ರಾತ್ರಿಯಿಡೀ PUBG ಗೇಮ್‌ ಆಡಿದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ !

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಗೇಮ್‌ಗಳ ಪ್ರಭಾವ ಜಾಸ್ತಿ ಆಗುತ್ತಲೇ ಇದೆ. ಟೆಕ್ನಾಲಜಿ ಮುಂದುವರೆದಂತೆ ಆನಿಮೇಷನ್‌ ಆಧಾರಿತ ಗೇಮ್‌ಗಳು ಭಿನ್ನ ವಿಭಿನ್ನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಸದ್ಯ ಈಗಾಗಲೇ ಸ್ಮಾರ್ಟ್‌ಫೋನ್‌ ಡಿವೈಸ್‌ಗಳಲ್ಲಿ ಹಲವು ಮಾದರಿಯ ಆನ್‌ಲೈನ್‌ ಗೇಮ್‌ಗಳು ಲಬ್ಯವಿದ್ದು, ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನ ತನ್ನತ್ತ ಆಕರ್ಷಿಸಿವೆ. ಆದರೆ ಈ ಗೇಮ್‌ಗಳು ಯುವಜನತೆಯ ಮೇಲೆ ಮಾನಸಿಕ ಪ್ರಭಾವ ಭಿಡರುತ್ತಲೆ ಇದೆ ಅನ್ನೊದು ಆಗಾಗ ವರದಿ ಆಗುತ್ತಲೇ ಇದೆ. ಇದಕ್ಕೆ ಹಲವು ಉದಾಹರಣೆಗಳು ಕಣ್ಣ ಮುಂದೆ ಸಿಗುತ್ತದೆ. ಇದೀಗ ರಾಜಸ್ಥಾನದ ಕೋಟಾ ಮೂಲದ ಹದಿಹರೆಯದ ಯುವಕನೊಬ್ಬ ರಾತ್ರಿಯಿಡೀ ಪಬ್‌ಜಿ ಆಡಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ಆಗಿದೆ.

ಹೌದು

ಹೌದು, ರಾಜಸ್ಥಾನದ ಕೋಟಾ ಮೂಲದ ಹದಿಹರೆಯದ ಯುವಕನೊಬ್ಬ ರಾತ್ರಿಯಿಡೀ ಪಬ್‌ಜಿ ಆಡಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ಆಗಿದೆ. 14 ವರ್ಷದ ಬಾಲಕ ಶನಿವಾರ (ಜೂನ್ 6) ರಾತ್ರಿಯಿಡೀ ಪಬ್‌ಜಿ ಆಡಿದ ನಂತರ ಬೆಳಿಗ್ಗೆ ವೆಂಟಿಲೇಟರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತ್ಮಹತ್ಯೆಗೆ ಶರಣಾಗಿರುವ ಬಾಲಕ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುವ ಸದ್ಯ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕನ ಮಗ ಎಂದು ಹೇಳಲಾಗಿದೆ.

ಅಷ್ಟಕ್ಕೂ ಏನಾಯಿತು?

ಅಷ್ಟಕ್ಕೂ ಏನಾಯಿತು?

