Home
ಸುದ್ದಿಜಾಲ

ಟೆಲಿಕಾಂಗೆ ಕಂಪೆನಿಗಳಿಗೆ ಮತ್ತೆ ಶಾಕ್ ನೀಡಿದ ಟ್ರಾಯ್!!..ಗ್ರಾಹಕರಿಗಿನ್ನು ಪೂರ್ತಿ ಸ್ವಾತಂತ್ರ್ಯ!!

ಶೀಘ್ರದಲ್ಲಿಯೇ ಭಾರತೀಯ ಟೆಲಿಕಾಂ ಲೋಕದಲ್ಲಿ ಮತ್ತಷ್ಟು ಪ್ರಮುಖ ಬದಲಾವಣೆಗಳು ಸಂಭವಿಸಲಿದೆ.!!

By Bhaskar N J

ಟೆಲಿಕಾಂನಲ್ಲಿಯೇ ಭಾರಿ ಬದಲಾವಣೆ ತರಬಹುದಾದದಂತಹ ಮತ್ತು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಹಲವು ಶಿಫಾರಸುಗಳನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ಇದೀಗ ಅಂಗೀಕರಿಸಿದೆ.! ಹಾಗಾಗಿ, ಶೀಘ್ರದಲ್ಲಿಯೇ ಭಾರತೀಯ ಟೆಲಿಕಾಂ ಲೋಕದಲ್ಲಿ ಮತ್ತಷ್ಟು ಪ್ರಮುಖ ಬದಲಾವಣೆಗಳು ಸಂಭವಿಸಲಿದೆ.!!

ಹೌದು, ಮುಕ್ತ ಹಾಗೂ ನ್ಯಾಯಸಮ್ಮತ ಇಂಟರ್‌ನೆಟ್‌ ಸೌಲಭ್ಯದ ಅಗತ್ಯವನ್ನು ಟ್ರಾಯ್‌ ಪ್ರತಿಪಾದಿಸಿದ್ದು, ನೆಟ್‌ ನ್ಯೂಟ್ರಾಲಿಟಿ ಅಂಶಗಳ ಬಗ್ಗೆ ಇದ್ದ ಹಲವು ಅಂಶಗಳು ಇದೀಗ ಸ್ಪಷ್ಟವಾಗಿವೆ.!! ಹಾಗಾದರೆ, ಏನವು ಟ್ರಾಯ್ ಶಿಫಾರಸುಗಳು? ಇದರಿಂದ ಗ್ರಾಹಕರಿಗೆ ಏನು ಲಾಭ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಾರತಮ್ಯಕ್ಕೆ ಅವಕಾಶವಿಲ್ಲ.!!

ತಾರತಮ್ಯಕ್ಕೆ ಅವಕಾಶವಿಲ್ಲ.!!

ಇಂಟರ್‌ನೆಟ್ ಸಂಪರ್ಕ ಕಲ್ಪಿಸುತ್ತಿರುವ ಟೆಲಿಕಾಂಗಳು ಒಂದು ಸಂಸ್ಥೆ ಅಥವಾ ತನಗೆ ಲಾಭವಿಲ್ಲದೆ ಸಂಸ್ಥೆಗಳ ವಿರುದ್ದ ನಿಧಾನಗತಿಯ ಸಂಪರ್ಕ ಅಥವಾ ಯಾವುದೇ ವಿಷಯದ ಕುರಿತು ಆದ್ಯತೆಯ ವೇಗದ ಸಂಪರ್ಕ ನೀಡುವ ತಾರತಮ್ಯವ ಯಾವುದೇ ರೂಪದಲ್ಲೂ ಅನುಸರಿಸುವಂತಿಲ್ಲ ಎಂದು ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್‌ ತಿಳಿಸಿದೆ.!!

ಉದಾಹರಣೆ ಹೀಗಿದೆ.!!

ಉದಾಹರಣೆ ಹೀಗಿದೆ.!!

ಈ ಬಗ್ಗೆ ಉದಾಹರಣೆ ನೀಡುವುದಾದರೆ, ಜಿಯೋ ಬಳಕೆದಾರರ ಏರ್‌ಟೆಲ್‌ ವೆಬ್‌ಸೈಟ್ ತೆರೆಯುವಾಗಲೂ ಕಡಿಮೆ ದರ್ಜೆಯ ಸಂಪರ್ಕ ಅಥವಾ ವೇಗದಲ್ಲಿ ವ್ಯತ್ಯಾಸ ಕಡಿಮೆಯಾಗುವಹಾಗಿಲ್ಲ.! ಹಾಗೆಯೇ ಏರ್‌ಟೆಲ್‌ನಲ್ಲಿ ಕೂಡ ಜಿಯೋ ವೆಬ್‌ಸೈಟ್ ತೆರೆಯುವ ವೇಳೆ ವೇಗದಲ್ಲಿ ವ್ಯತ್ಯಾಸ ಅಥವಾ ಇನ್ನಾವ ತೊಂದರೆಗಳು ಕಾಣಿಸುವಂತಿಲ್ಲ.!!

