ಟೆಲಿಗ್ರಾಮ್ ನಡೆಗೆ ದಂಗಾದ ವಾಟ್ಸಾಪ್! ಹೊಸ ಅಪ್ಡೇಟ್‌ನಲ್ಲಿದೆ ಅಚ್ಚರಿಯ ಫೀಚರ್ಸ್!
ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ವಾಟ್ಸಾಪ್‌ಗೆ ಸೆಡ್ಡು ಹೊಡೆಯುವ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇರ್ಪಡೆ ಮಾಡಿದೆ. ಸದ್ಯ ಇದೀಗ ಟೆಲಿಗ್ರಾಮ್ ಹೊಸ ಅಪ್ಡೇಟ್ ಪರಿಚಯಿಸಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಅನಾವರಣಗೊಳಿಸಿದೆ.
ಹೌದು, ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೀಚರ್ಸ್‌ಗಳು ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಇವುಗಳಲ್ಲಿ ಪ್ರಮುಖವಾಗಿ ಬೇಸಿಕ್ ರಿಪ್ಲೇ ಫೀಚರ್ಸ್‌ನಲ್ಲಿ ಹಲವಾರು ನವೀನ ಬದಲಾವಣೆಗಳು, ಕ್ಯಾಪ್ಶನ್‌ಗಳನ್ನು ಫಾರ್ಮ್ಯಾಟ್ ಮಾಡುವುದು ಹಾಗೂ ಲಿಂಕ್ ಪ್ರಿವ್ಯೂಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಪರಿಚಯಿಸಲಾಗಿದೆ. ಹಾಗಾದ್ರೆ ಟೆಲಿಗ್ರಾಮ್ ಹೊಸ ಅಪ್ಡೇಟ್‌ನಲ್ಲಿ ಯಾವೆಲ್ಲಾ ಆಯ್ಕೆಗಳನ್ನು ಸೇರ್ಪಡೆ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಪ್ರಿವ್ಯೂಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯು ಕೂಡ ಒಂದಾಗಿದೆ. ಇನ್ನು ಟೆಲಿಗ್ರಾಮ್ ಸ್ಟೋರಿಸ್ ಕೂಡ ಹೊಸ ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ. ಇದರಿಂದ ಆಯ್ದ ಬಳಕೆದಾರರು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಚಾನಲ್‌ಗಳನ್ನು ಒಳಗೊಂಡಂತೆ ಅಕೌಂಟ್‌ಗಳನ್ನು ಕಸ್ಟಮೈಸ್ ಮಾಡಬಹುದಾಗಿದೆ. ಇದರೊಂದಿಗೆ ರಿಯಾಕ್ಷನ್ ಸ್ಟಿಕ್ಕರ್‌ಗಳು ಮತ್ತು ಡ್ಯುಯಲ್ ಕ್ಯಾಮೆರಾ ಮೋಡ್‌ಗಳನ್ನು ಸಹ ಪರಿಚಯಿಸಿದೆ.
ಇನ್ನು ಟೆಲಿಗ್ರಾಮ್ ತನ್ನ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಯಾವುದೇ ಸಂದೇಶದ ನಿರ್ದಿಷ್ಟ ಭಾಗಗಳನ್ನು ಮೆನ್ಶನ್ ಮಾಡಬಹುದು. ಅಲ್ಲದೆ ಅವುಗಳಿಗೆ ರಿಪ್ಲೇ ನೀಡಬಹುದು ಎಂದು ಹೇಳಿದೆ. ರಿಯಾಕ್ಷನ್‌ಗಳ ಮೂಲಕ ಹೆಚ್ಚು ನಿಖರವಾಗಿ ರಿಪ್ಲೇ ಮಾಡಬಹುದು ಎಂದಿದೆ. ಇದಕ್ಕಾಗಿ ಮೊದಲಿಗೆ ಬಳಕೆದಾರರ ಸಂದೇಶವನ್ನು ಟ್ಯಾಪ್ ಮಾಡಬೇಕು, ನಂತರ ಉದ್ದೇಶಿತ ಪಠ್ಯವನ್ನು ಆಯ್ಕೆ ಮಾಡಲು ಮತ್ತು ಮೆನ್ಶನ್ ಅನ್ನು ಆಯ್ಕೆ ಮಾಡಲು ಟ್ಯಾಪ್ ಆಂಡ್ ಸ್ಕ್ರಾಲ್ ಮಾಡಬೇಕಾಗುತ್ತದೆ.

