ಟೆಲಿಗ್ರಾಮ್‌ನಿಂದ ಹೊಸ ಅಪ್ಡೇಟ್ ಬಿಡುಗಡೆ! ಹೊಸ ಅಪ್ಡೇಟ್ ವಿಶೇಷತೆ ಏನು?
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಸಾಲಿನಲ್ಲಿ ಟೆಲಿಗ್ರಾಮ್ ಕೂಡ ಸೇರಿದೆ. ಟೆಲಿಗ್ರಾಮ್ ವಾಟ್ಸಾಪ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ಟೆಲಿಗ್ರಾಮ್ ಇದೀಗ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಇತ್ತೀಚಿನ ಆವೃತ್ತಿ, ಟೆಲಿಗ್ರಾಮ್ 8.5 ಈಗ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ವೀಡಿಯೊ ಸ್ಟಿಕ್ಕರ್ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ.

ಹೌದು, ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪ್ಲಾಟ್‌ಫಾರ್ಮ್‌ಗೆ ಸೇರಿಸಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. ಇದರಲ್ಲಿ ವೀಡಿಯೋ ಸ್ಟಿಕ್ಕರ್ ವಿಶೇಷವಾಗಿದ್ದು, ವೈಯುಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಕೂಡ ಶೇರ್ ಮಾಡಬಹುದು ಎನ್ನಲಾಗಿದೆ. ಹಾಗಾದ್ರೆ ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ನಲ್ಲಿ ಯಾವೆಲ್ಲಾ ಫೀಚರ್ಸ್ ಅನ್ನು ಪರಿಚಯಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವೀಡಿಯೊ ಸ್ಟಿಕ್ಕರ್‌ಗಳು
ಟೆಲಿಗ್ರಾಮ್ 8.5 ಅಪ್ಡೇಟ್ ವಿಶೇಷತೆ ಎಂದರೆ ವೀಡಿಯೊ ಸ್ಟಿಕ್ಕರ್‌ಗಳು. ಇದರಿಂದ ನೀವು ವೀಡಿಯೋ ಸ್ಟಿಕ್ಕರ್‌ಗಳನ್ನು ನೇರವಾಗಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿಯೇ ಶೇರ್ ಮಾಡಬಹುದು. ಬಳಕೆದಾರರು ಇದೀಗ ವೀಡಿಯೊಗಳನ್ನು ಅಪ್ಲಿಕೇಶನ್‌ಗೆ ಸ್ಟಿಕ್ಕರ್‌ಗಳಾಗಿ ಆಮದು ಮಾಡಿಕೊಳ್ಳಬಹುದು. ಆಮದು ಮಾಡಿಕೊಂಡ ವೀಡಿಯೋ ಸ್ಟಿಕ್ಕರ್‌ಗಳನ್ನು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಶೇರ್ ಮಾಡಬಹುದು. WEBM ಫೈಲ್‌ನಂತೆ ವೀಡಿಯೊವನ್ನು ರಫ್ತು ಮಾಡಲು ನಿಮಗೆ ಅನುಮತಿಸುವ ಎಡಿಟಿಂಗ್ ಸಾಫ್ಟ್‌ವೇರ್ ಅಗತ್ಯವಿರುವುದರಿಂದ ಕೆಲವು ಎಡಿಟ್ ಅಗತ್ಯವಿದೆ. ಆದರಿಂದ ಟೆಲಿಗ್ರಾಮ್ ಆರಂಭಿಕರಿಗಾಗಿ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿವರವನ್ನು ನೀಡಿದೆ.

