ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಟೆಲಿಗ್ರಾಮ್‌ ಸೇರಿದ ಕುತೂಹಲಕಾರಿ ಫೀಚರ್ಸ್‌!

|

ಇತ್ತೀಚಿನ ದಿನಗಳಲ್ಲಿ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಹೊಸ ಗೌಪ್ಯತೆ ನೀತಿಯನ್ನು ಒಪ್ಪಲೇಬೇಕು ಎಂಬ ವಾಟ್ಸಾಪ್‌ ಎಡವಟ್ಟಿನ ನಿರ್ಧಾರ ಟೆಲಿಗ್ರಾಮ್‌ಗೆ ವರದಾನವಾಗಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ಬಳಕೆದಾರರಿಗೆ ಪರಿಚಯಿಸಿರುವ ಅನೇಕ ಫೀಚರ್ಸ್‌ಗಳನ್ನ ಟೆಲಿಗ್ರಾಮ್‌ ಕೂಡ ಪರಿಚಯಿಸಲು ಮುಂದಾಗಿದೆ. ಈಗಾಗಲೇ ವಾಟ್ಸಾಪ್‌ಗೆ ಪ್ರತಿಸ್ಫರ್ಧಿಯಾಗಿರುವ ಟೆಲಿಗ್ರಾಮ್‌ ಇದೀಗ ವಾಟ್ಸಾಪ್‌ ಅನ್ನು ಮೀರಿ ಹೆಚ್ಚಿನ ಬಳಕೆದಾರರನ್ನು ತಲುಪುವ ಉದ್ದೇಶವನ್ನು ಹೊಂದಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ವಾಟ್ಸಾಪ್‌ ಅನ್ನು ಮೀರಿ ಹೆಚ್ಚಿನ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ ವಾಟ್ಸಾಪ್‌ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲ ಹೊಸ ಮಾದರಿಯ ಫೀಚರ್ಸ್‌ಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಟೆಲಿಗ್ರಾಮ್‌ ಹೊಸ ಅಪ್‌ಡೇಟ್‌ನ ಭಾಗವಾಗಿ, ಆಟೋ ಡಿಲೀಟ್‌, Expiring Invite Links, ಹೊಸ ಎಮೋಜಿಗಳು, ಚಾಟ್ ಆಮದು ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹಾಗಾದ್ರೆ ಟೆಲಿಗ್ರಾಮ್‌ ಇತ್ತೀಚಿನ ದಿನಗಳಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಟೋ-ಡಿಲೀಟ್‌

ಆಟೋ-ಡಿಲೀಟ್‌

ಟೆಲಿಗ್ರಾಮ್‌ ಇತ್ತಿಚಿಗೆ ಪರಿಚಯಿಸಿದ ಹೊಸ ಫೀಚರ್ಸ್‌ ಅಂದರೆ ಅದು ಆಟೋ ಡಿಲೀಟ್‌. ಟೆಲಿಗ್ರಾಮ್‌ ಅನ್ನು ಹೊಸದಾಗಿ ಅಪ್ಡೇಟ್‌ ಮಾಡಿದ ಬಳಕೆದಾರರು ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಎಲ್ಲಾ ಟೆಲಿಗ್ರಾಮ್ ಚಾಟ್‌ಗಳು ಆಟೋ ಡಿಲೀಟ್‌ ಆಗುವಂತೆ ಟೈಮರ್ ಅನ್ನು ಸೆಟ್‌ ಮಾಡಬಹುದಾಗಿದೆ. ಸಂದೇಶ ಕಳುಹಿಸಿದ ನಂತರ ಭಾಗವಹಿಸುವ ಎಲ್ಲರಿಗೂ ಇದು ಸ್ವಯಂಚಾಲಿತವಾಗಿ ಸಂದೇಶಗಳನ್ನು ಅಳಿಸುತ್ತದೆ. ಬಳಕೆದಾರರು 24 ಗಂಟೆ ಇಲ್ಲವೇ 7 ದಿನಗಳು ಇರುವ ಎರಡು ಅವಧಿ ಮಿತಿಗಳನ್ನು ಆಯ್ಕೆ ಮಾಡಬಹುದಾಗಿದೆ. ಟೈಮರ್ ಸೆಟ್‌ ಮಾಡಿದ ನಂತರ ಕಳುಹಿಸಲಾದ ಸಂದೇಶಗಳಿಗೆ ಮಾತ್ರ ಸ್ವಯಂ-ಅಳಿಸುವ ಕಾರ್ಯವು ಕಾರ್ಯನಿರ್ವಹಿಸುತ್ತದೆ.

Expiring Invite Links

Expiring Invite Links

ಬಳಕೆದಾರರು ಸೀಮಿತ ಅವಧಿ, ಹಲವಾರು ಉಪಯೋಗಗಳು ಅಥವಾ ಎರಡನ್ನೂ ಹೊಂದಿರುವ ಇನ್ವೈಟ್‌ ಲಿಂಕ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿಯಾಗಿ, ಇನ್ವೈಟ್‌ ಲಿಂಕ್‌ಗಳನ್ನು ಸುಲಭ ಹಂಚಿಕೆಗಾಗಿ ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್ ಆಗಿ ಪರಿವರ್ತಿಸಬಹುದು. ಪ್ರತಿ ಇನ್ವೈಟ್‌ ಲಿಂಕ್ ಬಳಸಿ ಯಾವ ಬಳಕೆದಾರರು ಸೇರಿದ್ದಾರೆ ಎಂಬುದನ್ನು ಬಳಕೆದಾರರು ನೋಡಲು ಸಾಧ್ಯವಾಗುತ್ತದೆ. ಕಂಪನಿಯ ಪ್ರಕಾರ, ಹೊಸ ಸದಸ್ಯರು ಎಲ್ಲಿಂದ ಬಂದರು ಅಥವಾ ಯಾವ ಸ್ವರೂಪವು ಬೆಳವಣಿಗೆಗೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ.

ಚಾಟ್ ಆಮದು ಮತ್ತು ವರದಿ ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆಗಳು

ಚಾಟ್ ಆಮದು ಮತ್ತು ವರದಿ ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆಗಳು

ಹೊಸ ಅಪ್ಡೇಟ್‌ ನ ನಂತರ ಟೆಲಿಗ್ರಾಮ್ ಚಾಟ್‌ಗೆ ಹೊಸದಾದ ಅಥವಾ 1000 ಕ್ಕಿಂತ ಕಡಿಮೆ ಸಂದೇಶಗಳನ್ನು ಸೇರಿಸಿದರೆ ಆಮದು ಮಾಡಿದ ಸಂದೇಶಗಳನ್ನು ಅವುಗಳ ಮೂಲ ದಿನಾಂಕದಿಂದ ವಿಂಗಡಿಸಲಾಗುತ್ತದೆ. ವರದಿಯನ್ನು ಕಳುಹಿಸುವಾಗ ನಿರ್ದಿಷ್ಟ ಸಂದೇಶಗಳನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರನ್ನು ಅನುಮತಿಸುತ್ತದೆ. ಇದಲ್ಲದೆ, ಎಲ್ಲಾ ವರದಿ ಮಾಡುವ ಆಯ್ಕೆಗಳು ಹೆಚ್ಚಿನ ಸಂದರ್ಭವನ್ನು ನೀಡಲು ಬಳಕೆದಾರರಿಗೆ ಪ್ರತಿಕ್ರಿಯೆಯನ್ನು ಸೇರಿಸಲು ಅನುಮತಿಸುತ್ತದೆ.

Best Mobiles in India

English summary
Telegram announced a new update to add support for new features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X