ಟೆಲಿಗ್ರಾಮ್ ಇದೀಗ ಯಾವುದೇ ಮೆನ್ಶನ್‌ಗಳನ್ನು ಫಾರ್ಮಾಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಿದೆ. ಅಲ್ಲದೆ ನೀವು ಮೆನ್ಶನ್ ಮಾಡಲು ಆಯ್ಕೆಮಾಡಿದ ಸಂದೇಶದ ಭಾಗವನ್ನು ನೀವು ಬಿಗ್, ಇಟಾಲಿಕ್ ಕೂಡ ಮಾಡಬಹುದು. ಇದಲ್ಲದೆ ಹೆಚ್ಚುವರಿಯಾಗಿ, ನೀವು ಸಿಂಗಲ್ ರಿಪ್ಲೇ ಮೂಲಕ ಒಂದಕ್ಕಿಂತ ಹೆಚ್ಚು ಮೆನ್ಶನ್‌ಗಳನ್ನು ಕೂಡ ಸೇರ್ಪಡೆ ಮಾಡಬಹುದಾಗಿದೆ. ಇನ್ನು ಲಿಂಕ್ ಅನ್ನು ಶೇರ್ ಮಾಡುವಾಗ ನಿಮ್ಮ ಆದ್ಯತೆಗೆ ಲಿಂಕ್ ಪ್ರಿವ್ಯೂ ಅನ್ನು ಕಸ್ಟಮೈಸ್ ಮಾಡಲು ಟೆಲಿಗ್ರಾಮ್ ಈಗ ನಿಮಗೆ ಹೆಚ್ಚುವರಿ ಸ್ವಾಯತ್ತತೆಯನ್ನು ಸಹ ನೀಡಿದೆ.
ಇದರೊಂದಿಗೆ ಟೆಲಿಗ್ರಾಮ್ ಸ್ಟೋರಿಯಲ್ಲಿ ಬಲ ಅಥವಾ ಎಡಕ್ಕೆ ಸ್ಲೈಡ್ ಮಾಡುವ ಮೂಲಕ ವೀಡಿಯೊ ಕಥೆಗಳನ್ನು ವೇಗವಾಗಿ ಫಾರ್ವರ್ಡ್ ಮಾಡಬಹುದು. ಅಲ್ಲದೆ ಮುಂಭಾಗದ ಫ್ಲ್ಯಾಷ್ ವೈಶಿಷ್ಟ್ಯವನ್ನು ಸಹ ಬಳಸಬಹುದು. ಇದಲ್ಲದೆ ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರು ತಮ್ಮ ಖಾತೆಗೆ ಬಣ್ಣ ಸಂಯೋಜನೆಯನ್ನು ಕೂಡ ಕಸ್ಟಮೈಸ್ ಮಾಡಬಹುದಾಗಿದೆ. ಇದರಿಂದ ಎಲ್ಲಾ ಗುಂಪುಗಳಲ್ಲಿನ ನಿಮ್ಮ ಹೆಸರಿನ ಬಣ್ಣ, ನೀವು ಶೇರ್‌ಮಾಡುವ ಲಿಂಕ್‌ಗಳ ಕಲರ್, ಯಾವುದೇ ಸಂದೇಶಗಳಿಗೆ ರಿಪ್ಲೇಗಳು ಯಾವಾಗಲೂ ನೀವು ಆಯ್ಕೆ ಮಾಡಿದ ಬಣ್ಣ ಸಂಯೋಜನೆಯಲ್ಲಿ ಕಾಣಿಸಿಕೊಳ್ಳುತ್ತವೆ.

ಇನ್ನು ಟೆಲಿಗ್ರಾಮ್ ಇತ್ತೀಚಿಗೆ ಚಾನೆಲ್‌ಗಳಿಗೆ ಸ್ಟೋರಿಯನ್ನು ಪೋಸ್ಟ್ ಮಾಡುವ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಿದೆ. ಕೇವಲ ವೀಡಿಯೊ ಮಾತ್ರವಲ್ಲದೆ ಮ್ಯೂಸಿಕ್ ಮತ್ತು ರಿಯಾಕ್ಷನ್ ಸ್ಟಿಕ್ಕರ್‌ಗಳನ್ನು ಕೂಡ ಶೇರ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಬಳಕೆದಾರರಿಂದ ಬೂಟ್‌ಗಳನ್ನು ಸ್ವೀಕರಿಸಬೇಕಾಗುತ್ತದೆ. ಇದು ಥೇಟ್ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಅದರಂತೆ ಬಳಕೆದಾರರಿಗೆ 6, 12, 24 ಅಥವಾ 48 ಗಂಟೆಗಳ ಕಾಲ ಸ್ಟೋರೀಸ್‌ಗಳನ್ನು ಹಾಕಲು ಅನುಮತಿಸುತ್ತದೆ.


Click it and Unblock the Notifications








