ಈ ಫೋನ್ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಇದೇ ಕಾರಣಕ್ಕೆ ಮೊಬೈಲ್ ವಲಯದಲ್ಲಿ ಹಲವು ಕಂಪೆನಿಗಳು ಬಜೆಟ್ ಬೆಲೆಯ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಅದರಂತೆ ಅಗ್ಗದ ಬೆಲೆಯಲ್ಲಿ ಅಚ್ಚರಿಯ ಫೀಚರ್ಸ್‌ಗಳನ್ನು ನೀಡುವ ಸ್ಮಾರ್ಟ್‌ಫೋನ್‌ಗಳಿಗೆ ಟೆಕ್ನೋ ಕಂಪೆನಿ ಮುಂಚೂಣಿಯಲ್ಲಿದೆ. ಟೆಕ್ನೋ ಕಂಪೆನಿಯ ಫೋನ್‌ಗಳು ಸ್ಟೈಲಿಶ್ ಲುಕ್ ಮತ್ತು ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ಗೆ ಹೆಸರು ಪಡೆದಿವೆ. ಇದೀಗ ಟೆಕ್ನೋ ಕಂಪೆನಿ ಹೊಸ ಟೆಕ್ನೋ ಪೊವಾ 4 ಬಿಡುಗಡೆಗೆ ತಯಾರಿ ನಡೆಸಿದೆ.

ಹೌದು, ಟೆಕ್ನೋ ಕಂಪೆನಿ ಶೀಘ್ರದಲ್ಲೇ ಭಾರತದಲ್ಲಿ ಹೊಸ ಟೆಕ್ನೋ ಪೊವಾ 4 ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಇನ್ನು ಬಹಿರಂಗವಾಗಿಲ್ಲವಾದರೂ, ಶೀಘ್ರದಲ್ಲೇ ಲಾಂಚ್ ಆಗೋದು ಪಕ್ಕಾ ಆಗಿದೆ. ಇದರ ನಡುವೆ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ವಿವರಗಳನ್ನು ಟೆಕ್ನೋ ಕಂಪೆನಿ ಬಹಿರಂಗಪಡಿಸಿದೆ. ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 6.66-ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 720 x 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು?
ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 5nm ಮೀಡಿಯಾಟೆಕ್ ಹಿಲಿಯೋ G99 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12-ಆಧಾರಿತ HiOSನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ವರ್ಧಿತ ಗೇಮಿಂಗ್ ಕಾರ್ಯಕ್ಷಮತೆಗಾಗಿ ಪ್ಯಾಂಥರ್ ಗೇಮ್ ಇಂಜಿನ್ 2.0 ಮತ್ತು ಹೈಪರ್ ಇಂಜಿನ್ 2.0 ಲೈಟ್ ಅನ್ನು ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಒಳಗೊಂಡಿದೆ ಎನ್ನಲಾಗಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 50ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಕ್ಯಾಮೆರಾ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್ ಟು ಫೋಕಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್ ಏನಿದೆ?
ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಈ ಬ್ಯಾಟರಿಯು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಸುಮಾರು 10 ಗಂಟೆಗಳ ಟಾಕ್ ಟೈಮ್ ಅನ್ನು ನೀಡಲಿದೆ. ಇದರೊಂದಿಗೆ 4G ಬೆಂಬಲ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, NFC, USB ಟೈಪ್-C, 3.5mm ಹೆಡ್‌ಫೋನ್ ಜ್ಯಾಕ್ ಮತ್ತು DTS ಸೌಂಡ್ ಬೆಂಬಲವನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 20,000ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವ ಬಣ್ಣದ ಆಯ್ಕೆಯಲ್ಲಿ ಬರಲಿದೆ. ಇದರ ಲಾಂಚ್ ಡೇಟ್ ಏನಿದೆ? ಇದರ ಸೇಲ್ ಯಾವಾಗ ಎಂಬೆಲ್ಲಾ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾದ್ಯತೆಯಿದೆ. ಆದರೆ ಈ ಸ್ಮಾರ್ಟ್‌ಫೋನ್ ಅಮೆಜಾನ್ ಮೂಲಕ ಭಾರತದಲ್ಲಿ ಸೇಲ್ ಆಗೋದು ಪಕ್ಕಾ ಆಗಿದೆ.


Click it and Unblock the Notifications








