ಟೆಲಿಗ್ರಾಮ್‌ನಿಂದ ಹೊಸ ಅಪ್ಡೇಟ್ ಲಾಂಚ್! ಯಾವೆಲ್ಲಾ ಫೀಚರ್ಸ್ ಸೇರ್ಪಡೆ?
ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿರುವ ಟೆಲಿಗ್ರಾಮ್ ಇದೀಗ ಮತ್ತೊಂದು ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ತನ್ನ ಹೊಸ ಅಪ್ಡೆಟ್ ಮೂಲಕ ಬಳಕೆದಾರರಿಗೆ ಇನ್ನಷ್ಟು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಪವರ್ ಸೇವಿಂಗ್ ಮೋಡ್, ಪ್ಲೇಬ್ಯಾಕ್ ಸ್ಪೀಡ್ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳು ಸೇರಿವೆ.
ಹೌದು, ಟೆಲಿಗ್ರಾಮ್ ಅಪ್ಲಿಕೇಶನ್ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಯಲ್ಲಿಯೂ ಲಭ್ಯವಾಗಲಿದೆ. ಇನ್ನು ಈ ಅಪ್ಡೇಟ್ ಮೂಲಕ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಟೆಲಿಗ್ರಾಮ್ ಪರಿಚಯಿಸಿರುವ ಹೊಸ ಅಪ್ಡೇಟ್‌ನಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪವರ್ ಸೇವಿಂಗ್ ಮೋಡ್
ಟೆಲಿಗ್ರಾಮ್ ತನ್ನ ಹೊಸ ಅಪ್ಡೇಟ್‌ನಲ್ಲಿ ಹೊಸ ಪವರ್ ಸೇವಿಂಗ್ ಮೋಡ್ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಟೆಲಿಗ್ರಾಮ್ ಬಳಸುವಾಗ ಪವರ್ ಸೇವಿಂಗ್ ಮೋಡ್ ಬಳಸಲು ಸಾಧ್ಯವಾಗಲಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಒಂದು ನಿರ್ದಿಷ್ಟ ಪರ್ಸಟೆಂಜ್ ತಲುಪಿದ ನಂತರ ಆಟೋಮ್ಯಾಟಿಕ್ ಆಗಿ ಟೆಲಿಗ್ರಾಮ್ ಅಪ್ಲಿಕೇಶನ್ ಆನ್ ಆಪ್ ಆಗಲಿದೆ.
ಗ್ರ್ಯಾನ್ಯುಲರ್ ಪ್ಲೇಬ್ಯಾಕ್ ಸ್ಪೀಡ್
ಇದಲ್ಲದೆ ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊಗಳು, ಪಾಡ್‌ಕಾಸ್ಟ್‌ಗಳು ಮತ್ತು ಧ್ವನಿ ಮತ್ತು ವೀಡಿಯೊ ಸಂದೇಶಗಳಿಗೆ ಪ್ಲೇಬ್ಯಾಕ್ ವೇಗವನ್ನು ಬದಲಾಯಿಸಲು ಹೊಸ ಅವಕಾಶ ನೀಡಿದೆ. ಅದರಂತೆ 0.2x-2.5x ನಡುವಿನ ಯಾವುದೇ ವೇಗವನ್ನು ಆಯ್ಕೆ ಮಾಡಲು 2x ಬಟನ್ ಅನ್ನು ಬಳಸುವುದಕ್ಕೆ ಅವಕಾಶ ಕಲ್ಪಿಸಿದೆ.

ಆಟೋ ಸೆಂಡ್ ಇನ್ವೈಟ್ ಲಿಂಕ್ಸ್
ಇನ್ನು ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಆಟೋ ಸೆಂಡ್ ಇನ್ವೈಟ್ ಲಿಂಕ್ಸ್ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಟೆಲಿಗ್ರಾಮ್ ಗ್ರೂಪ್ ಸೇರಲು ಬಯಸುವವರನ್ನು ಇನ್ವೈಟ್ ಮಾಡುವುದಕ್ಕೆ ಇದು ಅವಕಾಶ ನೀಡಲಿದೆ. ನೀವು ಯಾರನ್ನು ಗ್ರೂಪ್‌ಗೆ ಸೇರಿಸಲು ಬಯಸುತ್ತಿರೋ ಅವರಿಗೆ ಇನ್ವೈಟ್ ಲಿಂಕ್ ಅನ್ನು ಸಂದೇಶದಂತೆ ತ್ವರಿತವಾಗಿ ಕಳುಹಿಸಬಹುದು ಎಂದು ಟೆಲಿಗ್ರಾಮ್ ಹೇಳಿದೆ.
