ಟೆಲಿಗ್ರಾಮ್‌ನಿಂದ ಹೊಸ ಅಪ್ಡೇಟ್‌ ಬಿಡುಗಡೆ! ಹೊಸ ಫೀಚರ್ಸ್‌ಗಳ ವಿಶೇಷತೆ ಏನು?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ವಾಟ್ಸಾಪ್‌ನೊಂದಿಗೆ ಪೈಪೋಟಿ ನಡೆಸುತ್ತಿರುವ ಟೆಲಿಗ್ರಾಮ್‌ ಇದೀಗ ತನ್ನ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಹೊಸ ಅಪ್ಡೇಟ್‌ ಮೂಲಕ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಡೇಟ್‌ ಬಾರ್‌ ಮತ್ತು ಕ್ಯಾಲೆಂಡರ್ ವ್ಯೂ ಅನ್ನು ಒಳಗೊಂಡಿದೆ. ಇದಲ್ಲದೆ ವರ್ಲ್ಡ್‌ ಚಾಟ್ ಥೀಮ್‌ಗಳು ಮತ್ತು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಕೂಡ ಸೇರಿಸಲಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ತನ್ನ ಹೊಸ ಅಪ್ಡೇಟ್‌ ಅನ್ನು ಲಾಂಚ್‌ ಮಾಡಿದೆ.ಬತನ್ನ ಹೊಸ ಅಪ್ಡೇಟ್‌ ಮೂಲಕ ಫ್ರೇಶ್‌ ಡೇಟ್‌ ಬಾರ್‌, ಕ್ಯಾಲೆಂಡರ್‌ ವ್ಯೂ,ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಹೊಸದಾಗಿ ಪ್ರಾರಂಭಿಸಲಾದ ಡೇಟ್‌ ಬಾರ್‌ ಮೂಲಕ ಬಳಕೆದಾರರು ದಿನಗಳು ಮತ್ತು ತಿಂಗಳುಗಳ ನಡುವಿನ ಚಿತ್ರಗಳು ಅಥವಾ ವೀಡಿಯೊಗಳನ್ನು ಹೆಚ್ಚು ವೇಗವಾಗಿ ಹುಡುಕಲು ಅನುಮತಿಸುತ್ತದೆ. ಇನ್ನುಳಿದಂತೆ ಟೆಲಿಗ್ರಾಮ್‌ ಸೇರಿದ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ನ ಹೊಸ ಅಪ್ಡೇಟ್‌ನಲ್ಲಿ ಅಡ್ಮಿನ್‌ಗೆ ಹೆಚ್ಚಿನ ಪವರ್‌ ನೀಡಲಾಗಿದೆ. ಹೊಸ ಸೆಟ್ಟಿಂಗ್‌ಗಳೊಂದಿಗೆ ಯಾರು ಸೇರಬಹುದು ಮತ್ತು ಚಾಟ್ ಅನ್ನು ನೋಡಬಹುದು ಅನ್ನೊದನ್ನ ಅಡ್ಮಿನ್‌ ನಿರ್ಧಾರ ಮಾಡುವ ಅವಕಾಶವನ್ನು ನೀಡಲಾಗಿದೆ. ಇದಲ್ಲದೆ ವರ್ಲ್ಡ್‌ ಚಾಟ್ ಥೀಮ್‌ಗಳು ಮತ್ತು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಕೂಡ ಸೇರಿಸಲಾಗಿದೆ. ಸದ್ಯ ಹೊಸ ಅಪ್‌ಡೇಟ್‌ನ ಬಗ್ಗೆ ಟೆಲಿಗ್ರಾಮ್ ಐಒಎಸ್ ಬಳಕೆದಾರರಿಗೆ ತನ್ನ ಬ್ಲಾಗ್ ಪೋಸ್ಟ್ ಮೂಲಕ ವಿವರಣೆ ನೀಡಿದೆ. ಈ ಮೂಲಕ ಹೊಸ ಮಾದರಿಯ ಅನುಭವ ನೀಡಲು ಮುಂದಾಗಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ನೀಡಿರುವ ಮಾಹಿತಿ ಪ್ರಕಾರ ಹೊಸ ಅಪ್‌ಡೇಟ್ ಶೇರ್‌ ಮಾಡಿದ ಮೀಡಿಯಾ ಪೇಜ್‌ ಬದಿಯಲ್ಲಿ ಹೊಸದಾಗಿ ಡೇಟ್‌ಬಾರ್‌ ಕಾಣಿಸಲಿದೆ. ಇದರಿಂದ ನೀವು ಯಾವ ದಿನಾಂಕದಂದು ಯಾವ ಚಾಟ್‌ ಮಾಡಿದ್ದೀರಾ ಅನ್ನೊದು ಸುಲಭವಾಗಿ ತಿಳಿಯಲಿದೆ. ಅಲ್ಲದೆ ನೀವು