ಟೆಕ್ನೋ ಸ್ಪಾರ್ಕ್‌ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಜಾಗತಿಕವಾಗಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾಗುತ್ತಲೇ ಇದೆ. ದುಬಾರಿ ಬೆಲೆಯಿಂದ ಹಿಡಿದು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಹಾಕ್ತಿವೆ. ಸದ್ಯ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದಲೇ ಮಾರುಕಟ್ಟೆಯಲ್ಲಿ ಗುರ್ತಿಸಿಕೊಂಡಿರೋ ಟೆಕ್ನೋ ಕಂಪೆನಿ ಟೆಕ್ನೋ ಸ್ಪಾರ್ಕ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನ ಭಾರತೀಯ ಮಾರುಕಟ್ಟೆಗೆ ಮಾಡಿದೆ. ಆಕರ್ಷಕ ಫೀಚರ್ಸ್‌ ಗಳು ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಆಗಿರುವುದು ಇದರ ವಿಶೇಷತೆಯಾಗಿದೆ.

ಹೌದು

ಹೌದು, ಟೆಕ್ನೋ ಕಂಪೆನಿ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಟೆಕ್ನೋ ಸ್ಪಾರ್ಕ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.52 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹೆಲಿಯೊ ಎ 22 ಎಸ್‌ಒಸಿ ಪ್ರೊಸೆಸರ್‌ ಒಳಗೊಂಡಿದೆ. ಹಿಲಿಯರ್ ಪರ್ಪಲ್ ಮತ್ತು ವೆಕೇಶನ್ ಬ್ಲೂ ಕಲರ್‌ನಲ್ಲಿ ಆಯ್ಕೆಗೆ ಲಭ್ಯವಿದೆ. ಹಾಗಾದ್ರೆ ಟೆಕ್ನೋ ಸ್ಪಾರ್ಕ್‌ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ಮುಂದೆ ತಿಳಿಯಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ವಿನ್ಯಾಸ ಆಕರ್ಷಕವಾಗಿದ್ದು, 6.52-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಪ್ಯಾನೆಲ್‌ ಟು ಬಾಡಿ ರೇಶಿಯೋ 89.5% ರಷ್ಟಿದ್ದು ಉತ್ತಮ ಬಾಡಿ ವಿನ್ಯಾಸ ಹೊಂದಿದೆ. ಅಲ್ಲದೆ ಡಿಸ್‌ಪ್ಲೇ ಟು ಬಾಡಿ 20: 9 ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 480 nits ಬ್ರೈಟ್‌ನೆಶ್‌ ಅನ್ನ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಟೆಕ್ನೋ ಸ್ಪಾರ್ಕ್‌ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ 2GHz ಮೀಡಿಯಾಟೆಕ್ ಹೆಲಿಯೊ ಎ 22 ಕ್ವಾಡ್-ಕೋರ್ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 2GB RAM ಮತ್ತು 32GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ನಲ್ಲಿ 8 ಮೆಗಾಫಿಕ್ಸೆಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಡ್ಯುಯೆಲ್‌ ಪ್ಲ್ಯಾಶ್‌ ಹೊಂದಿದೆ. ಈ ಕ್ಯಾಮೆರಾ ದಲ್ಲಿ ಬ್ಯೂಟಿ ಮೋಡ್‌ ಅನ್ನ ಕೂಡ ಅಳವಡಿಸಲಾಗಿದೆ. ಜೊತೆಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾ f/2.0 ಲೆನ್ಸ್‌ ಅನ್ನ ಹೊಂದಿದೆ. ಅಲ್ಲದೆ 81 ಡಿಗ್ರಿ ವ್ಯೂವಿಂಗ್‌ ಆಂಗಲ್‌ ಮತ್ತು ಸಿಂಗಲ್‌ ಪ್ಲ್ಯಾಷ್‌ ಅನ್ನ ಬೆಂಬಲಿಸಲಿದೆ. ಜೊತೆಗೆ ಬ್ರೈಟ್‌ನೆಸ್‌, ಪೊಟ್ರೈಟ್‌ ಮೋಡ್‌ ಅನ್ನ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಟೆಕ್ನೋ ಸ್ಪಾರ್ಕ್ ಗೋ ಪ್ಲಸ್‌ ಸ್ಮಾರ್ಟ್‌ಫೋನ್‌ 4,000mah ಬ್ಯಾಟರಿ ಪ್ಯಾಕ್ಆಪ್‌ ಅನ್ನ ಹೊಂದಿದ್ದು, ಇದು ಆರು ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 110 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್, 6.9 ಗಂಟೆಗಳ ಗೇಮಿಂಗ್, 5.7 ಗಂಟೆಗಳ ಬ್ರೌಸಿಂಗ್, 26 ಗಂಟೆಗಳ ಟಾಕ್ ಟೈಮ್ ಮತ್ತು 343 ಗಂಟೆಗಳವರೆಗೆ ಬ್ಯಾಟರಿ ಅವಧಿ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಮತ್ತು ಬ್ಲೂಟೂತ್ 4.2, ಕನೆಕ್ಟಿವಿಟಿ ಆಯ್ಕೆಗಳನ್ನ ಹೊಂದಿದೆ. ಇನ್ನು ಹಿಲಿಯರ್ ಪರ್ಪಲ್ ಮತ್ತು ವೆಕೇಶನ್ ಬ್ಲೂ ಕಲರ್‌ನಲ್ಲಿ ಆಯ್ಕೆಗೆ ಲಭ್ಯವಿದ್ದು, 6,299 ರೂ ಬೆಲೆಯನ್ನ ಹೊಂದಿದೆ.

Best Mobiles in India

English summary
The Tecno Spark Go Plus is priced at Rs 6,299 in India. At the moment, no other brand is offering a 6.52-inch display and a big 4,000mAh battery at such a low price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X