ಟೆಲಿಗ್ರಾಮ್‌ನ ಈ ಹೊಸ ಫೀಚರ್ಸ್‌ಗೆ ವಾಟ್ಸಾಪ್ ಕಂಗಾಲು! ನೀವು ಕೂಡ ಅಚ್ಚರಿ ಪಡ್ತೀರಾ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್ ಕೂಡ ಒಂದಾಗಿದೆ. ತನ್ನ ಭಿನ್ನ ಮಾದರಿಯ ಫೀಚರ್ಸ್‌ಗಳ ಮೂಲಕ ವಾಟ್ಸಾಪ್‌ಗೆ ಸೆಡ್ಡು ಹೊಡೆಯುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸ್ಟೋರೀಸ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಜುಲೈ ತಿಂಗಳ ಆರಂಭದಲ್ಲಿ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ಹೌದು, ಟೆಲಿಗ್ರಾಮ್ ಸ್ಟೋರೀಸ್ ಫೀಚರ್ಸ್ ಜುಲೈ ತಿಂಗಳ ಆರಂಭದಲ್ಲಿ ಪ್ರಾರಂಭವಾಗಲಿದೆ. ಇನ್ನು ಈ ಫೀಚರ್ಸ್ ಟೆಲಿಗ್ರಾಮ್ ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ಲಭ್ಯವಾಗಲಿದೆ. ಇದಲ್ಲದೆ ನಿಮ್ಮ ಸ್ಟೋರಿಸ್ ಅನ್ನು ಯಾರು ನೋಡಬಹುದು, ಯಾರು ನೋಡಬಾರದು ಅಂತಾ ಆಯ್ಕೆ ಮಾಡುವುದಕ್ಕೆ ಕೂಡ ಸಾಧ್ಯವಾಗಲಿದೆ. ಹಾಗಾದ್ರೆ ಟೆಲಿಗ್ರಾಮ್ ಸ್ಟೋರೀಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್ ಸ್ಟೋರೀಸ್ ಜುಲೈ ತಿಂಗಳ ಪ್ರಾರಂಭದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಇದು ಬಳಕೆದಾರರಿಗೆ ತಮ್ಮ ಸ್ಟೋರೀಸ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ. ಇದರಲ್ಲಿ ಬಳಕೆದಾರರಿಗೆ ಮೂರು ಆಯ್ಕೆಗಳು ಲಭ್ಯವಾಗಲಿದೆ. ಅದರಂತೆ ನೀವು ನಿಮ್ಮ ಸ್ಟೋರೀಸ್ ಅನ್ನು ಪ್ರತಿಯೊಬ್ಬರೂ, ನನ್ನ ಸಂಪರ್ಕಗಳು ಮಾತ್ರ, ಕೆಲವು ಆಯ್ದ ಸಂಪರ್ಕಗಳು ಮಾತ್ರ ಎಂಬ ಆಯ್ಕೆಗಳನ್ನು ಬಳಸಿ ಶೇರ್ ಮಾಡಬಹುದು. ಇದರಿಂದ ನಿಮ್ಮ ಸ್ಟೋರೀಸ್ ಅನ್ನು ಯಾರು ನೋಡಬಹುದು ಅನ್ನೊದನ್ನ ನೀವು ನಿರ್ಧಾರ ಮಾಡಬಹುದು.
ಇದಲ್ಲದೆ ಟೆಲಿಗ್ರಾಮ್ ಬಳಕೆದಾರರು ಯಾವುದೇ ಸಂಪರ್ಕದಿಂದ ಪೋಸ್ಟ್ ಮಾಡಲಾದ ಸ್ಟೋರೀಸ್‌ಗಳನ್ನು ಮೇನ್ ಸ್ಕ್ರೀನ್ ಬದಲಿಗೆ ಕಂಟ್ಯಾಕ್ಟ್ ವಿಭಾಗದಲ್ಲಿರುವ 'ಹಿಡನ್' ಲಿಸ್ಟ್‌ಗೆ ಸರಿಸುವ ಮೂಲಕ ಹೈಡ್ ಮಾಡಬಹುದಾಗಿದೆ. ಇದರೊಂದಿಗೆ ಫೋಟೋ ಮತ್ತು ವೀಡಿಯೊ-ಎಡಿಟಿಂಗ್ ಟೂಲ್ಸ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲಾಗಿದೆ. ಇವುಗಳ ಮೂಲಕ ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಲಿಂಕ್‌ಗಳನ್ನು ಸೇರಿಸುವ ಮತ್ತು ಇತರ ಜನರನ್ನು ಟ್ಯಾಗ್ ಮಾಡುವುದಕ್ಕೆ ಕ್ಯಾಪ್ಶನ್ ನೀಡಲು ಸಾಧ್ಯವಾಗಲಿದೆ.
