದ ಅಮೆಜಾನ್ ಮೂಲಕ ಮಾರಾಟವಾಗಲಿದೆ.

Best Mobiles in India

English summary
Tecno Spark 8C price in India has been set at Rs. 7,499 for the lone 3GB + 64GB storage variant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+