ಈ ಬಾಲಕನ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಘಟನೆಗೆ ಮೂರು ದಿನಗಳ ಮೊದಸಲು ಬಾಲಕ ತನ್ನ ತಾಯಿಯ ಫೋನ್‌ನಲ್ಲಿ ಪಬ್‌ಜಿ ಗೇಮ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾನೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಠಾಣೆ ಉಸ್ತುವಾರಿ ಹನ್ಸರಾಜ್ ಮೀನಾ ಹೇಳಿದ್ದಾರೆ. ಅಲ್ಲದೆ ಈ ಬಾಲಕ ಕಳೆದ ಮೂರು ದಿನಗಳಿಂದ ನಿರಂತರವಾಗಿ ಪಬ್‌ಜಿ ಗೇಮ್‌ ಆಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಈ ಬಾಲಕ ಓದುತ್ತಿದ್ದ ಕೊಠಡಿಯಲ್ಲಿಯು ಸಹ ಸುಮಾರು 3 ಗಂಟೆ ತನಕ ಮೊಬೈಲ್‌ನಲ್ಲಿ ಗೇಮ್‌ ಅನ್ನು ಆಡುತ್ತಲೇ ಇದ್ದರು ಎನ್ನಲಾಗಿದೆ. ಇನ್ನು ಈ ಬಾಲಕ ಓದುವ ಕೊಠಡಿಯಲ್ಲಿ ಮುರು ಗಮಟೆಗಳ ತನಕ ಪಬ್‌ಜಿ ಗೇಮ್‌ ಆಡಿದ್ದು, ನಂತರ ಮಲಗಲು ಪಕ್ಕದ ಕೊಠಡಿಗೆ ತೆರಳಿದ್ದಾನೆ ಆದರೆ ಶನಿವಾರ ಬೆಳಗಿನ ಜಾವದಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಮೊಬೈಲ್ ಗೇಮಿಂಗ್ ಆತ್ಮಹತ್ಯೆಗೆ ಪ್ರೇರಣೆ ನೀಡಿದೆಯಾ?

ಮೊಬೈಲ್ ಗೇಮಿಂಗ್ ಆತ್ಮಹತ್ಯೆಗೆ ಪ್ರೇರಣೆ ನೀಡಿದೆಯಾ?

ಇನ್ನು PUBG ಗೇಮರುಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಮೊದಲಲ್ಲ. ಅದರಲ್ಲು ಪಬ್‌ಜಿ ಗೇಮ್‌ ಆಡುವುದನ್ನ ನಿಲ್ಲಿಸಿ ಎಂದು ಪೋಷಕರು ಮಕ್ಕಳಿಗೆ ಹೇಳಿದಾಗಲೇ ಅನೇಕ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ಇದಲ್ಲದೆ, PUBG ಆಟಗಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಆಡಿದ ನಂತರ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟ ಪ್ರಕರಣಗಳು ಕೂಡ ನಡೆದಿವೆ. ಅಷ್ಟೇ ಅಲ್ಲ PUBG ಆಟಗಾರರು ತಮ್ಮ ಫೋನ್‌ಗಳಲ್ಲಿ PUBG ಮತ್ತು ಇತರ ಆಟಗಳನ್ನು ಆಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಪೋಷಕರನ್ನು ಕೊಲೆ ಮಾಡಿದ ಅನೇಕ ಘಟನೆಗಳು ಸಹ ನಡೆದಿವೆ. ಇದೇ ಮಾದರಿಯಲ್ಲಿ ಕೋಟಾದಲ್ಲಿ ಹದಿಹರೆಯದ ಹುಡುಗನ ಆತ್ಮಹತ್ಯೆ ಸಹ ನಡೆದಿದೆ. ಆದರೆ ಇದಕ್ಕೆ ಅಸಲಿ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಪರಿಹಾರ ಏನು?

ಪರಿಹಾರ ಏನು?

ಸದ್ಯ COVID-19 ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಆಕ್ರಮಿಸಿಕೊಂಡ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರ ಪರಿಣಾಮವಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಯುವಜನತೆ ಗೇಮಿಂಗ್‌ ಮೊರ ಕೂಡ ಹೋಗಿದ್ದಾರೆ. ಇದಲ್ಲದೆ, ವಿವಿಧ ಆಟಗಳಿಗೆ ಸಂಬಂಧಿಸಿದ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸದ್ಯ ತಜ್ಞರ ಬಳಿ ಇಂತಹ ಗೇಮರುಗಳಿಗೆ ಸ್ಮಾರ್ಟ್‌ಫೋನ್‌ಗಳನ್ನ ಹೇಗೆ ಬಳಕೆ ಮಾಡಬೇಕು ಅನ್ನುವುದರ ಬಗ್ಗೆ ಸಲಹೆ ಪಡೆಯುವುದು ಉತ್ತಮ.

Best Mobiles in India

Read more about:
English summary
A Kota-based teenager has allegedly committed suicide by hanging himself after playing PUBG all night long.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X