Home
ಸುದ್ದಿಜಾಲ

ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಟೆಲಿಗ್ರಾಮ್‌!

ಜನಪ್ರಿಯ ಮೆಸೇಜಿಂಗ್‌ ಆಪ್‌ಗಳಲ್ಲಿ ಟೆಲಿಗ್ರಾಮ್ ಆಪ್‌ ಕೂಡ ಒಂದಾಗಿದೆ. ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಆಗಾಗ ಹೊಸ ಫೀಚರ್ಸ್‌ ಪರಿಚಯಿಸುವ ಮೂಲಕ ಬಳಕೆದಾರರ ಆಯ್ಕೆಯ ಮೆಸೇಜಿಂಗ್‌ ಆಪ್‌ಗಳಲ್ಲಿ ಒಂದೆನಿಸಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಹೊಸ ಫೀಚರ್ಸ್‌ಗಳನ್ನ ಟೆಲಿಗ್ರಾಮ್‌ ಪರಿಚಯಿಸಿದೆ. ಇದೀಗ ತನ್ನ ಹೊಸ ಆಪ್ಡೇಟ್‌ನಲ್ಲಿ ಸರ್ಚ್‌ ಫಿಲ್ಟರ್‌, Anonymous Group Admins, ಚಾನೆಲ್ ಕಾಮೆಂಟ್ಸ್‌ ಒಳಗೊಂಡಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಟೆಲಿಗ್ರಾಮ್‌

ಹೌದು, ಮೆಸೇಜಿಂಗ್‌ ಆಪ್‌ ಟೆಲಿಗ್ರಾಮ್‌ ತನ್ನ ಹೊಸ ಆಪ್ಡೇಟ್‌ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಹೊಸ ಆಪ್ಡೇಟ್‌ನಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನ ಬಳಕೆದಾರರಿಗೆ ಬಳಸಲು ಅವಕಾಶ ನೀಡಿದೆ. ಇದರಲ್ಲಿ ಸರ್ಚ್‌ ಫಿಲ್ಟರ್‌ಗಳು ಕೂಡ ಒಂದಾಗಿದ್ದು, ಇದು ಟೆಲಿಗ್ರಾಮ್ ಕ್ಲೌಡ್‌ನಲ್ಲಿ ಮೇಮ್‌ಗಳನ್ನು ಸರ್ಚ್‌ ಮಾಡಲು ಬಳಕೆದಾರಿಗೆ ಅನುಮತಿಸುತ್ತದೆ. Anonymous Admins, ಅಡ್ಮಿನ್‌ ಹೆಸರು ಮತ್ತು ಗುರುತನ್ನು ಗುಂಪು ಸದಸ್ಯರ ಪಟ್ಟಿಯಲ್ಲಿ ಮರೆಮಾಡಬಹುದಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Search Filters

Search Filters

ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಫಿಚರ್ಸ್‌ಗಳಲ್ಲಿ ಸರ್ಚ್‌ ಫಿಲ್ಟರ್‌ ಫೀಚರ್ಸ್ ಕೂಡ ಒಂದಾಗಿದೆ. ಈ ಹೊಸ ಫೀಚರ್ಸ್‌ ಮೂಲಕ ಮೀಡಿಯಾ ಲಿಂಕ್‌ಗಳು, ಫೈಲ್‌ಗಳು ಮತ್ತು ಇತರವುಗಳನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ನಿರ್ದಿಷ್ಟ ದಿನಾಂಕದಂದು ಶೇರ್‌ಮಾಡಲಾದ ಲಿಂಕ್‌ಗಳನ್ನು ಹುಡುಕಲು, ಬಳಕೆದಾರರು ಆ ದಿನದ ದಿನಾಂಕ ಟೈಪ್‌ ಮಾಡಿದರೆ ಸಾಕು ಅಪ್ಲಿಕೇಶನ್ ಫಲಿತಾಂಶಗಳನ್ನು ತಕ್ಕಂತೆ ನೀಡಲಿದೆ. ಇದಲ್ಲದೆ, ಯಾವುದೇ ವ್ಯಕ್ತಿ, ಗ್ರೂಪ್‌, ಚಾನಲ್ ಅಥವಾ ಬೋಟ್ ಹೆಸರನ್ನು ಟೈಪ್ ಮಾಡುವುದರ ಮೂಲಕವೂ ಸರ್ಚ್‌ ಫಿಲ್ಟರ್ ಅನ್ನು ಮಾಡಬಹುದಾಗಿದೆ.

