Subscribe to Gizbot

ವೇಗ ಸಂದೇಶ ರಚನೆಗೆ ಗಿನ್ನಿಸ್ ರೆಕಾರ್ಡ್ ಪಡೆದ ದಿಗ್ಗಜ

Written By:

ಮೊಬೈಲ್‌ನಲ್ಲಿ ಸಂದೇಶ ರಚಿಸುವ ಪರಿ ನಿಜಕ್ಕೂ ಒಂದು ಉತ್ತಮ ಆಟದಂತೆ. ನೀವು ಎಷ್ಟು ವೇಗವಾಗಿ ಕೂಡ ಸಂದೇಶ ಟೈಪ್ ಮಾಡುವವರಾಗಿರಬಹುದು, ಪೋನ್ ಅನ್ನು ತಲೆಕೆಳಗೆ ಹಿಡಿದು ಕೂಡ ಸಂದೇಶ ರಚಿಸುವವರಾಗಿರಬಹುದು. ಆದರೆ ನಿಮ್ಮನ್ನು ಮೀರಿಸುವ ಒಬ್ಬಾತ ಇದ್ದಾನೆ ಮತ್ತು ಆತ ಗಿನ್ನೆಸ್ ರೆಕಾರ್ಡ್ ಕೂಡ ಗಳಿಸಿದ್ದಾನೆ.

ಫ್ಲೆಕ್ಸಿ ಎಂಬ ಕೀಬೋರ್ಡ್ ಅಪ್ಲಿಕೇಶನ್ ಬಳಸಿಕೊಂಡು ಮಾರ್ಸೆಲ್ ಫೆರ್ನಾಡ್ಸ್ ವೇಗವಾಗಿ ಸಂದೇಶ ರಚಿಸುವ ದಾಖಲೆಯಲ್ಲಿ ಗಿನ್ನಿಸ್ ಪುರಸ್ಕಾರಕ್ಕೆ ಭಾಜನನಾಗಿದ್ದಾನೆ. ಹದಿನಾರು ವರ್ಷದ ಫೆರ್ನಾಡ್ಸ್ ಇಪ್ಪತ್ತೈದು ಪದದ ಪ್ಯಾರಾಗ್ರಾಫ್ ಅನ್ನು 18.19 ಸೆಕುಂಡುಗಳಲ್ಲಿ ಟೈಪ್ ಮಾಡಿದ್ದಾನೆ. ಮೈಕ್ರೋಸಾಫ್ಟ್‌ನ ಹೊಸ ಫೋನ್ ವಿಂಡೋಸ್ ಫೋನ್ 8.1 ಸಾಫ್ಟ್‌ವೇರ್‌ನಲ್ಲಿ ಈತ ಈ ಸಾಧನೆಯನ್ನು ಮಾಡಿದ್ದಾನೆ.

ವೇಗ ಸಂದೇಶ ರಚನೆಗೆ ಗಿನ್ನಿಸ್ ರೆಕಾರ್ಡ್ ಪಡೆದ ದಿಗ್ಗಜ

ಸಣ್ಣದಿರುವಾಗಲೇ ನನಗೆ ಫೋನ್ ಅಂದರೆ ತುಂಬಾ ಇಷ್ಟವಾಗಿತ್ತು ಈಗ ಕೂಡ ನನಗೆ ಸ್ಮಾರ್ಟ್‌ಫೋನ್ ಅಂದರೆ ತುಂಬಾ ಇಷ್ಟ ಎಂದು ಮಾರ್ಸೆಲ್ ಹೇಳುತ್ತಾನೆ. ಫೋನ್‌ಗಳನ್ನು ಬಳಸಿಕೊಂಡು ನಾನು ಇಡೀ ದಿನ ಕಳೆಯುತ್ತೇನೆ ಮತ್ತು ಸಂದೇಶ ರಚಿಸುವುದೂ ಕೂಡ ನನಗೆ ಇಷ್ಟದ ಕೆಲಸ ಎಂಬುದು ಆತನ ಮಾತು. ವರ್ಡಿಲಿಸ್ ಎಂಬ ಕಂಪೆನಿ ವೇಗವಾಗಿ ಸಂದೇಶ ರಚನೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಿತ್ತು ಇದರಲ್ಲಿ ನೂರಕ್ಕಿಂತ ಅಧಿಕ ಜನರು ಭಾಗವಹಿಸಿದ್ದರು ಮತ್ತು ಕೊನೆಗೆ ಫೆರ್ನಾಡ್ಸ್ ಅನ್ನು ವಿಜಯಿಯನ್ನಾಗಿ ಮಾಡಲಾಯಿತು.

ಫ್ಲೆಕ್ಸಿ ಕೀಬೋರ್ಡ್ ಟೈಪ್ ಮಾಡಲು ಉತ್ತಮವಾಗಿದ್ದು ಈಗ ಮಾರ್ಸೆಲ್ ಹೆತ್ತವರೂ ಕೂಡ ಮಗನಂತೆ ವೇಗವಾಗಿ ಟೈಪ್ ಮಾಡಲು ಕಲಿಯುತ್ತಿದ್ದಾರಂತೆ. ಇದರಲ್ಲಿ ಸಂದೇಶ ರಚಿಸುವುದು ನನಗೆ ಎಡಗೈ ಆಟ ಎಂಬುದು ಮಾರ್ಸೆಲ್ ಉವಾಚ. ಕಂಪೆನಿ ಕೂಡ ಈ ಮಾರ್ಸೆಲ್ ದಾಖಲೆಯಿಂದ ಹೆಚ್ಚು ಪುಳಕಿತಗೊಂಡಿದ್ದು ಈತನ ದಾಖಲೆಯನ್ನು ಮುರಿಯುವ ಆಹ್ವಾನವನ್ನು ಇತರರಿಗೆ ನೀಡಿದೆ. ಈ ಅಪ್ಲಿಕೇಶನ್ ನಲ್ವತ್ತೈದು ದಿನಗಳು ಮಾತ್ರ ಉಚಿತವಾಗಿದ್ದು ಗೂಗಲ್ ಪ್ಲೇನಲ್ಲಿ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot