Home
ಸುದ್ದಿಜಾಲ

ವಿಂಡೋಸ್‌ 10ಗಾಗಿ ಹೊಸ ಅಪ್ಡೇಟ್‌ ಪರಿಚಯಿಸಿದ ಟೆಲಿಗ್ರಾಮ್‌!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿಗಷ್ಟೇ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಟೆಲಿಗ್ರಾಮ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ತನ್ನ ಪ್ರತಿಸ್ಪರ್ಧಿ ವಾಟ್ಸಾಪ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಅನೇಕ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡಿದೆ. ಇದೀಗ ಟೆಲಿಗ್ರಾಮ್‌ ವಿಂಡೋಸ್ 10 ಗಾಗಿ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಹೊಸ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ವಿಂಡೋಸ್‌ 10ಗಾಗಿ ತನ್ನ ಡೆಸ್ಕ್‌ಟಾಪ್‌ ಆಪ್ ಅನ್ನು ಆವೃತ್ತಿ 8.0ಗೆ ಅಪ್ಡೇಟ್‌ ಮಾಡಿದೆ. ಇನ್ನು ಈ ಹೊಸ ಅಪ್ಡೇಟ್‌ ಹಲವಾರು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅನ್‌ರೀಡ್‌ ಕಾಮೆಂಟ್‌ಗಳ ನಂಬರ್‌ಗಳನ್ನು ವೀಕ್ಷಿಸುವ ಸಾಮರ್ಥ್ಯ, ಅನ್‌ಲಿಮಿಟಿಡ್‌ ಸಂಖ್ಯೆಯ ವೀಕ್ಷಕರೊಂದಿಗೆ ನಿಮ್ಮ ಸ್ಕ್ರೀನ್‌ ಅನ್ನು ಶೇರ್‌ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಹಾಗಾದ್ರೆ ಈ ಹೊಸ ಅಪ್ಡೇಟ್‌ನಲ್ಲಿ ಟೆಲಿಗ್ರಾಮ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್

ಟೆಲಿಗ್ರಾಮ್ ತನ್ನ ಡೆಸ್ಕ್‌ಟಾಪ್ ಆವೃತ್ತಿಯನ್ನು ಆಪ್ಡೇಟಟ್‌ ಮಾಡಿದ ನಂತರ ವೀಡಿಯೋ ಬ್ರಾಡ್‌ಕಾಸ್ಟ್‌ ಫೀಚರ್ಸ್‌ ಅನ್ನು ಸೇರಿಸಲಾಗಿದೆ. ಅಲ್ಲದೆ ಅನಿಯಮಿತ ಸಂಖ್ಯೆಯ ವೀಕ್ಷಕರಿಗೆ ತಮ್ಮ ಸ್ಕ್ರೀನ್‌ ಅನ್ನು ಶೇರ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇನ್ನು ಈ ಹೊಸ ಫೀಚರ್ಸ್‌ ಅನ್ನು ಬಳಸಬೇಕಾದರೆ ಬಳಕೆದಾರರು ತಾವು ಅಡ್ಮಿನ್‌ ಆಗಿರುವ ಕಮ್ಯೂನಿಟಿ ಟೈಟಲ್‌ ಬಾರ್‌ನಲ್ಲಿರುವ ಲೈವ್ ಸ್ಟ್ರೀಮ್ ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಫ್ಲೆಕ್ಸಿಬಲ್‌

ಇದಲ್ಲದೆ ತನ್ನ ಫೀಚರ್ಸ್‌ಗಳಲ್ಲಿ ಫ್ಲೆಕ್ಸಿಬಲ್‌ ಮೆಸೇಜಿಂಗ್‌ ಫಾರ್ವರ್ಡ್ ಫಿಚರ್ಸ್‌ ಅನ್ನು ಸಹ ಸೇರ್ಪಡೆ ಮಾಡಿದೆ. ಇದು ಬಳಕೆದಾರರಿಗೆ ಫಾರ್ವರ್ಡ್ ಮಾಡಿದ ಮೆಸೇಜಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಮೆಸೇಜ್‌ ಅನ್ನು ಹೇಗೆ ಸೆಂಡ್‌ ಮಾಡಲಾಗುತ್ತದೆ ಅನ್ನೊದನ್ನ ಬದಲಾಯಿಸಲು ಇದು ಅವಕಾಶ ನೀಡಲಿದೆ. ಇದಕ್ಕಾಗಿ ನೀವು ಇನ್‌ಪುಟ್ ಫಿಲ್ಡ್‌ನಲ್ಲಿರುವ 'ಫಾರ್ವರ್ಡ್ ಮೆಸೇಜ್' ಲೇಬಲ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಫೀಚರ್ಸ್‌

