Home
ಸುದ್ದಿಜಾಲ

ಭಾರತದಲ್ಲಿ ಇಂದಿನಿಂದ ₹6,999 ಬೆಲೆಯ TECNO Spark Go 2 ಫೋನ್ ಸೇಲ್!

Tecno ಕಂಪೆನಿಯು ಭಾರತದಲ್ಲಿ ಕಳೆದ ವಾರವಷ್ಟೇ ಪರಿಚಯಿಸಿರುವ, ಬಜೆಟ್ ಬೆಲೆಯ Tecno Spark Go 2 ಸ್ಮಾರ್ಟ್‌ಫೋನ್ ಇಂದು ಮೊದಲ ಬಾರಿಗೆ ದೇಶದಲ್ಲಿ ಮಾರಾಟಕ್ಕೆ ಬರುತ್ತಿದೆ. ಇಂದು (ಜುಲೈ 1 ) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಫ್ಲಿಪ್‌ಕಾರ್ಟ್ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ Tecno Spark Go 2 ಫೋನ್ ಮಾರಾಟಕ್ಕೆ ಬರಲಿದ್ದು, ಗ್ರಾಹಕರು ಏಕೈಕ 4GB RAM ಮತ್ತು 64GB ಸ್ಟೋರೇಜ್ ಕಾನ್ಫಿಗರೇಶನ್ ಫೋನನ್ನು ₹6,999 ರೂ.ಗಳಿಗೆ ಖರೀದಿಬಹುದು ಎಂದು ಕಂಪೆನಿಯು ತಿಳಿಸಿದೆ.

ಈ ಹೊಸ Tecno Spark Go 2 ಫೋನ್ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಬಂದಿದ್ದು, ಇದು ಶಕ್ತಿಯುತ 5,000mAh ಬ್ಯಾಟರಿ, ಯುನಿಸಾಕ್ T7250 ಚಿಪ್‌ಸೆಟ್ ಮತ್ತು ಆಂಡ್ರಾಯ್ಡ್ 15 ಔಟ್-ಆಫ್-ದಿ-ಬಾಕ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಗ್ರಾಹಕರುವ ಇಂಕ್ ಬ್ಲಾಕ್, ವೇಲ್ ವೈಟ್, ಟೈಟಾನಿಯಂ ಗ್ರೇ ಮತ್ತು ಟರ್ಕ್ವಾಯಿಸ್ ಗ್ರೀನ್ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಲು ಅವಕಾಶವುದೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳ ಕುರಿತು ಮಾಹಿತಿ ಇಲ್ಲಿದೆ.

Tecno Spark Go 2 : ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ
ಈ ಹೊಸ Tecno Spark Go 2 ಫೋನ್ 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ HD+ (720x1,600 ಪಿಕ್ಸೆಲ್‌ಗಳು) IPS LCD ಪರದೆಯನ್ನು ಹೊಂದಿದ್ದು,ಇದು ವೀಡಿಯೊ ವೀಕ್ಷಣೆ ಮತ್ತು ಗೇಮಿಂಗ್‌ಗೆ ಉತ್ತಮ ಅನುಭವ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಾರ್ಯಕ್ಷಮತೆಗಾಗಿ, 4GB RAM ಮತ್ತು 64GB eMMC 5.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಯುನಿಸಾಕ್ T7250 ಚಿಪ್‌ಸೆಟ್‌ ನೀಡಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ನಲ್ಲಿ HiOS ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, 4 ವರ್ಷಗಳವರೆಗೆ ಲ್ಯಾಗ್-ಫ್ರೀ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೆಚ್ಚುವರಿಯಾಗಿ, ಈ ಹ್ಯಾಂಡ್‌ಸೆಟ್ ಬಹು ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ ಟೆಕ್ನೋದ AI ಸಹಾಯಕವನ್ನು ಹೊಂದಿದೆ. ಮತ್ತು 4G ಕ್ಯಾರಿಯರ್ ಅಗ್ರಿಗೇಶನ್ 2.0 ಮತ್ತು ಲಿಂಕ್‌ಬೂಮಿಂಗ್ V1.0 ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ, ಇದು ನೆಟ್‌ವರ್ಕ್ ಸಂಪರ್ಕ ಮತ್ತು ಇಂಟರ್ನೆಟ್ ವೇಗವನ್ನು ಸುಧಾರಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, ಈ ಫೋನ್ ಡ್ಯುಯಲ್ 4G VoLTE, ವೈ-ಫೈ 802.11 b/g/n (2.4GHz), ಬ್ಲೂಟೂತ್ 5.2, GPS, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಸ್ಮಾರ್ಟ್‌ಫೋನ್ IP64-ರೇಟೆಡ್ ಧೂಳು ಮತ್ತು ಸ್ಪ್ಲಾಶ್-ನಿರೋಧಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಇಂದಿನಿಂದ ₹6,999 ಬೆಲೆಯ TECNO Spark Go 2 ಫೋನ್ ಸೇಲ್!

ಕ್ಯಾಮೆರಾದ ವಿಷಯದಲ್ಲಿ, Tecno Spark Go 2 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ, ಇದರಲ್ಲಿ 13-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು ಅನಿರ್ದಿಷ್ಟ ದ್ವಿತೀಯ ಸೆನ್ಸರ್ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಪೋನಿನ ವಿಶೇಷತೆ ಎಂದರೆ, ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಕರೆಗಳನ್ನು ಮಾಡಲು ಅನುವು ಮಾಡಿಕೊಡುವುದು. ಇದು ಟೆಕ್ನೋದ ಉಚಿತ "ಫ್ರೀ ಲಿಂಕ್" ಅಪ್ಲಿಕೇಶನ್ ಅನ್ನು ಬೆಂಬಲಿಸುತ್ತದೆ. ಇದು ಸೆಲ್ಯುಲಾರ್ ಸಂಪರ್ಕವಿಲ್ಲದೆ ಎರಡು ಪೋವಾ ಮಾದರಿಗಳ ನಡುವೆ ಸಂವಹನವನ್ನು ನೀಡುತ್ತದೆ.

₹6,999 ರೂ.ಗಳ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಹೊಸ Tecno Spark Go 2 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಹೇಗಿವೆ?, ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
TECNO Spark Go 2 will officially go on sale in India today at 12 PM, available for purchase online on Flipkart and in physical retail stores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+