ಇದೇ ಫೆಬ್ರುವರಿ 9 ರಂದು ಶುರುವಾಗಲಿದೆ ಟೆಕ್ನೋ ಸ್ಪಾರ್ಕ್ ಗೋ 2024 ಸೇಲ್!
ಟೆಕ್ನೋ ಕಂಪನಿಯು ಜನಪ್ರಿಯ ಎಂಟ್ರಿ ಲೆವೆಲ್ ಫೊನ್‌ಗಳಲ್ಲಿ ಒಂದಾಗಿರುವ ಟೆಕ್ನೋ ಸ್ಪಾರ್ಕ್ ಗೋ (2024) ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇದೇ ಫೆಬ್ರುವರಿ 9 ರಂದು ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಬೆಲೆ 6,799ರೂ. ಆಗಿದೆ.
ಹೌದು, ಟೆಕ್ನೋ ಸಂಸ್ಥೆಯ ಇತ್ತೀಚಿನ ಟೆಕ್ನೋ ಸ್ಪಾರ್ಕ್ ಗೋ (2024) ಫೋನಿನ ಸೇಲ್ ಫೆಬ್ರುವರಿ 9 ರಂದು ಶುರುವಾಗಿಲಿದೆ. ಖರೀದಿದಾರರಿಗೆ ಅಮೆಜಾನ್ ತಾಣದಲ್ಲಿ ರಿಯಾಯಿತಿ ಸಹ ಲಭ್ಯ ಆಗಿಲಿದೆ. ಅಂದಹಾಗೆ ಈ ಫೋನ್ 8GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.

ಅಂದಹಾಗೆ ಟೆಕ್ನೋ ಸ್ಪಾರ್ಕ್ ಗೋ (2024) ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಅದೇ ರೀತಿ ಈ ಫೋನ್ 6000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದು ಗ್ರ್ಯಾವಿಟಿ ಬ್ಲ್ಯಾಕ್ ಹಾಗೂ ಮಿಸ್ಟರಿ ವೈಟ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಸ್ಪಾರ್ಕ್ ಗೋ (2024) ಫೀಚರ್ಸ್ ಮಾಹಿತಿ
ಟೆಕ್ನೋದ ಈ ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಇದ್ದು, ಪಾಂಡ ಸ್ಕ್ರೀನ್ ಪ್ರೊಟೆಕ್ಷನ್ ಪಡೆದಿದೆ. ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಕಾರ್ಯನಿರ್ವಹಿಸುವ ಮತ್ತು ಅಧಿಸೂಚನೆಗಳನ್ನು ತೋರಿಸುವ ಡೈನಾಮಿಕ್ ಪೋರ್ಟ್ ಫೀಚರ್ಸ್ ಅನ್ನು ಪಡೆದಿದೆ.
ಟೆಕ್ನೋ ಸ್ಪಾರ್ಕ್ ಗೋ (2024) ಮೊಬೈಲ್ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 13 (Go Edition) ಆಧಾರಿತ HiOS 13 ನಲ್ಲಿ ಕೆಲಸ ನಿರ್ವಹಿಸುತ್ತದೆ. 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಹೊಂದಿದೆ. ಇದಲ್ಲದೆ ಬಳಕೆದಾರರಿಗೆ ಬಳಕೆಯಾಗದ ಸಂಗ್ರಹಣೆಯನ್ನು ವರ್ಚುವಲ್ RAM ಆಗಿ ಬಳಸಿಕೊಳ್ಳಲು ಅನುಮತಿಸುತ್ತದೆ. ಇದರೊಂದಿಗೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಟೆಕ್ನೋ ಸ್ಪಾರ್ಕ್ ಗೋ (2024) ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಡ್ಯುಯಲ್ ಫ್ಲ್ಯಾಷ್ ಜೊತೆಗೆ AI ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಟೆಕ್ನೋ ಸ್ಪಾರ್ಕ್ ಗೋ (2024) ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಈ ಫೋನ್ ಪಡೆದಿದೆ.
ಇನ್ನು ಸ್ಮಾರ್ಟ್‌ಫೋನ್ ಬಯೋಮೆಟ್ರಿಕ್ ಅನ್‌ಲಾಕಿಂಗ್‌ಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್, ಹಾಗೆಯೇ DTS ಸೌಂಡ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳ ಆಯ್ಕೆ ಪಡೆದಿದೆ. ಅಲ್ಲದೇ ಇದು ಗ್ರಾವಿಟಿ ಬ್ಲಾಕ್ ಮತ್ತು ಮಿಸ್ಟರಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








