Subscribe to Gizbot

ಆಪಲ್ ಐಪ್ಯಾಡ್ ಗಾಗಿ ಕಿಡ್ನಿ ಮಾರಿದ ಚೀನೀ

Posted By: Varun
ಆಪಲ್ ಐಪ್ಯಾಡ್ ಗಾಗಿ ಕಿಡ್ನಿ ಮಾರಿದ ಚೀನೀ
ಆಪಲ್ ಮೇಲಿನ ವ್ಯಾಮೋಹ ಇಡೀ ಜಗತ್ತಿಗೇ ಗೊತ್ತು. ಆಪಲ್ ಐಪ್ಯಾಡ್ ಆದರೂ ಇರ್ಲಿ, ಐಫೋನ್ ಆದರೂ ಇರ್ಲಿ ಆಪಲ್ ಸ್ಟೋರ್ ಮುಂದೆ ಸರತೀಲಿ ನಿಂತು ರಾತ್ರಿಯೆಲ್ಲಾ ಕಾದು ತಾವೇ ಮೊದಲ ಟ್ಯಾಬ್ಲೆಟ್/ಐಫೋನ್ ಅನ್ನ ಫೀಲ್ ಮಾಡ್ಬೇಕು ಅನ್ನೋ ಜನ ಸಿಕ್ಕಾಪಟ್ಟೆ ಇದ್ದಾರೆ.

ಆದ್ರೆ ಕನ್ನಡದಲ್ಲಿ ಅದೇನೋ ಗಾದೆ ಇದ್ಯಲ್ಲಾ " ಹರ್ಷದ ಕೂಳಿಗೆ ನೆಚ್ಚಿಕೊಂಡು ವರ್ಷದ ಕೂಳು ಬಿಟ್ಟರು" ಅನ್ನೋ ರೀತಿಲಿ ಚೀನಾದ ಹುನಾನ್ ಪ್ರಾಂತ್ಯದ 17 ವರ್ಷದ ಹುಡುಗ ವಾಂಗ್ ಅನ್ನುವಾತ ಐಫೋನ್ ಹಾಗು ಟ್ಯಾಬ್ಲೆಟ್ ಮೇಲಿನ ವ್ಯಾಮೋಹಕ್ಕೆ ತನ್ನ ಕಿಡ್ನಿಯನ್ನ ಮಾರಿಕೊಂಡಿದ್ದು ಈಗ ಕೋರ್ಟ್ ಮೆಟ್ಟಿಲನ್ನು ಹತ್ತುವ ಪರಿಸ್ಥಿತಿ ಬಂದೊದಗಿದೆ.

ವಾಂಗ್ ಮಾಡಿದ್ದೇನಂದ್ರೆ ಒಂದು ಆಪಲ್ ಐಫೋನ್ ಹಾಗು ಐಪ್ಯಾಡ್ ನ ತಗೊಳ್ಳಕ್ಕೆ 1,900 ಪೌಂಡ್ (ಸುಮಾರು 1.6 ಲಕ್ಷ ರೂಪಾಯಿ)ಗೆ ತನ್ನ ಒಂದು ಕಿಡ್ನಿಯನ್ನೇ ಮಾರಿದ್ದಾನೆ. ಆದ್ರೆ ಇಷ್ಟೆಲ್ಲಾ ದುಡ್ಡು ಹೇಗೆ ಬಂತು ಅಂತಾ ಆತನ ತಾಯಿಗೆ ಡೌಟ್ ಬಂದು ಆಕೆ ಬಲವಂತ ಮಾಡಿಕೇಳಿದಾಗ ಆತ ನಿಜವನ್ನ ಒಪ್ಪಿಕೊಂಡಿದ್ದಾನೆ.

ಇದು ಪೊಲೀಸರಿಗೂ ತಿಳಿದು ಈಗ ವಾಂಗ್, ಆತನ ಕಿಡ್ನಿ ತೆಗೆದ ಡಾಕ್ಟರ್ ಸೇರಿದಂತೆ 5 ಜನರು ಈಗ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವಂತಾಗಿದೆ.

ಚೀನಾದಲ್ಲಿ ಆಪಲ್ ಉತ್ಪನ್ನಗಳಿಗೆ ಭಾರೀ ಕ್ರೇಜ್ ಇದ್ದು, ಬೆಲೆ ಜಾಸ್ತಿಯಾಗಿರೋದ್ರಿಂದ ಹುಡುಗರು ಈ ರೀತಿ ಮಾಡಿ ಖರೀದಿ ಮಾಡುವ ಸುಮಾರು ಕೇಸುಗಳು ವರದಿಯಾಗಿವೆ. ಒಟ್ಟಿನಲ್ಲಿ ಕ್ರೈಂ ಮಾಡೋ ಲೆವೆಲ್ ಗೆ ಆಪಲ್ ಹುಚ್ಚು ಹಿಡಿಸಿರೋದು ಕೇಳಿದ್ರೆ ಸ್ಟೀವ್ ಜಾಬ್ಸ್ ಗೂ ಬೇಸರ ಆಗ್ಬೋದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot