ಫೇಸ್‌ಬುಕ್‌ ಮಾಡಿಕೊಂಡ ಎಡವಟ್ಟಿನಿಂದ ಟೆಲಿಗ್ರಾಮ್‌ಗೆ ಸಿಕ್ಕಿದ ಲಾಭ ಏನು ಗೊತ್ತಾ?

|

ಸೋಮವಾರ ಸಂಜೆ ಫೇಸ್‌ಬುಕ್‌ ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಉಂಟಾಗಿದ್ದ ದೋಷದಿಂದ ಫೇಸ್‌ಬುಕ್‌ ನಷ್ಟು ಅನುಭವಿಸಿದೆ. ಸ್ವತಃ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಕೂಡ ತಮ್ಮ ಸಂಪತ್ತಿನಲ್ಲಿ 6 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದ್ದಾರೆ. ಆದರೆ ಫೇಸ್‌ಬುಕ್‌ನ ಈ ಪ್ರಮಾದದಿಂದ ವಾಟ್ಸಾಪ್‌ನ ಪ್ರತಿಸ್ಪರ್ಧಿ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾo ಲಾಭವನ್ನು ಪಡೆದುಕೊಂಡಿದೆ. ಅಂದರೆ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯನ್ನು ಕಂಡಿದೆ.

ಟೆಲಿಗ್ರಾಮ್‌

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಕೂಡ ಸೋಮವಾರ ಸಂಜೆ ಆರು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾಕಷ್ಟು ಸಂಖ್ಯೆಯ ವಾಟ್ಸಾಪ್‌ ಬಳಕೆದಾರರು ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ ಬಳಸಬೇಕಾಗಿ ಬಂದಿದೆ. ಇದರ ಪರಿಣಾಮವಾಗಿ ವಾಟ್ಸಾಪ್‌ ನಷ್ಟವನ್ನು ಅನುಭವಿಸಿದರೆ. ಇತ್ತ ಟೆಲಿಗ್ರಾಂ 70 ಮಿಲಿಯನ್ ಬಳಕೆದಾರರನ್ನು ಹೊಸದಾಗಿ ಪಡೆದುಕೊಂಡಿದೆ. ಈ ಮೂಲಕ ವಾಟ್ಸಾಪ್‌ಗೆ ನಷ್ಟವಾದರೆ ಟೆಲಿಗ್ರಾಮ್‌ ಲಾಭ ಪಡೆದಿದೆ. ಅತ್ತ ಫೇಸ್‌ಬುಕ್‌ ನಷ್ಟ ಮಾಡಿಕೊಂಡರೆ ಇತ್ತ ಟೆಲಿಗ್ರಾಮ್‌ ಲಾಭ ಮಾಡಿದೆ ಕೊಂಡಿದೆ. ಹಾಗಾದ್ರೆ ಫೇಸ್‌ಬುಕ್‌ನ ನಷ್ಟ ಟೆಲಿಗ್ರಾಮ್‌ಗೆ ವರವಾಗಿದ್ದು ಹೇಗೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳು ಸೋಮವಾರ ಸಂಜೆ ಆರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸ್ಥಗಿತವಾಗಿತ್ತು. ಇದರಿಂದ ವಿಶ್ವದಾದ್ಯಂತ ವಾಟ್ಸಾಪ್‌ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ತಮ್ಮ ಸ್ನೇಹಿತರ ಜೊತೆಗೆ ಸಂದೇಶ ವಿನಿಮಯ ಮಾಡಲು ಆಗದೇ ಕಷ್ಟ ಪಟ್ಟಿದ್ದಾರೆ. ಇದರ ನಡುವೆ ಹೆಚ್ಚಿನ ಮಂದಿ ವಾಟ್ಸಾಪ್‌ ಸ್ಥಗಿತವಾಗಲು ಕಾರಣ ಏನು ಅನ್ನೊದನ್ನ ಅರಿಯದೆ ಟೆಲಿಗ್ರಾ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ್ದಾರೆ. ಇದರಿಂದ ಟೆಲಿಗ್ರಾಮ್‌ ಭರ್ಜರಿ ಲಾಭವನ್ನು ಪಡೆದುಕೊಂಡಿದೆ.

ಟೆಲಿಗ್ರಾಂ

ಟೆಲಿಗ್ರಾಂ ಹೊಸದಾಗಿ 70 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ. ಪ್ರಪಂಚದಾದ್ಯಂತ 3.5 ಬಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಈ ವೈಫಲ್ಯಕ್ಕೆ ಸಾಮಾಜಿಕ ಜಾಲತಾಣ ಕ್ಷಮೆಯನ್ನು ಸಹ ಕೋರಿದೆ. ಇನ್ನು ಟೆಲಿಗ್ರಾಂ ತನ್ನ ಬಳಕೆದಾರರ ಸಂಖ್ಯೆಯ ಏರಿಕೆಗೆ ನಮ್ಮ ವಿಶ್ವಸಾರ್ಹತೆ ಸೇವೆ ಕಾರಣ. ಟೆಲಿಗ್ರಾಂ ನಮ್ಮ ಬಹುಪಾಲು ಬಳಕೆದಾರರಿಗೆ ದೋಷರಹಿತವಾಗಿ ಕೆಲಸ ಮಾಡುತ್ತಿದೆ. ಈ ಖಂಡಗಳ ಲಕ್ಷಾಂತರ ಬಳಕೆದಾರರು ಟೆಲಿಗ್ರಾಂಗೆ ಸೈನ್ ಅಪ್ ಮಾಡಲು ಧಾವಿಸಿದ ಕಾರಣ ಅಮೆರಿಕಾದ ಕೆಲವು ಬಳಕೆದಾರರು ಸಾಮಾನ್ಯಕ್ಕಿಂತ ಕಡಿಮೆ ವೇಗವನ್ನು ಅನುಭವಿಸಿರಬಹುದು ಎಂದು ಟೆಲಿಗ್ರಾಮ್ ಸಿಇಒ ಪಾವೆಲ್ ಡ್ರೋವ್ ತನ್ನ ಟೆಲಿಗ್ರಾಂ ಚಾನೆಲ್ ನಲ್ಲಿ ಬರೆದಿದ್ದಾರೆ.

