ರಾತ್ರಿ ವೇಳೆ 'ಫೋನ್ ಬಳಕೆ ಆಪತ್ತು' ಎಂಬ ಜನಪ್ರಿಯ ನಂಬಿಕೆ ಸುಳ್ಳು!!

|

ರಾತ್ರಿ ವೇಳೆ ಮೊಬೈಲ್ ಬಳಕೆ ಆಪತ್ತು ಎಂದು ತಿಳಿದಿದ್ದ ಮೊಬೈಲ್\ಸ್ಮಾರ್ಟ್‌ಪೋನ್ ಪ್ರಿಯರಿಗೆ ಸಿಹಿಸುದ್ದಿಯೊಂದು ದೊರೆತಿದೆ. ರಾತ್ರಿವೇಳೆ ಮೊಬೈಲ್‌ನಲ್ಲಿ ಆಟವಾಡುವುದು, ಟಿವಿ ನೋಡುವುದು ಸೇರಿದಂತೆ ಮಲಗುವ ಮುನ್ನ ಹೆಚ್ಚು ಕಾಲ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮೊಬೈಲ್ ಬಳಕೆದಾರರ ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಅಂದರೆ, ರಾತ್ರಿ ವೇಳೆ ಮೊಬೈಲ್ ಬಳಕೆಯು ಮೊಬೈಲ್ ಬಳಕೆದಾರರ ಕಣ್ಣಿಗಷ್ಟೇ ಮಾರಕವಾಗಲಿದೆ.!

ಹಹಹ..ಹೌದು, 'ಸೈಕಾಲಜಿಕಲ್ ಸೈನ್ಸ್‌' ಜರ್ನಲ್‌ನಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ವರದಿಯು 'ಸ್ಕ್ರೀನ್‌ನ್ನು ಹೆಚ್ಚು ಕಾಲ ನೋಡುವುದು ಮಾನಸಿಕ ಆರೋಗ್ಯಕ್ಕೆ ಮಾರಕ' ಎನ್ನುವ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ. 'ಸ್ಕ್ರೀನ್‌ ಬಳಕೆ ಮತ್ತು ಹದಿಹರೆಯದವರಲ್ಲಿ ಆರೋಗ್ಯ' ಕುರಿತು ನಡೆದ ಈ ಅಧ್ಯಯನದಲ್ಲಿ 17,000 ಹದಿಹರೆಯದವರಿಂದ ಮಾಹಿತಿ ಕಲೆಹಾಕಲಾಗಿದ್ದು, ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮೊಬೈಲ್ ಬಳಕೆದಾರರ ಆರೋಗ್ಯದ ಮೇಲೆ ಪರಿಣಾಮವಿಲ್ಲ ಎಂದು ಅಧ್ಯಯನ ತಿಳಿಸಿದೆ.

ರಾತ್ರಿ ವೇಳೆ 'ಫೋನ್ ಬಳಕೆ ಆಪತ್ತು' ಎಂಬ ಜನಪ್ರಿಯ ನಂಬಿಕೆ ಸುಳ್ಳು!!

'ಡಿಜಿಟಲ್‌ ಸ್ಕ್ರೀನ್ ಬಳಕೆಯು ಮೊಬೈಲ್ ಬಳಕೆದಾರರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನಮಗೆ ಈ ಅಧ್ಯಯನದ ಮೂಲಕ ತಿಳಿದುಬಂದಿದೆ ಎಂದು ಸಂಶೋಧಕ ಆಮಿ ಆರ್ಬೆನ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಹೆಚ್ಚು ಕಾಲ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮೊಬೈಲ್ ಬಳಕೆದಾರರ ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎಂಬುದು ಸಾಬೀತಾಗಿದೆ. ಆದರೆ, ಈ ಕೆಳಗಿನ ಸಮಸ್ಯೆಗಳು ಮಾತ್ರ ಮೊಬೈಲ್ ಬಳಕೆದಾರರನ್ನು ಬಹುವಾಗಿ ಕಾಡುತ್ತಿವೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.

ನರಗಳ ಬೆಳವಣಿಗೆಯಲ್ಲಿ ತೊಂದರೆ.

ನರಗಳ ಬೆಳವಣಿಗೆಯಲ್ಲಿ ತೊಂದರೆ.

ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.

ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ

ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ

ಮೊಬೈಲ್‌ ಅನ್ನು ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಜೇಬಿನಲ್ಲಿ ಇಡುವುದರಿಂದ ಆಗುವ ಸಮಸ್ಯೆಗಳು ಹೆಚ್ಚಿವೆ. ಜೇಬಿನಲ್ಲಿ ಮೊಬೈಲ್ ಇದ್ದಾಗ ಅದರ ರೇಡಿಯೇಷನ್ ದೇಹದಲ್ಲಿ ಮೇಲೆ 7 ಪಟ್ಟು ಅಧಿಕ ಬಿದ್ದು, ಡಿಎನ್‌ಎ ಸಂರಚನೆಯಲ್ಲಿ ವ್ಯತ್ಯಾಸ ಉಂಟಾಗಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಸಾವಿಗೂ ಕಾರಣವಾಗಬಹುದು

ಸಾವಿಗೂ ಕಾರಣವಾಗಬಹುದು

ಮೊಬೈಲ್ ಸಮೀಪ ಇಟ್ಟು ಮಲಗುವುದರಿಂದ ದೇಹದ ಮೇಲಾಗುವ ಪರಿಣಾಮ ಮಾತ್ರ ಭೀಕರವಾದದ್ದು ಎಂದು ಮತ್ತೊಂದು ಸಂಶೋಧನೆ ಅಭಿಪ್ರಾಯಪಟ್ಟಿದೆ. ಮೊಬೈಲ್ ನಿಮ್ಮ ಸವಿನಿದ್ದೆಗೆ ಭಂಗ ಉಂಟು ಮಾಡಿ ನಿದ್ರಾಹೀನತೆ ಸಮಸ್ಯೆ, ದೃಷ್ಟಿ ಕಳೆದುಕೊಳ್ಳುವ ಸಮಸ್ಯೆಗಳು ಸೇರಿಂದರೆ, ಮೊಬೈಲ್‌ನ ಅತಿ ಬಳಕೆ ಸಾವಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದೆ.

Most Read Articles
Best Mobiles in India

English summary
While psychological science can be a powerful tool for understanding the link ... and professional lives, research concerning digital screen use and its effects on. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X