Home
ಸುದ್ದಿಜಾಲ

ಸುಪ್ರೀಂ ಕೋರ್ಟ್‌ನ ಆದೇಶಕ್ಕೂ ಬೆಲೆ ನೀಡುತ್ತಿಲ್ಲ 'ಟೆಲಿಕಾಂ' ಕಂಪೆನಿಗಳು!!

'ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಯಾವತ್ತೂ ಹೇಳಿಲ್ಲ' ಎಂದು ಬುಧವಾರ ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ, ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವಂತೆ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ಪೀಡಿಸುತ್ತಿ ವೆ.

By Bhaskar N J

'ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಯಾವತ್ತೂ ಹೇಳಿಲ್ಲ' ಎಂದು ಬುಧವಾರ ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ, ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವಂತೆ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ಪೀಡಿಸುತ್ತಿದ್ದರೆ, ಈ ಬಗ್ಗೆ ದೂರಸಂಪರ್ಕ ಸಚಿವಾಲಯ ಜಾಣ ಕವುಡುತನ ತೋರುಸುತ್ತಿರುವುದು ವರದಿಯಾಗಿದೆ.

ಹೌದು, ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ, ಮೊಬೈಲ್‌ ಸಂಖ್ಯೆ ಜತೆ ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂದೇಶಗಳು ಗ್ರಾಹಕರಿಗೆ ಬರುತ್ತಿವೆ. ಕಿರಿಕಿರಿ ಉಂಟುಮಾಡುವ ಕರೆಗಳು, ಸಂದೇಶಗಳು ಮತ್ತು ಮೇಲ್‌ಗಳನ್ನು ಕಳುಹಿಸುವ ಮೂಲಕ ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಿಸುವಂತೆ ನಿರಂತರವಾಗಿ ತೊಂದರೆ ನೀಡುತ್ತಿರುವುದು ಕಂಡುಬಂದಿದೆ.

ಸುಪ್ರೀಂ ಕೋರ್ಟ್‌ನ ಆದೇಶಕ್ಕೂ ಬೆಲೆ ನೀಡುತ್ತಿಲ್ಲ 'ಟೆಲಿಕಾಂ' ಕಂಪೆನಿಗಳು!!

ಇನ್ನು ಆಧಾರ್ ಸಂಖ್ಯೆಯನ್ನು ಹೊಂದಿರದ ಜನರಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ನೀಡಲು ಚಿಲ್ಲರೆ ಕರೆನ್ಸಿ ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿ, ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ವಿಷಯ ಮತ್ತಷ್ಟು ಬಿಡಗಾಯಿಸಿದ್ದು, ಹಾಗಾದರೆ, ಏನಿದು ಟೆಲಿಕಾಂ ಕಂಪೆನಿಗಳ ಕೀಟಲೆ ಎಂಬುದನ್ನು ಮುಂದೆ ತಿಳಿಯಿರಿ.!

ಸುಪ್ರೀಂ ಕೋರ್ಟ್‌ ಏನು ಹೇಳಿತ್ತು?

ಸುಪ್ರೀಂ ಕೋರ್ಟ್‌ ಏನು ಹೇಳಿತ್ತು?

ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ನಂತರ ‘ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಯಾವತ್ತೂ ಹೇಳಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಸ್ಪಷ್ಟಪಡಿಸಿತ್ತು.

ಗ್ರಾಹಕರಿಗೆ ಕಿರಿಕಿರಿ!

ಗ್ರಾಹಕರಿಗೆ ಕಿರಿಕಿರಿ!

ಮೊಬೈಲ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಒತ್ತಡ ಹಾಕಬಾರದು ಎಂದು ತಿಂಗಳ ಹಿಂದೆಯೇ ಆದೇಶ ನೀಡಿದ್ದ ನ್ಯಾಯಾಲಯದ ಆದೇಶವನ್ನು ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ನಿರ್ಲಕ್ಷ್ಯ ಮಾಡುತ್ತಿವೆ ಏರ್‌ಟೆಲ್‌,ಐಡಿಯಾ ಸೇರಿದಂತೆ ಎಲ್ಲಾ ಸೆಲ್ಯುಲಾರ್ ಕಂಪನಿಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಾ ಪೀಡಿಸುತ್ತಿವೆ.

ಆಧಾರ್ ಇಲ್ಲದೆ ಸಿಮ್ ಇಲ್ಲ!!

ಆಧಾರ್ ಇಲ್ಲದೆ ಸಿಮ್ ಇಲ್ಲ!!

ಆಧಾರ್ ಸಂಖ್ಯೆಯನ್ನು ಹೊಂದಿರದ ಜನರಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ನೀಡಲು ಚಿಲ್ಲರೆ ಕರೆನ್ಸಿ ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆ. ಈ ಮೂಲಕ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ನಿಯಮಗಳನ್ನು ಹಾಗೂ ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿದ್ದರೆ, ದೂರಸಂಪರ್ಕ ಸಚಿವಾಲಯ ಜಾಣ ಕಿವುಡುತನ ತೋರುತ್ತಿರುವುದು ಸ್ಪಷ್ಟವಾಗಿದೆ.

ಸರಳವಾಗಿ ಅನುಸರಿಸುತ್ತಿವೆ!

ಸರಳವಾಗಿ ಅನುಸರಿಸುತ್ತಿವೆ!

ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕುರಿತು ಸರ್ಕಾರ ಹಿಂದೆ ನೀಡಿದ ನಿರ್ದೇಶನದಂತೆ ಕಂಪನಿಗಳು ‘ಸರಳವಾಗಿ ಅನುಸರಿಸುತ್ತಿವೆ' ಎಂದು ಸಿಒಎಐ ಸಮೂಹದ ಲಾಬ್ಬಿ ಸಂಸ್ಥೆ ಹೇಳಿದೆ. ಹಾಗಾಗಿಯೇ, ಟೆಲಿಕಾಂ ಕಂಪೆನಿಗಳು ಈ ಮೊದಲು ಇದ್ದ ಮಾದರಿಯಲ್ಲಿ ಸಿಮ್‌ಗಳನ್ನು ಜನರಿಗೆ ನೀಡಲು ಹಿಮದೆಟು ಹಾಕುತ್ತಿವೆ ಎನ್ನಲಾಗುತ್ತಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಪ್ರತಿಕ್ರಿಯೆ ನೀಡುತ್ತಿಲ್ಲ!

ಪ್ರತಿಕ್ರಿಯೆ ನೀಡುತ್ತಿಲ್ಲ!

ಈ ಸಂಬಂಧ ದೂರಸಂಪರ್ಕ ಸಚಿವಾಲಯಕ್ಕೆ ಪ್ರಶ್ನಾವಳಿಯನ್ನು ಕಳುಹಿಸಿದರೂ ಸಚಿವಾಲಯ ಉತ್ತರ ನೀಡಿಲ್ಲ. ಟೆಲಿಕಾಂನ ಕಾರ್ಯದರ್ಶಿ ಅರುಣ್‌ ಸುಂದರ್‌ರಾಜನ್‌ ಅವರು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಸಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ವಿಷಯವಾಗಿ ಟೆಲಿಕಾಂ ನಿರ್ವಾಹಕರು ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Best Mobiles in India

English summary
The voice and text messages reminding you to link your mobile SIM card to Aadhaar is unlikely to stop anytime soon even as the Supreme Court recently questioned the compulsory linkage of the biometric identity.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+