ಟೆಲಿಗ್ರಾಂ

ಇನ್ನು ಟೆಲಿಗ್ರಾಂ ಇತ್ತೀಚೆಗೆ 1 ಬಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಟೆಲಿಗ್ರಾಮ್ ಮಾತ್ರವಲ್ಲದೆ ಸಿಗ್ನಲ್ ಅಪ್ಲಿಕೇಶನ್‌ ಕೂಡ ವಾಟ್ಸಾಪ್‌ ಬಳಸಲು ಸಧ್ಯವಾಗದೆ ಸ್ಥಗಿತಗೊಂಡ ಸಂದರ್ಭದಲ್ಲಿ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇದಲ್ಲದೆ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗೆ ಹೋಲಿಸಿದರೆ ಟೆಲಿಗ್ರಾಮ್ ಮತ್ತು ಸಿಗ್ನಲ್ ಅನ್ನು ಸುರಕ್ಷಿತ ಆಯ್ಕೆಗಳೆಂದು ಪರಿಗಣಿಸಬಹುದಾಗಿದೆ.

ಫೇಸ್‌ಬುಕ್‌

ಇದರ ನಡುವೆ ಫೇಸ್‌ಬುಕ್‌ ಸಂಸ್ಥಾಪಕರ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ ಸ್ಥಗಿತವಾಗಿದ್ದ ದೋಷದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ನಮ್ಮ ಎಂಜಿನಿಯರಿಂಗ್ ತಂಡಗಳು ನಮ್ಮ ಡೇಟಾ ಕೇಂದ್ರಗಳ ನಡುವೆ ನೆಟ್ವರ್ಕ್ ಟ್ರಾಫಿಕ್ ಅನ್ನು ಸಂಯೋಜಿಸುವ ಬೆನ್ನೆಲುಬು ರೂಟರ್ಗಳಲ್ಲಿನ ಸಂರಚನಾ ಬದಲಾವಣೆಯಿಂದಾಗಿ ಈ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಹೇಳಿದೆ. ನೆಟ್‌ವರ್ಕ್ ಟ್ರಾಫಿಕ್‌ಗೆ ಈ ಅಡಚಣೆಯು ನಮ್ಮ ಡೇಟಾ ಸೆಂಟರ್‌ಗಳು ಸಂವಹನ ನಡೆಸುವಿಕೆಯ ಮೇಲೆ ಪರಿಣಾಮ ಬೀರಿದೆ.

ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ ಸರ್ವರ್‌ ಸ್ಥಗಿತಗೊಂಡ ನಂತರ ಸೃಷ್ಟಿಯಾಗಿದ್ದ ಊಹಾಫೋಹಗಳಿಗೆ ಫೇಸ್‌ಬುಕ್‌ ಉತ್ತರಿಸಿದೆ. ಫೇಸ್‌ಬುಕ್‌ ಅನ್ನು ಯಾರೋ ಹ್ಯಾಕ್‌ ಮಾಡಿದ್ದಾರೆ, ಫೇಸ್‌ಬುಕ್‌ ಬಳಕೆದಾರ ಮಾಹಿತಿ ಲೀಕ್‌ ಆಗಿದೆ ಎಂಬ ಮಾತುಗಳೆಲ್ಲಾ ಸುಳ್ಳು, ಫೇಸ್‌ಬುಕ್ ತನ್ನ ಬಳಕೆದಾರರ ಡೇಟಾವನ್ನು ಇನ್ನೂ ರಾಜಿ ಮಾಡಿಕೊಂಡಿಲ್ಲ ಎಂದು ಖಚಿತಪಡಿಸಿದೆ. ಅಷ್ಟೇ ಅಲ್ಲ ಫೆಸ್‌ಬುಕ್‌ ನಲ್ಲಿ ಉಂಟಾಗಿದ್ದ ಸಮಸ್ಸಯೆ ಪರಿಹರಿಸುವಾಗ ಫೇಸ್ಬುಕ್ ಉದ್ಯೋಗಿಗಳು ತಮ್ಮ ಸಹ ತಂಡದ ಸದಸ್ಯರೊಂದಿಗೆ ಸಂವಹನ ನಡೆಸಲು ಡಿಸ್ಕಾರ್ಡ್ ನಂತಹ ಇತರ ಮೆಸೇಜಿಂಗ್ ಆಪ್ ಗಳನ್ನು ಬಳಸಿದ್ದಾರೆ ಎಂದು ಸಹ ಹೇಳಲಾಗಿದೆ.

Best Mobiles in India

English summary
WhatsApp recently suffered a massive outage globally which latest for more than six hours but the entire duration that WhatsApp was down, Telegram added 70 million users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X