Home
ಸುದ್ದಿಜಾಲ

ಟೆಲಿಗ್ರಾಮ್‌ನಿಂದ ಹೊಸ ಮೆಸೇಜ್‌ ಫಾರ್ವಾರ್ಡಿಂಗ್ ಫೀಚರ್ಸ್‌ ಅನಾವರಣ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳ ಸಾಲಿನಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ವಾಟ್ಸಾಪ್‌ಗೆ ಪೈಪೋಟಿಯನ್ನು ನೀಡುತ್ತಿರುವ ಟೆಲಿಗ್ರಾಮ್‌ ಇತ್ತೀಚಿನ ದಿನಗಳಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಇನ್ನು ವಾಟ್ಸಾಪ್‌ನಲ್ಲಿರುವ ಅನೇಕ ಫೀಚರ್ಸ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಪರಿಚಯಿಸುತ್ತಾ ಬಂದಿದೆ. ಇದೀಗ ಫ್ಲೆಕ್ಸಿಬಲ್ ಫಾರ್ವಾರ್ಡಿಂಗ್ ಫೀಚರ್ ಅನ್ನು ಪರಿಚಯಿಸಿದೆ. ಇದು ಅನ್‌ಲಿಮಿಟೆಡ್‌ ಗ್ರೂಪ್ಸ್‌ ಮತ್ತು ಚಾನಲ್‌ಗಳಿಗೆ ಲೈವ್ ಸ್ಟ್ರೀಮ್‌ ಅನ್ನು ತರಲಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಹೊಸ ಅಪ್‌ಡೇಟ್ ಅನ್ನು ಹೊರತಂದಿದೆ. ಇದು ಮೀಡಿಯಾದಿಂದ ಕ್ಯಾಪ್ಶನ್‌ ತೆಗೆದುಹಾಕುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಮೆಸೇಜ್‌ ಫಾರ್ವರ್ಡ್ ಮಾಡುವಾಗ ಕಳುಹಿಸುವವರ ಹೆಸರುಗಳನ್ನು ಹೈಡ್‌ ಮಾಡುವ ಆಯ್ಕೆಗಳನ್ನು ಸಹ ನೀಡಲಿದೆ. ಜೊತೆಗೆ ನಿಮ್ಮ ಚಾಟ್ ಪಟ್ಟಿಗೆ ನೀವು ಹಿಂತಿರುಗದೆ ನೆಕ್ಸ್ಟ್‌ ಅನ್‌ರೀಡ್‌ ಮೆಸೇಜ್‌ ನೋಡುವುದಕ್ಕೆ ಸುಲಭವಾದ ಅವಕಾಶವನ್ನು ನೀಡಲಿದೆ. ಹಾಗಾದ್ರೆ ಈ ಹೊಸ ಅಪ್ಡೇಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಅಪ್ಡೇಟ್‌

ಟೆಲಿಗ್ರಾಂ ತನ್ನ ಹೊಸ ಅಪ್ಡೇಟ್‌ ಮೂಲಕ ವೀಡಿಯೊ ಲೈವ್ ಸ್ಟ್ರೀಮ್‌ಗಳಿಗೆ ಬೆಂಬಲವನ್ನು ವಿಸ್ತರಿಸಿದೆ. ಬಳಕೆದಾರರು ಈಗ ಗ್ರೂಪ್‌ನಲ್ಲಿ ವೀಡಿಯೋ ಚಾಟ್‌ನಲ್ಲಿ ಲೈವ್ ಸ್ಟ್ರೀಮ್ ಆರಂಭಿಸಬಹುದು. ಅಲ್ಲದೆ ಈ ಲೈವ್ ಸ್ಟ್ರೀಮ್‌ಗಳಿಗಾಗಿ ವೀಕ್ಷಕರ ಕ್ಯಾಪ್ ಅನ್ನು ಸಹ ತೆಗೆದುಹಾಕಿದೆ. ಇದು ಅನಿಯಮಿತ ಸಂಖ್ಯೆಯ ಜನರಿಗೆ ಲೈವ್‌ ಆಗುವ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಿದೆ. ಈ ಹಿಂದೆ, ಪ್ರತಿ ಲೈವ್ ಸ್ಟ್ರೀಮ್ ವೀಡಿಯೊಗೆ 1,000 ಜನರ ಮಿತಿ ಇತ್ತು. ಆದರೆ ಇದೀಗ ಯಾವುದೇ ಮಿತಿಯಿಲ್ಲದೆ ಲೈವ್‌ ಸ್ಟ್ರೀಮ್‌ ವೀಡಿಯೊ ಚಾಟ್‌ ಆರಂಭಿಸಬಹುದು.

