ಟಿಕ್‌ಟಾಕ್ ವೀಡಿಯೋಗೆ ಲೈಕ್ಸ್ ಬರಲಿಲ್ಲ ಎಂದು ಯುವಕ ಆತ್ಮಹತ್ಯೆ! ನೀವು ಎಚ್ಚರ!
ಟಿಕ್‌ಟಾಕ್ ವೀಡಿಯೋಗೆ ಹೆಚ್ಚು ಲೈಕ್ಸ್ ಬರಲಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 39 ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನು ಈ ಘಟನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವಾತ ಕೇವಲ 18 ವರ್ಷದ ಯುವಕ ಅನ್ನೊದು ಇನ್ನೂ ಆಘಾತಕಾರಿಯಾದ ವಿಷಯವಾಗಿದೆ. ತಾನು ಮಾಡಿದ್ದ ಟಿಕ್‌ಟಾಕ್ ವಿಡಿಯೋಗೆ ಹೆಚ್ಚಿನ ಪ್ರಮಾಣದಲ್ಲಿ ಲೈಕ್ಸ್ ಬಾರದೇ ಇರೋದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಹೌದು, ಜನಪ್ರಿಯ ಸೊಶೀಯಲ್ ಮಿಡಿಯಾ ಆಪ್ ಟಿಕ್‌ಟಾಕ್‌ನಲ್ಲಿ ಈ ಯುವಕ ವೀಡಿಯೊಗಳನ್ನ ಮಾಡಿ ಹರಿಬಿಟ್ಟಿದ್ದ ಆದರೆ ಕೆಲ ದಿನಗಳಿಂದ ಈತನ ವಿಡಿಯೋಗಳಿಗೆ ಯಾವುದೇ ಲೈಕ್ಸ್ ಬಂದಿರಲಿಲ್ಲ. ಇದೇ ಕಾರಣಕ್ಕೆ ಮನನೊಮದು ನೇಣುಬಿಗಿದುಕೊಂಡು ಸಾವಿಗೀಡಾಗಿದ್ದಾನೆ ಎಂದು ಪೊಲೀಸರಿಗೆ ಯುವಕನ ತಮದೆ ತಾಯಿ ತಿಳಿಸಿದ್ದಾರೆ. ಈ ಘಟನೆ ಇದೇ ಗುರುವಾರ ನಡೆದಿದ್ದು, ಘಟನೆಯ ಸ್ಥಳದಲ್ಲಿ ಯಾವುದೇ ರೀತಿಯ ಡೆತ್‌ನೋಟ್ ಸಿಕ್ಕಿಲ್ಲ,ಆದರೆ ಟಿಕ್‌ಟಾಕ್ ಗೀಳು ಈತನ ಸಾವಿಗೆ ಕಾರಣವಾಯ್ತು ಅನ್ನುವುದು ಮೆಲ್ನೋಟಕೆ ಸಾಭಿತಾಗಿದೆ.

ಇನ್ನು ಪೊಲೀಸ್ ಅಧಿಕಾರಿಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಮೂಲತಃ ಸರ್ಲಾಪುರ ಗ್ರಾಮದವನಾಗಿದ್ದು, ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಇಬ್ಬರೂ ಕೂಡ ನೋಯ್ಡಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇದಿದ್ದರಿಂದ ಹೆಚ್ಚಿನ ಸಮಯದಲ್ಲಿ ಟಿಕ್‌ಟಾಕ್‌ನಲ್ಲಿ ವಿಡಿಯೋಗಳನ್ನ ಕ್ರಿಯೆಟ್ ಮಾಡಿ ಹರಿಬಿಡ್ತಿದ್ದ, ಆದರೆ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲೈಕ್ಸ್ ಬರಲಿಲ್ಲ ಅನ್ನೊ ಏಕೈಕ ಕಾರಣಕ್ಕೆ ಅಮೂಲ್ಯವಾದ ಜೀವವನ್ನೇ ಕಳೆದುಕೊಂಡಿದ್ದಾನೆ.

ಅಲ್ಲದೆ ಇದೇ ವಿಚಾರವಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಕೆಲವು ನೆರೆಹೊರೆಯವರೊಂದಿಗೆ ಕೂಡ ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರು ಕೂಡ ಈ ಯುವಕ ಕಳೆದ ಕೆಲವು ದಿನಗಳಿಂದ ಟಿಕ್‌ಟಾಕ್ ವೀಡಿಯೋ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದರ ಬಗ್ಗೆ ಮಾಹಿತಿ ನಿಡಿದ್ದಾರೆ ಎನ್ನಲಾಗಿದೆ. ರಾತ್ರಿ ವೇಳೆಯಲ್ಲಿಯೂ ಸಹ ಟಿಕ್‌ಟಾಕ್ ವೀಡಿಯೋಗಳನ್ನ ಕ್ರಿಯೆಟ್ ಮಾಡುವತ್ತ ತನ್ನ ಗಮನ ನೀಡ್ತಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಯುವಕ ಟಿಕ್‌ಟಾಕ್ ವ್ಯಸನಕ್ಕೆ ಬಲಿಯಾಗಿರೋದು ದುರಂತವೇ ಸರಿ.

ಇನ್ನು ಈತ ಪ್ಯಾನಿಗೆ ನೇಣು ಬಿಗಿದುಕೊಂಡಿದ್ದ ಸಮಯದಲ್ಲಿ ಯಾರಿಗೂ ತಿಳಿದಿರಲಿಲ್ಲ. ನಂತರ ಆತನ ದೇಹವನ್ನು ಹೊರತರುವುದಕ್ಕೆ ಬಾಗಿಲು ಒಡೆದು ತರಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಏನೇ ಆಗಲಿ ಟಿಕ್‌ಟಾಕ್, ಸೇರಿದಂತೆ ಯಾವುದೇ ಸೊಶೀಯಲ್ ಮೀಡಿಯಾ ಆಪ್‌ಗಳಲ್ಲಿ ಲೈಕ್ಸ್ ಬಾರದೇ ಹೊದ ಮಾತ್ರಕ್ಕೆ ಜೀವ ಕಳೆದುಕೊಳ್ಳುವುದು ದುರಂತವೇ ಸರಿ. ಟೆಕ್ನಾಲಜಿಯ ವರವಾಗಿ ಈ ಮಾದರಿಯ ಆಪ್‌ಗಳು ಇಂದು ಅಸ್ತಿತ್ವದಲ್ಲಿವೇ ಅಷ್ಟೇ ಇವುಗಳನ್ನ ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಿಕೊಳ್ಳಬೇಕು,ಇದನ್ನೇ ಗೀಳಾಗಿ ಮಾಡಿಕೊಂಡರೆ ಇಂತಹ ದುರ್ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲು ನಮ್ಮ ಯುವ ಜನತೆ ಇಂತಹ ಗೀಳಿನಿಂದ ಹೊರಬರುವುದು ತುಂಬಾ ಒಳಿತು ಅನ್ನೊದು ಮನಶಾಸ್ತ್ರಜ್ಞರ ವಾದವಾಗಿದೆ.


Click it and Unblock the Notifications