ಡೈನಾಮಿಕ್ ಆರ್ಡರ್ ಫಾರ್ ಸ್ಟಿಕ್ಕರ್ ಪ್ಯಾಕ್ಸ್
ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಪರಿಚಯಿಸಿರುವ ಮತ್ತೊಂದು ಹೊಸ ಆಯ್ಕೆ ಡೈನಾಮಿಕ್ ಆರ್ಡರ್ ಫಾರ್ ಸ್ಟಿಕ್ಕರ್ ಪ್ಯಾಕ್ಸ್ ಆಗಿದೆ. ಇದು ಬಳಕೆದಾರರಿಗೆ ತಮ್ಮ ಸ್ಟಿಕ್ಕರ್ ಪ್ಯಾಕ್‌ಗಳ ಆದೇಶವನ್ನು ಸೆಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ನೀವು ಸ್ಟಿಕ್ಕರ್ ಪ್ಯಾನೆಲ್‌ನಲ್ಲಿರುವ ಗೇರ್ ಐಕಾನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಡೈನಾಮಿಕ್ ಪ್ಯಾಕ್ ಆರ್ಡರ್ ಅನ್ನು ಸ್ವಿಚ್ ಆಫ್ ಮಾಡಬಹುದು ಎಂದು ಟೆಲಿಗ್ರಾಮ್ ಹೇಳಿಕೊಂಡಿದೆ.

ಇನ್ನು ಟೆಲಿಗ್ರಾಮ್ ಇತ್ತೀಚೆಗೆ ಆಟೋ ಡಿಲೀಟ್ ಫೀಚರ್ಸ್ ಅನ್ನು ಸಹ ಪರಿಚಯಿಸಿದ್ದು, ಇದು ಸಾಕಷ್ಟು ಯಶಸ್ಸು ಕಂಡಿದೆ. ಇದು ವಾಟ್ಸಾಪ್‌ಗಿಂತ ಬಹಳ ವಿಭಿನ್ನವಾಗಿ ಕೆಲಸ ಮಾಡಲಿದ್ದು, ಬಳಕೆದಾರರಿಗೆ ಇದರಿಂದ ಸಾಕಷ್ಟು ಅನುಕೂಲ ಪಡೆದಿದ್ದಾರೆ ಎಂದೇ ಹೇಳಬಹುದು. ಈ ಫೀಚರ್ಸ್ ಮೂಲಕ ಬಳಕೆದಾರರು ಟೆಲಿಗ್ರಾಮ್‌ನಲ್ಲಿರುವ ಎಲ್ಲಾ ಚಾಟ್‌ಗಳನ್ನು ಆಟೋ ಡಿಲೀಟ್ ಮಾಡಬಹುದಾಗಿದೆ. ಅಂದರೆ ಇದಕ್ಕಾಗಿ ಬಳಕೆದಾರರು ಡಿಲೀಟ್ ಟೈಮರ್ ಅನ್ನು ಸೆಟ್ ಮಾಡುವ ಅವಕಾಶವನ್ನು ಟೆಲಿಗ್ರಾಮ್ ನೀಡಿದೆ. ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ಬರುವ ಮೆಸೆಜ್‌ಗಳನ್ನು ಡಿಲೀಟ್ ಮಾಡುವ ತಲೆನೋವು ತಪ್ಪಿದಂತಾಗುತ್ತದೆ.
ಇದಲ್ಲದೆ ಟೆಲಿಗ್ರಾಮ್‌ನಲ್ಲಿ ಪ್ರೊಫೈಲ್ ಪಿಕ್ಚರ್ ಮೇಕರ್ಸ್ ಮೂಲಕ ಬಳಕೆದಾರರು ತಮ್ಮ ಖಾತೆಯನ್ನು ವರ್ಣರಂಜಿತವನ್ನಾಗಿ ಮಾಡಬಹುದಾಗಿದೆ. ಯಾಕೆಂದರೆ ಈ ಫೀಚರ್ಸ್‌ನಲ್ಲಿ ಬಳಕೆದಾರರು ಸ್ಟಿಕ್ಕರ್ ಅಥವಾ ಅನಿಮೇಟೆಡ್ ಎಮೋಜಿಯನ್ನು ತಮ್ಮ ವೈಯುಕ್ತಿಕ ಅಕೌಂಟ್, ಗ್ರೂಪ್ ಹಾಗೂ ಚಾನಲ್‌ಗಳ ಪ್ರೊಫೈಲ್ ಚಿತ್ರವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