ಈ ಪಾರ್ವಡ್‌ ಎಸೇಜ್‌ ಫೀಚರ್ಸ್‌ ಮೂಲಕ ಸಂದೇಶ ಕಳುಹಿಸಿದ್ದು ಯಾರು ಅನ್ನೊದನ್ನ ಹೈಡ್‌ ಮಾಡುವ ಅವಕಾಸವನ್ನು ನೀಡಲಾಗಿದೆ. ಅಷ್ಟೇ ಅಲ್ಲ ಈ ಫೀಚರ್ಸ್‌ನಲ್ಲಿ ಮೀಡಿಯಾ ಮೆಸೇಗ್‌ಳ ಕ್ಯಾಪ್ಶನ್‌ ಅನ್ನು ಸಹ ತೆಗೆದುಹಾಕುವುದಕ್ಕೆ ಅವಕಾಶವಿದೆ. ಈ ಅಪ್ಡೇಟ್‌ನಲ್ಲಿ ಸೇರಿರುವ ಮತ್ತೊಂದು ಇಂಟ್ರೆಸ್ಟಿಂಗ್‌ ಫೀಚರ್ಸ್‌ ಅಂದರೆ ಕಾಮೆಂಟ್ ಕೌಂಟರ್. ಇದು ಟೆಲಿಗ್ರಾಂ ಚಾನೆಲ್‌ನ ಕಾಮೆಂಟ್‌ ತೆರೆದ ತಕ್ಷಣ ಅನ್‌ರೀಡ್‌ ಕಾಮೆಂಟ್‌ ನಂಬರ್‌ ಅನ್ನು ನೀವು ಕಾಣಬಹುದಾಗಿದೆ. ಸದ್ಯ ಈ ಎಲ್ಲಾ ಹೊಸ ಫೀಚರ್ಸ್‌ಗಳನ್ನು ಪಡೆಯಲು, ನೀವು ಟೆಲಿಗ್ರಾಮ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಅಪ್ಲಿಕೇಶನ್ ಅಥವಾ ವಿಂಡೋಸ್ ಸ್ಟೋರ್‌ನಿಂದ ಅಪ್‌ಡೇಟ್ ಮಾಡಬಹುದು.

ಟೆಲಿಗ್ರಾಮ್‌

ಇದಲ್ಲದೆ ಇತ್ತೀಚಿಗಷ್ಟೇ ಟೆಲಿಗ್ರಾಮ್‌ ತನ್ನ ವಿಡಿಯೋ ಸಂದೇಶಗಳ ಫೀಚರ್ಸ್‌ ಅನ್ನು ಅಪ್ಡೇಟ್‌ ಮಾಡಿತ್ತು. ಈ ಅಪ್ಡೇಟ್‌ನಲ್ಲಿ ನಿಮ್ಮ ಗ್ಯಾಲರಿಗೆ ಇನ್ನೊಂದು ವೀಡಿಯೊವನ್ನು ಸೇರಿಸದೆಯೇ ವೀಡಿಯೊ ಸಂದೇಶಗಳ ಮೂಲಕ ಸುತ್ತಮತ್ತಲಿನ ಮಾಹಿತಿಯನ್ನು ಶೇರ್‌ ಮಾಡುವುದಕ್ಕೆ ಅವಕಾಸ ನೀಡಲಾಗಿದೆ. ಅಲ್ಲದೆ ನಿಮ್ಮ ಚಾಟ್ ಬಾಕ್ಸ್‌ನಲ್ಲಿರುವ ರೆಕಾರ್ಡಿಂಗ್ ಬಟನ್ ಅನ್ನು ನೀವು ಸರಳವಾಗಿ ಟ್ಯಾಪ್ ಮಾಡಿ ಮತ್ತು ವೀಡಿಯೊ ಸಂದೇಶಗಳನ್ನು ಕಳುಹಿಸುವ ಆಯ್ಕೆ ನೀಡಲಾಗಿದೆ. ಆದರೆ ಈ ವೀಡಿಯೊಗಳನ್ನು ನಿಮ್ಮ ಗ್ಯಾಲರಿಯಲ್ಲಿ ಸೇವ್‌ ಮಾಡುವುದಕ್ಕೆ ಆಗುವುದಿಲ್ಲ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಅಪ್ಲಿಕೇಶನ್ ಈಗ ಚಾಟ್‌ನ ಮೇಲ್ಭಾಗದಲ್ಲಿ 'ಸ್ಟಿಕ್ಕರ್ ಆಯ್ಕೆ' ಸ್ಟೇಟಸ್‌ ಅನ್ನು ಕೂಡ ತೋರಿಸುತ್ತದೆ. ಆನಿಮೇಟೆಡ್ ರೆಸ್ಪಾನ್ಸ್‌ಗಾಗಿ ಸರ್ಚ್‌ ಮಾಡುವವರು ಇದನ್ನು ಬಳಸಬಹುದಾಗಿದೆ. ಅಲ್ಲದೆ ನಿಮ್ಮ ಸ್ಟಿಕ್ಕರ್ ಪ್ಯಾನೆಲ್‌ನಲ್ಲಿ 'ಇತ್ತೀಚೆಗೆ ಬಳಸಿದ' ಮೇಲೆ "ಟ್ರೆಂಡಿಂಗ್ ಸ್ಟಿಕ್ಕರ್‌ಗಳು" ಅನ್ನು ನೀವು ಈಗ ಕಾಣಬಹುದು. ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಅಪ್‌ಡೇಟ್ ಈಗಾಗಲೇ ಲಭ್ಯವಿದೆ, ಆದ್ದರಿಂದ ಬಳಕೆದಾರರು ಇದೀಗ ಈ ಹೊಸ ಫೀಚರ್ಸ್‌ಗಳನ್ನು ಬಳಸಬಹುದಾಗಿದೆ.

Best Mobiles in India

English summary
Telegram Desktop version 8.0 update released. Here we will be taking a look at all of the features that the new update has to offer.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+