ಮೆಸೇಜ್ ರಿಯಾಕ್ಷನ್
ಟೆಲಿಗ್ರಾಮ್ ಈ ಹಿಂದಿನ ಅಪ್ಡೇಟ್‌ನಲ್ಲಿ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಪರಿಚಯಿಸಿದೆ. ಇದು ಬಳಕೆದಾರರಿಗೆ ಎಮೋಜಿ ಮೂಲಕ ರಿಯಾಕ್ಷನ್ ನೀಡುವುದಕ್ಕೆ ಅವಕಾಶ ನೀಡಲಿದೆ. ಸದ್ಯ ಹೊಸ ಅಪ್ಡೇಟ್‌ನಲ್ಲಿ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಇನ್ನಷ್ಟು ಅಪ್ಡೇಟ್ ಮಾಡಲಾಗಿದೆ. ಹೊಸ ಅಪ್‌ಡೇಟ್ ನಲ್ಲಿ ಬಿಗ್ ರಿಯಾಕ್ಷನ್ ಅನಿಮೇಷನ್‌ಗಾಗಿ ಎಮೋಜಿಯನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳಲು ಟೆಲಿಗ್ರಾಮ್ ನಿಮಗೆ ಅನುಮತಿಸುತ್ತದೆ. ಇದಕ್ಕಾಗಿ ಸಿಂಕ್ರೊನೈಸ್ ಮಾಡಲಾಗಿದೆ. ಕಳುಹಿಸುವವರು ಮತ್ತು ಸ್ವೀಕರಿಸುವವರು ಒಂದೇ ಸಮಯದಲ್ಲಿ ಒಂದೇ ರೀತಿಯ ಅನಿಮೇಷನ್‌ಗಳನ್ನು ನೋಡಲು ಅನುಮತಿಸುತ್ತದೆ.

ನ್ಯೂ ಇಂಟರ್ ಆಕ್ಟಿವ್ ಎಮೋಜಿ
ಇನ್ನು ಟೆಲಿಗ್ರಾಮ್ ತನ್ನ ಹೊಸ ಅಪ್ಡೇಟ್‌ನಲ್ಲಿ ಐದು ಹೊಸ ಇಂಟರ್ ಆಕ್ಟಿವ್ ಎಮೋಜಿಗಳನ್ನು ಸೇರಿಸಿದೆ. ಇದು ದೊಡ್ಡದಾದ, ಲೈವ್ಲಿಯರ್ ಆವೃತ್ತಿಗಳಾಗಿ ಗೋಚರಿಸುತ್ತದೆ. ಇದಲ್ಲದೆ ಅನಿಮೇಶನ್ ಅನ್ನು ರಿಪ್ಲೇ ಮಾಡಲು ಸಹ ಹೊಸ ಎಮೋಜಿಯನ್ನು ಟ್ಯಾಪ್ ಮಾಡಬಹುದು.

ಇತರ ಸೇರ್ಪಡೆಗಳು
ಇದಲ್ಲದೆ ತನ್ನ ಹೊಸ ಅಪ್ಡೇಟ್ ಜೊತೆಗೆ ಟೆಲಿಗ್ರಾಮ್ ಇತರ ಬದಲಾವಣೆಗಳನ್ನು ಸಹ ಪರಿಚಯಿಸಿದೆ. ಹಿಂದಿನ ಚಾಟ್‌ಗೆ ತ್ವರಿತವಾಗಿ ಹೋಗಲು ಬಳಕೆದಾರರು ಈಗ ಹಿಂದೆ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಕರೆಗಳ ಗುಣಮಟ್ಟವನ್ನು ಸುಧಾರಿಸಲಾಗಿದೆ. ಅಲ್ಲದೆ ಮೌನ ಸಂದೇಶಗಳನ್ನು ಕಳುಹಿಸುವುದನ್ನು ಈಗ ಹಂಚಿಕೆ ಮೆನುವಿನಿಂದ ನೇರವಾಗಿ ಸಕ್ರಿಯಗೊಳಿಸಲಾಗಿದೆ. ಹಾಗೆಯೇ ಚಾಟ್‌ಗಳ ಮೂಲಕ ನ್ಯಾವಿಗೇಟ್ ಮಾಡುವಾಗ, ಹಿಂದಿನ ಚಾಟ್‌ಗೆ ತ್ವರಿತವಾಗಿ ನೆಗೆಯಲು ನೀವು ಈಗ ಬ್ಯಾಕ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು.

ಇದಲ್ಲದೆ ಟೆಲಿಗ್ರಾಮ್ ಇತ್ತೀಚಿಗೆ ಅಡ್ಮಿನ್ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿದೆ. ಇದರಿಂದ ನೀವು ಟೆಲಿಗ್ರಾಮ್ ಗ್ರೂಪ್‌ನಲ್ಲಿ ಶೇರ್ ಆಡಿದ ಚಾಟ್ ಅನ್ನು ಅಡ್ಮಿನ್ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್ ಮ್ಯಾನೇಜ್ ಮಾಡಬಹುದಾದ ಇನ್ವೈಟ್ ಲಿಂಕ್ ಬಟನ್ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಮ್ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್ ಕಳುಹಿಸುವವರ ಪಬ್ಲಿಕ್ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.


Click it and Unblock the Notifications