Anonymous Group Admins

Anonymous Group Admins

ಸೂಕ್ಷ್ಮ ಮಾಹಿತಿಯನ್ನು ಗ್ರೂಪಿನಲ್ಲಿ ಹಂಚಿಕೊಳ್ಳುವಾಗ ಅಡ್ಮಿನ್‌ ತನ್ನ ಹೆಸರನ್ನು ಹಾಗೂ ತನ್ನ ನಂಬರ್‌ ಅನ್ನು ತೋರಿಸಿದೆ ಅನಾಮದೇಯನಾಗಿ ಸಂದೇಶ ಕಳುಹಿಸಬಹುದಾಗಿದೆ. ಗ್ರೂಪ್‌ ಅಡ್ಮೀನ್‌ ತನ್ನ ಗುರುತನ್ನು ಮರೆಮಾಡಲು, ಬ್ಯಾಟ್‌ಮ್ಯಾನ್ ಮೋಡ್ ಅನ್ನು ಸಕ್ರಿಯಗೊಳಿಸ ಬೇಕಾಗುತ್ತದೆ. ಈ ಮೋಡ್ ಅಡ್ಮೀನ್‌ಗೆ ತಮ್ಮ ಗುರುತನ್ನು ಗ್ರೂಪ್‌ ಮೆಂಬರ್ಸ್‌ ಲೀಸ್ಟ್‌ನಲ್ಲಿ ಮರೆಮಾಡಲು ಅನುಮತಿಸುತ್ತದೆ.

Channel Comments

Channel Comments

ಟೆಲಿಗ್ರಾಮ್‌ ತನ್ನ ಬಳಕೆದಾರರು ಮಾಡುವ ಪೋಸ್ಟ್‌ಗಳಿಗೆ ಕಾಮೆಂಟ್ ಬಟನ್ ಸೇರಿಸಿದೆ. ಇದರಿಂದ ಬಳಕೆದಾರರ ಫೊಸ್ಟ್‌ಗಳಿಗೆ ಇತರರು ಕೂಡ ಕಾಮೆಂಟ್‌ ಮಾಡಬಹುದಾಗಿದೆ. ಕಾಮೆಂಟ್‌ಗಳು ತಮ್ಮದೇ ಆದ ಒಂದು ಥ್ರೆಡ್‌ನಲ್ಲಿ ಮತ್ತು ಚರ್ಚಾ ಗ್ರೂಪ್‌ನಲ್ಲಿ ಇರಿಸಲಿದೆ. ಒಬ್ಬ ವ್ಯಕ್ತಿಯು ಚಾನಲ್‌ನ ಚರ್ಚಾ ಗುಂಪಿನ ಸದಸ್ಯರಲ್ಲದಿದ್ದರೂ ಸಹ, ಪ್ರತ್ಯುತ್ತರಗಳು ಎಂಬ ಹೊಸ ಚಾಟ್ ಮೂಲಕ ಅವರ ಕಾಮೆಂಟ್‌ಗಳಿಗೆ ಪ್ರತ್ಯುತ್ತರಗಳನ್ನ ನೀಡಬಹುದಾಗಿದೆ.

ಟೆಲಿಗ್ರಾಮ್

ಇದಲ್ಲದೆ ಟೆಲಿಗ್ರಾಮ್ ಹೊಸ ನಯವಾದ ಅನಿಮೇಷನ್‌ಗಳಂತಹ ಹೆಚ್ಚಿನ ಫೀಚರ್ಸ್‌ಗಳನ್ನು ಕೂಡ ಸೇರಿಸಿದೆ. ಬಳಕೆದಾರರು ಕೀಬೋರ್ಡ್ ಅನ್ನು ವಿಸ್ತರಿಸಬಹುದು ಅಥವಾ ಮರೆಮಾಡಬಹುದು, ಹಗಲು ಮತ್ತು ರಾತ್ರಿ ಥೀಮ್‌ಗಳ ನಡುವೆ ಬದಲಾಯಿಸಬಹುದು. ಅಲ್ಲದೆ ಸಂದೇಶಗಳನ್ನು ಅಳಿಸುವಾಗ ಅನಿಮೇಟೆಡ್ ಪಾಪ್ ಅಪ್‌ಗಳನ್ನು ಸಹ ನೋಡಬಹುದು, ಅಧಿಸೂಚನೆಗಳನ್ನು ಬದಲಾಯಿಸಬಹುದು, ಮೀಡಿಯಾವನ್ನು ಉಳಿಸಬಹುದು. ಜೊತೆಗೆ ಒಂದು ಅಪ್ಲಿಕೇಶನ್‌ನಲ್ಲಿ ಮಲ್ಟಿ ಅಕೌಂಟ್‌ಗಳನ್ನು ಬಳಸುವವರು ಈಗ ಖಾತೆ ಸ್ವಿಚರ್ ಬಳಸಿ ನಿಮ್ಮ ಎರಡೂ ಖಾತೆಗಳ ಚಾಟ್ ಪಟ್ಟಿಗಳನ್ನು ಪ್ರಿ ವ್ಯೂವ್‌ ಮಾಡಬಹುದಾಗಿದೆ.

Best Mobiles in India

English summary
Telegram has introduced a slew of features, including Search Filters, Anonymous Group Admins, Channel Comments and more in its recent update.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+