ಭೂಮಂಡಲದಡ ಅದ್ಭುತ ಚಿತ್ರ ತೆಗೆದ ಹುಡುಗ!

By Vijeth Kumar Dn
|

Cudworth-Earth-Images-1

Cudworth-Earth-Images-1

Cudworth-Earth-Images-1
Codworth-Earth-Images-2

Codworth-Earth-Images-2

Codworth-Earth-Images-2
Cudworth-Earth-Images-3

Cudworth-Earth-Images-3

Cudworth-Earth-Images-3
Cudworth-Earth-Images-4

Cudworth-Earth-Images-4

Cudworth-Earth-Images-4
Cudworth-Earth-Images-5

Cudworth-Earth-Images-5

Cudworth-Earth-Images-5

Image courtesy Flicker, adamcudworth

ಅಮೇರಿಕಾದ "ನಾಸಾ" ಬಾಹ್ಯಾಕಾಶ ಯೋಜನೆಗಳಿಗಾಗಿ ಕೋಟ್ಯಾಂತರ ಮೊತ್ತದ ಡಾಲರ್ ಸುರಿಯುತ್ತಿದರೆ, ಬ್ರಿಟನ್‌ ಮೂಲದ ಹುಡುಗನೋಬ್ಬ ಕೇವಲ eBay ಇಂದ ಖರೀದಿಸಿದ ಕ್ಯಾಮೆರಾದಿಂದಲೇ ಭೂ ಮಂಡಲದ ಅದ್ಭುತ ಚಿತ್ರಗಳನ್ನು ತೆಗೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

19 ವರ್ಷ ವಯಸ್ಸಿನ ಹುಡುಗ ಆಡಮ್‌ ಕುಡ್ವರ್ತ್ ಕೇವಲ 40 ಗಂಟೆಗಳ ಅವಧಿಯಲ್ಲಿ ಸುಮಾರು 600$. ವ್ಯಯಮಾಡಿ ಈ ಮೇಲಿನ ಚಿತ್ರಣಗಳನ್ನು ಸೆರೆಹಿಡಿದಿದ್ದಾನೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಸಾಮಾನ್ಯ ಕ್ಯಾನನ್ A570 ಕ್ಯಾಮೆರಾ ಖರೀದಿಸಿದ ಹುಡುಗ ಡಬ್ಬವೊಂದಕ್ಕೆ GPS ಹಾಗೂ ರೇಡಿಯೋ ಟ್ರಾನ್ಸ್‌ಮೀಟರ್‌ ಬಳಸಿ ನಂತರ ಬಲೂನ್‌ಗಳನ್ನು ಅಳವಡಿಸಿ ಕೃತಕ ಸ್ಪೇಸ್‌ಕ್ರಾಫ್ಟ್ ತಯಾರಿಸಿ 20 ಮೈಲಿ ಮೇಲಕ್ಕೆ ಬಾಹ್ಯಾಕಾಶದಲ್ಲಿ ಹಾರಿ ಬಿಟ್ಟಿದ್ದಾನೆ, ಹುಡುಗನ ಈ ನೌಕೆ ಎಷ್ಟು ಎತ್ತರಕ್ಕೆ ಹಾರಿದೆ ಎಂದರೆ ಭೂಮಿಯ ಗೋಲಾಕರವನ್ನು ಸೆರೆಹಿಡಿಯಲು ಯಶಸ್ವಿಯಾಗಿದೆ.