ಟೆಲಿಗ್ರಾಮ್

ಇದಲ್ಲದೆ ಟೆಲಿಗ್ರಾಮ್ ತನ್ನ ಫಾರ್ವರ್ಡ್ ಮೆಸೇಜ್‌ ಫೀಚರ್ಸ್‌ ಅನ್ನು ಅಪ್ಡೇಟ್‌ ಮಾಡಿದೆ. ಈ ಹೊಸ ಅಪ್ಡೇಟ್‌ನಿಂದ ಇನ್ಮುಂದೆ ನೀವು ಮೆಸೇಜ್‌ ಮಾಡುವಾಗ ಕಳುಹಿಸುವವರ ಹೆಸರನ್ನು ಹೈಡ್‌ ಮಾಡುವ ಹಾಗೂ ಮೀಡಿಯಾ ಮೆಸೇಜ್‌ನಲ್ಲಿ ಕ್ಯಾಪ್ಶನ್‌ ಅನ್ನು ಹೈಡ್‌ ಮಾಡುವ ಆಯ್ಕೆಯನ್ನು ಸಹ ನೀಡಿದೆ. ಹಾಗೆಯೇ ನೀವು ತಪ್ಪಾದ ಚಾಟ್ ಅನ್ನು ಟ್ಯಾಪ್ ಮಾಡಿದರೆ ನೀವು ಕಳುಹಿಸಲು ಬಯಸದ ಸಂದೇಶಗಳನ್ನು ರದ್ದು ಮಾಡಬಹುದು ಅಥವಾ ರಿಸಿವರ್‌ ಅನ್ನು ಬದಲಾಯಿಸುವ ಅವಕಾಶ ನೀಡಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌ನಲ್ಲಿ ಪ್ರಿವ್ಯೂ ವಿಂಡೋವನ್ನು ತೆರೆಯಲು ಮೆಸೇಜ್‌ ಬಾರ್‌ ಮೇಲಿರುವ 'ಫಾರ್ವರ್ಡ್ ಮೆಸೇಜ್' ಲೇಬಲ್ ಅನ್ನು ಟ್ಯಾಪ್ ಮಾಡಬಹುದು. ಇದು ಮೆಸೇಜ್‌ ಸೆಂಡ್‌ ಮಾಡಿದಾಗ ನಿಮಗೆ ಹೇಗೆ ಕಾಣಿಸಲಿದೆ ಅನ್ನೊದನ್ನ ಪ್ರಿವ್ಯೂ ತೋರಿಸಲಿದೆ. ಜೊತೆಗೆ ನೀವು ರೀಡ್‌ ಮಾಡದಿರುವ ಕಾಮೆಂಟ್ ಕೌಂಟರ್ ಐಕಾನ್ ಅನ್ನು ಕೂಡ ಸೇರಿಸಿದೆ. ಇದರಲ್ಲಿ ಅನೇಕ ಚಾನೆಲ್‌ಗಳು ತಮ್ಮ ಪೋಸ್ಟ್‌ಗಳಿಗೆ ಕಾಮೆಂಟ್‌ಗಳನ್ನು ಸಕ್ರಿಯಗೊಳಿಸುವುದರಿಂದ, ಕಾಮೆಂಟ್‌ ಅನ್ನು ಎಡಿಟ್‌ ಮಾಡಬಹುದಾಗಿದೆ. ನೀವು ಹೊಸ ಸಂದೇಶಗಳನ್ನು ಹೊಂದಿರುವ ಕಾಮೆಂಟ್ ಥ್ರೆಡ್ ಅನ್ನು ತೆರೆದಾಗ, ಓದದಿರುವ ಕಾಮೆಂಟ್‌ಗಳ ಸಂಖ್ಯೆಯನ್ನು ತೋರಿಸುವ ಕೌಂಟರ್ ಈಗ ಕಾಣಿಸಿಕೊಳ್ಳುತ್ತದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಅಪ್ಲಿಕೇಶನ್ ಈಗ ಚಾಟ್‌ನ ಮೇಲ್ಭಾಗದಲ್ಲಿ 'ಸ್ಟಿಕ್ಕರ್ ಆಯ್ಕೆ' ಸ್ಟೇಟಸ್‌ ಅನ್ನು ಕೂಡ ತೋರಿಸುತ್ತದೆ. ಆನಿಮೇಟೆಡ್ ರೆಸ್ಪಾನ್ಸ್‌ಗಾಗಿ ಸರ್ಚ್‌ ಮಾಡುವವರು ಇದನ್ನು ಬಳಸಬಹುದಾಗಿದೆ. ಅಲ್ಲದೆ ನಿಮ್ಮ ಸ್ಟಿಕ್ಕರ್ ಪ್ಯಾನೆಲ್‌ನಲ್ಲಿ 'ಇತ್ತೀಚೆಗೆ ಬಳಸಿದ' ಮೇಲೆ "ಟ್ರೆಂಡಿಂಗ್ ಸ್ಟಿಕ್ಕರ್‌ಗಳು" ಅನ್ನು ನೀವು ಈಗ ಕಾಣಬಹುದು. ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಅಪ್‌ಡೇಟ್ ಈಗಾಗಲೇ ಲಭ್ಯವಿದೆ, ಆದ್ದರಿಂದ ಬಳಕೆದಾರರು ಇದೀಗ ಈ ಹೊಸ ಫೀಚರ್ಸ್‌ಗಳನ್ನು ಬಳಸಬಹುದಾಗಿದೆ.

Best Mobiles in India

English summary
A new Telegram update brings live streams with unlimited viewers to groups and channels, options to remove captions from media and more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+