18 ರ ತರುಣಿಯ ಸಾಧನೆ: 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್

By Shwetha
|

ಇಂದಿನ ಟೆಕ್ ಜಗತ್ತು ಹೆಚ್ಚು ಬಳಕೆಯಲ್ಲಿರುವ ಅಂಶಗಳನ್ನು ಅನ್ವೇಷಿಸುತ್ತಿದೆ ಮತ್ತು ಆ ಅನ್ವೇಷಣೆಗಳು ನಮ್ಮ ನಿತ್ಯಜೀವನದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದೆನಿಸುತ್ತಿದೆ. ಫೋನ್ ಚಾರ್ಜಿಂಗ್ ಎಂಬುದು ತೀರದ ಸಮಸ್ಯೆಯಾಗಿದ್ದು ಈ ಸಮಸ್ಯೆ ನಿವಾರಣೆಗಾಗಿ ಹಲವಾರು ಶ್ರಮಗಳು ನಡೆಯುತ್ತಲೇ ಇದೆ. ಆದರೆ ಇದಕ್ಕೆ ತಕ್ಕುದಾದ ಪರಿಹಾರ ಮಾತ್ರ ಇನ್ನೂ ಕಂಡುಬಂದಿಲ್ಲ. ಆದರೆ ತಮ್ಮ ಪ್ರಯತ್ನವನ್ನು ವಿಜ್ಞಾನಿಗಳು ನಡೆಸುತ್ತಲೇ ಬಂದಿದ್ದಾರೆ.

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ಇಂದಿನ ಲೇಖನದಲ್ಲಿ 18 ರ ಹುಡುಗಿಯೊಬ್ಬಳು ನಿಮ್ಮ ಫೋನ್‌ನ ಚಾರ್ಜಿಂಗ್ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಆಕೆ ಈ ಅನ್ವೇಷಣೆಗಾಗಿ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ $50,000 ಬಹುಮಾನವನ್ನು ಗಳಿಸಿದ್ದಾಳೆ. ನಿಮ್ಮ ಫೋನ್ ಬ್ಯಾಟರಿ 20 ರಿಂದ 30 ಸೆಕೆಂಡ್‌ಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ ಎಂಬುದೇ ಆಕೆಯ ಅನ್ವೇಷಣೆಯಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ.

ಸೂಪರ್‌ಕ್ಯಾಪಸಿಟರ್

ಸೂಪರ್‌ಕ್ಯಾಪಸಿಟರ್

ಅತಿ ವೇಗದಲ್ಲಿ ಫೋನ್ ಅನ್ನು ಚಾರ್ಜ್ ಮಾಡುವ ಡಿವೈಸ್ ಹೆಸರಾಗಿದೆ ಸೂಪರ್‌ಕ್ಯಾಪಸಿಟರ್.

ರೀಚಾರ್ಜ್ ಬ್ಯಾಟರಿ

ರೀಚಾರ್ಜ್ ಬ್ಯಾಟರಿ

ಇತರೆ ರೀಚಾರ್ಜ್ ಬ್ಯಾಟರಿಗಳಿಗೆ ಹೋಲಿಸಿದಾಗ ಇದು 1,000 ಸೈಕಲ್ ಉತ್ತಮವಾಗಿದೆ ಎಂಬುದು ಅನ್ವೇಷಕಿ ಏಶಾ ಕೇರಾ ಮಾತು

ನ್ಯಾನೊಕೆಮೆಸ್ಟ್ರಿ ಅಭ್ಯಸಿಸುವಂತೆ ಮಾಡಿದೆ

ನ್ಯಾನೊಕೆಮೆಸ್ಟ್ರಿ ಅಭ್ಯಸಿಸುವಂತೆ ಮಾಡಿದೆ

ಕೇರಾ ಕೂಡ ಸ್ಮಾರ್ಟ್‌ಫೋನ್ ಬ್ಯಾಟರಿ ಅತಿ ಬೇಗನೇ ಮುಗಿದುಹೋಗುವ ಸಮಸ್ಯೆಯನ್ನು ಎದುರಿಸುತ್ತಿದ್ದರು. ಸೂಪರ್‌ಕ್ಯಾಪಸಿಟರ್ ಅನ್ವೇಷಣೆಯು ಆಕೆಯನ್ನು ನ್ಯಾನೊಕೆಮೆಸ್ಟ್ರಿ ಅಭ್ಯಸಿಸುವಂತೆ ಮಾಡಿದೆಯಂತೆ.

ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಫೂರ್ತಿ

ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಫೂರ್ತಿ

ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ಅನ್ವೇಷಣೆಯು ನನಗೆ ಕೆಲಸ ಮಾಡಲು ಸ್ಫೂರ್ತಿಯನ್ನು ನೀಡಿದೆ ಎಂಬುದು ಯುವ ಸಂಶೋಧಕಿಯ ಹೆಮ್ಮೆಯ ಉತ್ತರವಾಗಿದೆ.

ಎಲ್‌ಇಡಿಯಾಗಿ ಪರಿವರ್ತಿಸಿ ಸಾಧನೆ

ಎಲ್‌ಇಡಿಯಾಗಿ ಪರಿವರ್ತಿಸಿ ಸಾಧನೆ

ಆಕೆಯ ಅನ್ವೇಷಣೆಯು ಸೂಪರ್‌ಕ್ಯಾಪಸಿಟರ್ ಅನ್ನು ಎಲ್‌ಇಡಿಯಾಗಿ ಪರಿವರ್ತಿಸಿ ಆಕೆ ನಡೆಸಿದ್ದಾರೆ. ಇದನ್ನು ಸೆಲ್‌ಫೋನ್‌ಗಳ ಒಳಗೆ ಕೂರಿಸಿ ವೇಗವಾಗಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಅವರು ಅನ್ವೇಷಿಸಿದ್ದಾರೆ.

ಯುವ ವಿಜ್ಞಾನಿ

ಯುವ ವಿಜ್ಞಾನಿ

ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ ಏಂಡ್ ಇಂಜಿನಿಯರಿಂಗ್ ಫೇರ್‌ನಲ್ಲಿ ಯುವ ವಿಜ್ಞಾನಿ ಎಂಬ ಹೆಗ್ಗಳಿಕೆಯನ್ನು ಈಕೆಗೆ ತಂದುಕೊಟ್ಟಿದೆ.

18 ರ ಹುಡುಗಿಯ ಸಾಧನೆ

18 ರ ಹುಡುಗಿಯ ಸಾಧನೆ

18 ರ ಹುಡುಗಿಯೊಬ್ಬಳ ಈ ಸಾಧನೆ ನಿಜಕ್ಕೂ ಮೆಚ್ಚುವಂತಾಗಿದ್ದು ಬರೇ 20 ಸೆಕೆಂಡ್‌ಗಳ ಚಾರ್ಜಿಂಗ್ ವೇಗ ಜನಸಾಮಾನ್ಯರಿಗೆ ಸಹಾಯಕ ಎಂದೆನಿಸಿದೆ.

ವಿಜ್ಞಾನ ಮೇಳದಲ್ಲಿ ಬಹುಮಾನ

ವಿಜ್ಞಾನ ಮೇಳದಲ್ಲಿ ಬಹುಮಾನ

ಈ ಅನ್ವೇಷಣೆಗಾಗಿ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ $50,000 ಬಹುಮಾನವನ್ನು ಗಳಿಸಿದ್ದಾಳೆ.

Best Mobiles in India

English summary
AN 18-year-old girl has invented a super-capacitor that could one day charge your phone in less than 20 seconds...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X