ಎರೆಡುವರೆ ಗಂಟೆಗಳ ಕಾಲ ಬಾಹ್ಯಾಕಾಶ ಯಾನ ನಡೆಸಿದ ನೌಕೆಯ ಕೆಳಗಿಳಿಯುವ ಜಾಗವನ್ನು GPS ಹಾಗೂ ರೇಡಿಯೋ ಟ್ರಾನ್ಸ್‌ಮೀಟರ್‌ ಸಹಾಯದ ಮೂಲಕ ಕುಡ್ವರ್ತ್ ತನ್ನ ಮನೆಯಿಂದ 30 ಮೈಲಿ ದೂರದಲ್ಲಿ ಪತ್ತೆಹಚ್ಚಿದ್ದಾನೆ. ನೌಕೆಯಲ್ಲಿ ಅಳವಡಿಸಿದ್ದ ಸರ್ಕ್ಯೂಟ್‌ ಬೋರ್ಡ್‌ನ ನೆರವಿನಿಂದಾಗಿ ಕುಡ್ವರ್ತ್ ಅದರ ವೇಗ ಹಾಗೂ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಕೂಡ ತಿಳಿದುಕೊಂಡಿದ್ದಾನೆ.

"ನನ್ನ ಕ್ಯಾಮೆರಾವನ್ನು ಪತ್ತೆಹಚ್ಚಿ ನೋಡಿದಾಗ ನನಗೇ ಅಚ್ಚರಿಯಾಯಿತು, ಅದು ಅದ್ಭುತವೆನಿಸುವ ಫೋಟೊಗಳನ್ನು ಸೆರೆಹಿಡಿದಿತ್ತು" ಎಂದು ಕುಡ್ವರ್ತ್ ತನ್ನ ಸಂತಸ ಹಂಚಿಕೊಂಡಿದ್ದಾನೆ.

ಅಚ್ಚರಿ ಎನಿಸಿದ ಚಿತ್ರಗಳನ್ನು ಸೆರೆಹಿಡಿದಿರುವ ಕುಡ್ವರ್ತ್ ಒಬ್ಬ ಬಾಲ ವಿಜ್ಞಾನಿಯೇ ಇರಬಹುದು ಎಂದು ನೀವು ಈಗಾಗಲೇ ಭಾವಿಸಿರಬಹುದು ಆದರೆ ವಾಸ್ತವದಲ್ಲಿ ಕುಡ್ವರ್ತ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದಲ್ಲಿನ ಭೌತಶಾಸ್ತ್ರ ವಿಷಯದ ವಿದ್ಯಾರ್ಥಿಯಾಗಿದ್ದಾನೆ.

"ನನಗೆ ಖಗೋಳ ಭೌತವಿಜ್ಞಾದ ಯಾವುದೇ ಹಿನ್ನಲೆಯಿಲ್ಲ ನಾನೊಬ್ಬ ಇಂಜಿನೀಯರಿಂಗ್‌ ವಿದ್ಯಾರ್ಥಿ, ಏನಾದರು ಅದ್ಭುತ ಕೆಲಸವನ್ನು ಮಾಡಲು ಕೋಟ್ಯಾಂತರ ಹಣ ವೆಚ್ಚವಾಗುತ್ತದೆ ಎಂದು ಜನ ಭಾವಿಸುತ್ತಾರೆ ಆದರೆ ನಾ ಅದನ್ನು ಕೇವಲ ಕೆಲವೇ ಮೊತ್ತದ ಹಣದಲ್ಲಿ ಮಾಡಿ ತೋರಿಸಿದ್ದೇನೆ " ಎಂದು ಕುಡ್ವರ್ತ್ ಟೆಲಿಗ್ರಾಫ್‌ಗೆ ತಿಳಿಸಿದ್ದಾನೆ.

ಸಾಮಾನ್ಯ ಕ್ಯಾಮೆರಾ ಬಳಸಿ ಬ್ರಿಟನ್‌ ಮೂಲದ ಹುಡುಗನೊಬ್ಬ ಭೂ ಮಂಡಲದ ಅಮೋಘವನಿಸುವ ಚಿತ್ರ ತೆಗೆದಿದ್ದಾನೆ. cudworth,earth pictures,makeshift spacecraft,NASA, camera,GPS,eBay,ಕುಡ್ವರ್ತ್,ಅರ್ತ್ ಪಿಕ್ಚರ್ಸ್,ಸ್ಪೇಸ್‌ಕ್ರಾಫ್ಟ್‌,ನಾಸಾ,ಕ್ಯಾಮೆರಾ, ಜಿಪಿಎಸ್,ಇ ಬೇ,

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X