Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌

ಮೊಬೈಲ್‌ ಮಾರುಕಟ್ಟೆಯಲ್ಲಿ ಟೆಕ್ನೋ ಕಂಪೆನಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ಬೆಲೆಯಲ್ಲಿ ಪರಿಚಯಿಸಿ ಗಮನಸೆಳೆದಿದೆ. ಆಕರ್ಷಕ ಕ್ಯಾಮೆರಾ, ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಟೆಕ್ನೋ ಸ್ಪಾರ್ಕ್‌ 9 ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್‌ 9

ಹೌದು, ಟೆಕ್ನೋ ಕಂಪೆನಿ ಭಾರತದಲ್ಲಿ ಹೊಸ ಟೆಕ್ನೋ ಸ್ಪಾರ್ಕ್‌ 9 ಅನ್ನು ಲಾಂಚ್‌ ಮಾಡಿದೆ. ಇದು ಮೀಡಿಯಾಟೆಕ್‌ G37 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಫೋನ್‌ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ DTS ಹೊಂದಿರುವ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ವರ್ಚುವಲ್‌ 5GB RAM ಅನ್ನು ಕೂಡ ಬೆಂಬಲಿಸಲಿದೆ.

ಟೆಕ್ನೋ ಸ್ಪಾರ್ಕ್‌ 9

ಇನ್ನು ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ವಾಟರ್-ಡ್ರಾಪ್ ಶೈಲಿಯ ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಅನ್ನು ಹಿಂಬದಿಯಲ್ಲಿ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 8,499ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಮೂಲಕ ಜುಲೈ 23ರಂದು ಸೇಲ್‌ ಆಗಲಿದೆ. ಇದು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?

ಡಿಸ್‌ಪ್ಲೇ ರಚನೆ ಹೇಗಿದೆ?

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಯೋಗ್ಯವಾದ ಮಾದರಿಯನ್ನು ಒಳಗೊಂಡಿದೆ.

ಪ್ರೊಸೆಸರ್‌ ಕಾರ್ಯವೈಖರಿ ಏನು?

ಪ್ರೊಸೆಸರ್‌ ಕಾರ್ಯವೈಖರಿ ಏನು?

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB, 6GB RAM + 128GB ಹಾಗೂ 3GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ನೀವು ವರ್ಚುವಲ್‌ RAM ಫೀಚರ್ಸ್‌ ಮೂಲಕ 5GB RAM ವರೆಗೆ RAM ವಿಸ್ತರಿಸಬಹುದು. ಇನ್ನು RAM ವಿಸ್ತರಣೆಗೆ OTA ಅಪ್‌ಡೇಟ್ ಅಗತ್ಯವಿರಬಹುದು ಎಂದು ಕಂಪೆನಿ ಹೇಳಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಅನ್ನು ಹೊಂದಿದೆ. ಇದರ ಸೆಲ್ಫಿ ಕ್ಯಾಮೆರಾ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೊಮೀಟರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 4GB + 64GB ಸ್ಟೋರೇಜ್‌ ಆಯ್ಕೆಗೆ 8,499ರೂ.ಬೆಲೆ ಹೊಂದಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ಆಯ್ಕೆಯ ಬೆಲೆ 9,499ರೂ. ಆಗಿದೆ. ಇದರ ಮತ್ತೊಂದು ವೇರಿಯೆಂಟ್‌ನ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ ಅಮೆಜಾನ್ ಪ್ರೈಮ್ ಡೇ ಸೇಲ್ 2022 ರ ಭಾಗವಾಗಿ ಅಮೆಜಾನ್ ಮೂಲಕ ಜುಲೈ 23 ರಂದು ಮಾರಾಟಕ್ಕೆ ಬರಲಿದೆ. ಈ ಫೋನ್‌ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಟೆಕ್ನೋ

ಇದಲ್ಲದೆ ಟೆಕ್ನೋ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಕೇಂದ್ರಿತ ಫೋನ್‌ಗಳಾಗಿದ್ದು, ಮೆಮೊರಿ ಫ್ಯೂಷನ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿವೆ. ಆದರೆ ಮುಖ್ಯ ಕ್ಯಾಮೆರಾಗಳು ಮಾತ್ರ ಭಿನ್ನವಾಗಿವೆ.

ಟೆಕ್ನೋ ಕ್ಯಾಮನ್‌

ಟೆಕ್ನೋ ಕಂಪೆನಿ ಪರಿಚಯಿಸಿರುವ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಸ್ಮಾರ್ಟ್‌ಫೋನ್‌ಗಳು 6GB RAM ಅನ್ನು ಹೊಂದಿವೆ. ಆದರೆ ಮೆಮೊರಿ ಫ್ಯೂಷನ್‌ ಟೆಕ್ನಾಲಜಿಯನ್ನು ಬಳಸುವ ಮೂಲಕ RAM ಅನ್ನು ಹೆಚ್ಚುವರಿಯಾಗಿ 5GB ಪಡೆದುಕೊಳ್ಳಬಹುದು. ಇದರಿಂದ ನಿಮಗೆ 11GB RAM ಲಭ್ಯವಾಗಲಿದೆ. ಇನ್ನು ಟೆಕ್ನೋ ಕ್ಯಾಮನ್‌ 19 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 14,999ರೂ ಆಗಿದೆ. ಹಾಗೆಯೇ ಟೆಕ್ನೋ ಕ್ಯಾಮನ್‌ 19 ನಿಯೋ ಫೋನ್‌ ಆರಂಭಿಕ ಬೆಲೆ 12,999ರೂ.ಆಗಿದೆ.

Best Mobiles in India

English summary
Tecno Spark 9 With 5,000mAh battery Launched in India: Price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+