ಟೆಲಿಗ್ರಾಮ್‌ನಿಂದ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಫೀಚರ್ಸ್‌ ಬಿಡುಗಡೆ!

|

ಟೆಲಿಗ್ರಾಮ್‌ ಅಪ್ಲಿಕೇಶನ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಮೆಟಾ ಒಡೆತನದ ವಾಟ್ಸಾಪ್‌ ಅಪ್ಲಿಕೇಶನ್‌ಗೆ ಪ್ರಬಲ ಪೈಪೋಟಿಯನ್ನು ನೀಡುತ್ತಾ ಬಂದಿದೆ. ಇದೇ ಕಾರಣಕ್ಕೆ ಅನೇಕ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟೆಲಿಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಸೇರಿಸಲು ಮುಂದಾಗಿದೆ. ಈ ಹೊಸ ಫೀಚರ್ಸ್‌ ಟೆಲಿಗ್ರಾಮ್‌ನ iOS ಆವೃತ್ತಿಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಹೊಸದಾಗಿ ರಿಯಾಕ್ಟ್‌ ಎಮೋಜಿ ಡೀಫಾಲ್ಟ್ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಇನ್ಮುಂದೆ ನೀವು ಟೆಲಿಗ್ರಾಮ್‌ನಲ್ಲಿ ಸಂದೇಶಗಳಿಗೆ ಎಮೋಜಿಗಳ ಮೂಲಕ ಉತ್ತರಿಸಬಹುದಾಗಿದೆ. ಥಂಬ್ಸ್ ಅಪ್, ಥಂಬ್ಸ್ ಡೌನ್, ಹಾರ್ಟ್, ಲಾಫ್ಟರ್ ಮತ್ತು ಇತರವುಗಳನ್ನು ಒಳಗೊಂಡಿರುವ ಎಮೋಜಿಯನ್ನು ಸೇರಿಸಲಾಗಿದೆ. ಹಾಗಾದ್ರೆ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ಪರಿಚಯಿಸಿರುವ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಇದೀಗ ಐಒಎಸ್‌ ಆವೃತ್ತಿಯಲ್ಲಿ ಲಭ್ಯವಿದೆ. ಒಬ್ಬ ಬಳಕೆದಾರರು ಮಾಡಿದ ರಿಯಾಕ್ಟ್‌ ಗ್ರೂಪ್‌ ಚಾಟ್‌ನಲ್ಲಿ ಇತರ ಎಲ್ಲ ಬಳಕೆದಾರರಿಗೆ ಗೋಚರಿಸುತ್ತದೆ. ಈ ಫೀಚರ್ಸ್‌ ಅನ್ನು ಗ್ರೂಪ್‌ ಅಡ್ಮೀನ್‌ ಚಾನಲ್‌ಗಳಲ್ಲಿ ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸುವ ಅವಕಾಶವನ್ನು ನೀಡಲಾಗುತ್ತದೆ. ಈ ರೆಸ್ಪಾನ್ಸ್‌ ಎಮೋಜಿಗಳು ಸ್ಥಿರವಾಗಿರುವುದಿಲ್ಲ, ಆದರೆ ಮಿನಿ ಅನಿಮೇಷನ್ ಜೊತೆಗೆ ಪ್ರಕ್ರಿಯೆಯನ್ನು ಸ್ವಲ್ಪ ಹೆಚ್ಚು ಉತ್ಸಾಹಭರಿತವಾಗಿಸುತ್ತದೆ ಎನ್ನಲಾಗಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಆವೃತ್ತಿಗೆ ಮತ್ತು ಇತರ ಎಲ್ಲಾ ಸ್ಥಿರ ಬಳಕೆದಾರರಿಗೆ ಲಬ್ಯವಾಗಲಿದೆ. ಈ ಫೀಚರ್ಸ್‌ ಹೊಸತಲ್ಲದಿದ್ದರೂ, ಇದರ ಸೇರ್ಪಡೆಯು ಟೆಲಿಗ್ರಾಮ್ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರುವ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನೀವು ಟೆಲಿಗ್ರಾಮ್‌ನಲ್ಲಿ ಟೆಕ್ಸ್ಟ್‌ ಟೈಪ್‌ ಮಾಡುವುದಕ್ಕಿಂತ ಎಮೋಜಿಗಳ ಮೂಲಕವೇ ಮೆಸೇಜ್‌ಗಳಿಗೆ ಉತ್ತರಿಸಬಹುದಾಗಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌ನ ಪ್ರತಿಸ್ಪರ್ಧಿ, ಮೆಟಾದ ವಾಟ್ಸಾಪ್‌ ಕೂಡ ಭವಿಷ್ಯದಲ್ಲಿ ರೆಸ್ಪಾನ್ಸ್‌ ಎಮೋಜಿಯನ್ನು ಸೇರಿಸಲು ಸಿದ್ಧವಾಗಿದೆ. ಆದಾರೆ, ಈ ಫೀಚರ್ಸ್‌ ಇನ್ನು ಅಭಿವೃದ್ಧಿ ಹಂತದಲ್ಲಿದೆ ಎನ್ನಲಾಗಿದೆ. ಇದರಿಂದ ಕ್ರಾಸ್-ಪ್ಲಾಟ್‌ಫಾರ್ಮ್ ಯೋಜನೆಗಳಿಗೆ ವಾಟ್ಸಾಪ್‌ ಇನ್ನು ಹತ್ತಿರವಾಗಲಿದೆ. ಬಳಕೆದಾರರಿಗೆ Instagram ಮತ್ತು