ಇನ್ನು ಟೆಲಿಗ್ರಾಮ್ ಬಳಕೆದಾರರು 6, 12, 24, ಅಥವಾ 48 ಗಂಟೆಗಳಲ್ಲಿ ಸ್ಟೋರೀಸ್ ಎಂಡ್ ಆಗುವಂತೆ ಟೈಂ ಅನ್ನು ಆಯ್ಕೆ ಮಾಡಬಹುದು. ಅಂದರೆ ನೀವು ಶೇರ್ ಮಾಡುವ ಸ್ಟೋರೀಸ್ ಎಷ್ಟು ಗಂಟೆಗಳ ಕಾಲ ಶೋ ಆಗಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದು. ಅಷ್ಟೇ ಅಲ್ಲ ನಿಮ್ಮ ಸ್ಟೋರೀಸ್ ಶಾಶ್ವತವಾಗಿ ಕಾಣಿಸುವಂತೆ ಮಾಡುವುದಕ್ಕೆ ಕೂಡ ಬೆಂಬಲ ನೀಡಲಿದೆ ಎಂದು ವರದಿಯಾಗಿದೆ.

ಟೆಲಿಗ್ರಾಮ್‌ನ ಸಿಇಒ ಪಾವೆಲ್ ಡುರೊವ್ ಹೇಳುವಂತೆ ಬಳಕೆದಾರರು ಸ್ಟೋರೀಸ್ ಅನ್ನು ಪೋಸ್ಟ್ ಮಾಡುವಾಗ, ಬಳಕೆದಾರರು ಡ್ಯುಯಲ್ ಕ್ಯಾಮೆರಾ ಮೋಡ್ ಅನ್ನು ಆರಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇದರಿಂದ ಏಕಕಾಲದಲ್ಲಿ ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳಿಂದ ತೆಗೆದ ಫೋಟೋಗಳನ್ನು ಇಲ್ಲವೇ ವೀಡಿಯೊಗಳನ್ನು ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಜೊತೆಗೆ ನಿಮ್ಮ ಸ್ಟೋರೀಸ್‌ನಲ್ಲಿ ಫೋಟೋ ಮತ್ತು ವೀಡಿಯೊ ಎಡಿಟಿಂಗ್ ಟೂಲ್ಸ್‌ಗಳನ್ನು ಸಹ ಬಳಸಿಕೊಳ್ಳಬಹುದು.
ಇದಲ್ಲದೆ ಟೆಲಿಗ್ರಾಮ್ ಅಪ್ಲಿಕೇಶನ್ ಇತ್ತೀಚಿಗೆ ತನ್ನ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಯಲ್ಲಿಯೂ ಕೂಡ ಲಭ್ಯವಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತಾ ಬಂದಿದೆ. ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ಪರಿಚಯಿಸಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಪವರ್ ಸೇವಿಂಗ್ ಮೋಡ್ ಕೂಡ ಒಂದಾಗಿದೆ. ಇದು ಬಳಕೆದಾರರಿಗೆ ಟೆಲಿಗ್ರಾಮ್ ಬಳಸುವಾಗ ಬ್ಯಾಟರಿ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಲು ಅವಕಾಶ ನೀಡಲಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಒಂದು ನಿರ್ದಿಷ್ಟ ಪರ್ಸಟೆಂಜ್ ತಲುಪಿದ ನಂತರ ಆಟೋಮ್ಯಾಟಿಕ್ ಆಗಿ ಟೆಲಿಗ್ರಾಮ್ ಅಪ್ಲಿಕೇಶನ್ ಆನ್ ಆಪ್ ಆಗಲಿದೆ.


Click it and Unblock the Notifications