ಗ್ರಾಹಕರರಿಗೂ ಮಾಹಿತಿ ನೀಡಬೇಕು!!

ಗ್ರಾಹಕರರಿಗೂ ಮಾಹಿತಿ ನೀಡಬೇಕು!!

ತನ್ನ ಗ್ರಾಹಕರಲ್ಲಿಯೇ ಇಂಟರ್‌ನೆಟ್ ಸೌಲಭ್ಯ ಒದಗಿಸುವ ವಿಷಯದಲ್ಲಿ ತಾರತಮ್ಯ ಎಸಗುತ್ತಿದ್ದ ಟೆಲಿಕಾಂಗಳಿಗೂ ಶಾಕ್ ನೀಡಿರುವ ಟ್ರಾಯ್, ಯಾವುದೇ ಟೆಲಿಕಾಂ ತನ್ನ ಗ್ರಾಹಕರಲ್ಲಿಗೂ ಇಂಟರ್‌ನೆಟ್ ಒದಗಿಸುವ ವೇಳೆ ಪೂರ್ಣ ಮಾಹಿತಿ ನೀಡಬೇಕು ಮತ್ತು ಅವರಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದೆ.!!

ವಿಶೇಷ ಸೇವೆಗಳಿಗೆ ಅವಕಾಶವಿಲ್ಲ!!

ವಿಶೇಷ ಸೇವೆಗಳಿಗೆ ಅವಕಾಶವಿಲ್ಲ!!

ಟೆಲಿಕಾಂನಲ್ಲಿ ವಿಶೇಷ ಸೇವೆಗಳು ಅಥವಾ ಇತರ ವಿನಾಯಿತಿಗಳನ್ನು ಟ್ರಾಯ್‌ ತಡೆಹಿಡಿದಿದ್ದು, ಇಂಟರ್‌ನೆಟ್‌ನಲ್ಲಿ ಒಂದು ನಿರ್ದಿಷ್ಟ ಮಟ್ಟದ ಗುಣಮಟ್ಟದ ಅಗತ್ಯವಿರುವ ಕಾರಣದಿಂದಾಗಿ. ಒಟ್ಟಾರೆ ಅಂತರ್ಜಾಲ ಸಂಪರ್ಕವನ್ನು ಅಲಭ್ಯಗೊಳಿಸಿ ಕೆಲ ವಿಶೇಷ ಸೇವೆಗಳನ್ನು ನೀಡುವಂತಿಲ್ಲ ಎಂದು ಟ್ರಾಯ್‌ ತಿಳಿಸಿದೆ.( ಉದಾ: ಫೇಸ್‌ಬುಕ್ ಬೇಸಿಕ್ ಇಂಟರ್‌ನೆಟ್)!!

ಗ್ರಾಹಕರಿಗೆ ಏನು ಉಪಯೋಗ?!

ಗ್ರಾಹಕರಿಗೆ ಏನು ಉಪಯೋಗ?!

ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ಮತ್ತಷ್ಟು ಒತ್ತಡ ಹೇರಿರುವುದರಿಂದ ಗ್ರಾಹಕರಿಗೆ ಮುಕ್ತ ಹಾಗೂ ನ್ಯಾಯಸಮ್ಮತ ಇಂಟರ್‌ನೆಟ್ ಸೌಲಭ್ಯ ನಿರೀಕ್ಷೆ ಇದೆ.! ಯಾವುದೇ ಇಂಟರ್‌ನೆಟ್ ಸೇವಾ ಕಂಪೆನಿಗಳು ಗ್ರಾಹಕರ ಇಂಟರ್‌ನೆಟ್ ಬಳಕೆ ಮೇಲೆ ನಿಯಂತ್ರಣ ಹೇರದೆ ಇರುವುದು ಗ್ರಾಹಕರ ಸ್ವಾತಂತ್ರ್ಯ ಕಾಪಾಡಿದಂತಾಗಲಿದೆ.!!

Best Mobiles in India

English summary
Comes out with a series of recommendations after a long process of consultations on the issue.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+