Messenger ಬಳಕೆದಾರರೊಂದಿಗೆ ಹೆಚ್ಚು ಚಾಟ್ ಮಾಡಲು ಅನುಮತಿಸುತ್ತದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಇದೀಗ ಅಡ್ಮಿನ್‌ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿದೆ. ಇದರಿಂದ ನೀವು ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಶೇರ್‌ ಆಡಿದ ಚಾಟ್‌ ಅನ್ನು ಅಡ್ಮಿನ್‌ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್‌ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್‌ ಮ್ಯಾನೇಜ್‌ ಮಾಡಬಹುದಾದ ಇನ್ವೈಟ್‌ ಲಿಂಕ್‌ ಬಟನ್‌ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಮ್ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್‌ ಕಳುಹಿಸುವವರ ಪಬ್ಲಿಕ್‌ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್‌ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಈ ಹಿಂದಿನ ಅಪ್‌ಡೇಟ್‌ನಲ್ಲಿ ಪರಿಚಯಿಸಿದ್ದ ಎಂಟು ಹೊಸ ಚಾಟ್ ಥೀಮ್‌ಗಳು ಈಗ iOS ಡಿವೈಸ್‌ನಲ್ಲಿಯೂ ಕೂಡ ಲಭ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್ಸ್‌ ಡೇ ಮತ್ತು ನೈಟ್ ಮೋಡ್, ಅನಿಮೇಟೆಡ್ ಬ್ಯಾಕ್‌ಗ್ರೌಂಡ್‌ ಮತ್ತು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌ ಅನ್ನು ಕಾಣಬಹುದಾಗಿದೆ. ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಚಾಟ್‌ನಲ್ಲಿ ಹಂಚಿಕೊಂಡ ಸ್ಥಳವನ್ನು ಟ್ಯಾಪ್ ಮಾಡುವ ಮೂಲಕ, ಬಳಕೆದಾರರು ಕಾಲ್ನಡಿಗೆ, ಕಾರು ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ಅಲ್ಲಿಗೆ ಹೋಗಲು ಎಷ್ಟು ಸಮಯ ಹಿಡಿಯಲಿದೆ ಅನ್ನೊದನ್ನ ಸಹ ತಿಳಿಯಬಹುದಾಗಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ನ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ಮೀಡಿಯಾ ಫೈಲ್‌ ಅನ್ನು ಸೆಂಡ್‌ ಮಾಡಿದಾಗ ಮೆಸೇಜ್‌ ಬಾರ್‌ನಲ್ಲಿ ಟೈಪ್‌ ಮಾಡಿದ ಟೆಕ್ಸ್ಟ್ ಅನ್ನು ಕ್ಯಾಪ್ಶನ್‌ಗೆ ಕನ್ವರ್ಟ್‌ ಮಾಡಲಿದೆ. ಇದರಲ್ಲಿರುವ ಕ್ಲೌಡ್ ಡ್ರಾಫ್ಟ್‌ಗಳು ಬಳಕೆದಾರರಿಗೆ ಕಂಪ್ಯೂಟರ್‌ನಲ್ಲಿ ಸಂದೇಶವನ್ನು ಟೈಪ್ ಮಾಡಲು ಅನುಮತಿಸುತ್ತದೆ. ನಂತರ ಫೋನ್‌ನಿಂದ ಫೋಟೋವನ್ನು ಲಗತ್ತಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಕಳುಹಿಸಬಹುದಾಗಿದೆ. ಇದಲ್ಲದೆ ಫುಲ್‌ಸ್ಕ್ರೀನ್ ಎಫೆಕ್ಟ್‌ಗಳೊಂದಿಗೆ ಬಳಕೆದಾರರು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಸಹ ಪಡೆದುಕೊಳ್ಳಲಿದ್ದಾರೆ.

Best Mobiles in India

Read more about:
English summary
Telegram could soon add Instagram DM-like emoji reactions to the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X