ಮೊಬೈಲ್‌ನಿಂದಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುಕ್ಕೆ ಕಾರಣಗಳು ಏನು?
ವೀಕ್ಷಿಸಬಾರದ ವೀಡಿಯೊವನ್ನು ಮಗ ವೀಕ್ಷಿಸುತ್ತಿರುವುದಕ್ಕೆ ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕಾಗಿ ಸೈಕತ್ ಎಂಬ ಹುಡುಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚಿಗೆ ಪಶ್ಚಿಮ ಬಂಗಾಳದ ಗರಿಯಾದಲ್ಲಿ ನಡೆದಿದೆ. ಓದಿನಲ್ಲಿ ರ್ಯಾಂಕ್ ಗಳಿಸಿದ್ದಕ್ಕಾಗಿ ಪೋಷಕರು ಗಿಫ್ಟ್ ಆಗಿ ನೀಡಿದ ಒಂದು ಮೊಬೈಲ್ ಆತನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ.
ಮೊಬೈಲ್ ಕೊಡಿಸಿದ ಬಳಿಕ ಸೈಕತ್ ಮೊಬೈಲ್ ವೀಕ್ಷಣೆಯನ್ನು ಚಟವನ್ನಾಗಿಸಿಕೊಂಡಿದ್ದ. ಓದಿನಲ್ಲೂ ಆಸಕ್ತಿ ತೋರುತ್ತಿರಲಿಲ್ಲ, ಮೊಬೈಲ್ ಇಲ್ಲದೆ ರಾತ್ರಿ ಕಳೆಯದಂತಾಗಿದ್ದ. ಹೀಗಾಗಿ ಆತನ ನಡವಳಿಕೆ ಬಗ್ಗೆ ಸಂಶಯಗೊಂಡ ನಂತರ ಅವನ ಮೊಬೈಲ್ ನೋಡಿದರೆ, ಅಶ್ಲೀಲ ವೀಡಿಯೊಗಳನ್ನು ಆತನೋಡುತ್ತಿರುವುದು ಗಮನಕ್ಕೆ ಬಂತು ಎಂದು ತಾಯಿ ಹೇಳಿ ಕಣ್ಣೀರಿಡುತ್ತಿದ್ದಾರೆ.

ಇನ್ನು ಈ ಘಟನೆ ವರದಿಯಾಗುವ ಸ್ವಲ್ಪ ದಿನಗಳ ಹಿಂದಷ್ಟೇ ಒಂದು ಅಧ್ಯಯನ ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳು ಮಧುಮೇಹ ರೋಗಕ್ಕೆ ಮಾತ್ರವಲ್ಲದೆ ಮಾನಸಿಕ ರೋಗಕ್ಕೂ ಸಹ ತುತ್ತಾಗುತ್ತಿದ್ದಾರೆ ಎಂದು ಹೇಳಿತ್ತು. ಮೊಬೈಲ್ ಎಂಬ ಮಾಯಾ ಜಗತ್ತು ಮಕ್ಕಳ ಮನಸ್ಸು ಮತ್ತು ಆರೋಗ್ಯವನ್ನು ಹೇಗೆ ಹಾಳುಮಾಡುತ್ತಿದೆ ಎಂದು ವರದಿಯಲ್ಲಿ ಸಂಪೂರ್ಣವಾಗಿ ವಿವರಿಸಿತ್ತು.

10,000 ಮಕ್ಕಳ ಮೇಲೆ ಅಧ್ಯಯನ!
ಮೊಬೈಲ್ ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ತಿಳಿಯುವುದರ ಸಲುವಾಗಿ 10,000 ಕ್ಕೂ ಹೆಚ್ಚು ಮಕ್ಕಳ ಮೇಲೆ ನಿಗಾವಹಿಸಿ ಅಧ್ಯಯನ ವರದಿ ಸಿದ್ದಪಡಿಸಲಾಗಿದೆ. ವರದಿಯಲ್ಲಿ ಮೊಬೈಲ್‌ನಿಂದ ಮಕ್ಕಳ ಮಾನಸಿಕ ಮತ್ತು ದೇಹಾರೋಗ್ಯ ಎರಡೂ ಹಾಳಾಗುತ್ತದೆ ಎಂದು ತಿಳಿಸಲಾಗಿದೆ.!

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.!
ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ಮಕ್ಕಳ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಸಂಶೋಧನೆ ತಿಳಿಸಿದೆ.!!

ಮೊಬೈಲ್‌ನಿಂದ ಮಾನಸಿಕ ಒತ್ತಡ.!
ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ.!

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.!
ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳ ನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರೀತಿಯೇ ಔಷದ.!
ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ.!


Click it and Unblock the Notifications