ನಿರ್ಧಿಷ್ಟ ದಿನಾಂಕದಂದು ಶೇರ್‌ ಮಾಡಿರುವ ಎಲ್ಲಾ ಫೋಟೋಗಳು, ವೀಡಿಯೊಗಳು, ಫೈಲ್‌ಗಳು ಮತ್ತು ಮ್ಯೂಸಿಕ್‌ ಅನ್ನು ನೋಡಬಹುದಾಗಿದೆ. ಇದರೊಂದಿಗೆ ಶೇರ್‌ ಮಾಡಿದ ಮೀಡಿಯಾವನ್ನು ಸರ್ಚ್‌ ಮಾಡಲು ಡೇಟ್‌ ಬಾರ್‌ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಇದೀಗ ಅಡ್ಮಿನ್‌ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿದೆ. ಇದರಿಂದ ನೀವು ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಶೇರ್‌ ಆಡಿದ ಚಾಟ್‌ ಅನ್ನು ಅಡ್ಮಿನ್‌ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್‌ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್‌ ಮ್ಯಾನೇಜ್‌ ಮಾಡಬಹುದಾದ ಇನ್ವೈಟ್‌ ಲಿಂಕ್‌ ಬಟನ್‌ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಮ್ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್‌ ಕಳುಹಿಸುವವರ ಪಬ್ಲಿಕ್‌ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್‌ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಈ ಹಿಂದಿನ ಅಪ್‌ಡೇಟ್‌ನಲ್ಲಿ ಪರಿಚಯಿಸಿದ್ದ ಎಂಟು ಹೊಸ ಚಾಟ್ ಥೀಮ್‌ಗಳು ಈಗ iOS ಡಿವೈಸ್‌ನಲ್ಲಿಯೂ ಕೂಡ ಲಭ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್ಸ್‌ ಡೇ ಮತ್ತು ನೈಟ್ ಮೋಡ್, ಅನಿಮೇಟೆಡ್ ಬ್ಯಾಕ್‌ಗ್ರೌಂಡ್‌ ಮತ್ತು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌ ಅನ್ನು ಕಾಣಬಹುದಾಗಿದೆ. ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಚಾಟ್‌ನಲ್ಲಿ ಹಂಚಿಕೊಂಡ ಸ್ಥಳವನ್ನು ಟ್ಯಾಪ್ ಮಾಡುವ ಮೂಲಕ, ಬಳಕೆದಾರರು ಕಾಲ್ನಡಿಗೆ, ಕಾರು ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ಅಲ್ಲಿಗೆ ಹೋಗಲು ಎಷ್ಟು ಸಮಯ ಹಿಡಿಯಲಿದೆ ಅನ್ನೊದನ್ನ ಸಹ ತಿಳಿಯಬಹುದಾಗಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ನ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ಮೀಡಿಯಾ ಫೈಲ್‌ ಅನ್ನು ಸೆಂಡ್‌ ಮಾಡಿದಾಗ ಮೆಸೇಜ್‌ ಬಾರ್‌ನಲ್ಲಿ ಟೈಪ್‌ ಮಾಡಿದ ಟೆಕ್ಸ್ಟ್ ಅನ್ನು ಕ್ಯಾಪ್ಶನ್‌ಗೆ ಕನ್ವಟ್‌ ಮಾಡಲಿದೆ. ಇದರಲ್ಲಿರುವ ಕ್ಲೌಡ್ ಡ್ರಾಫ್ಟ್‌ಗಳು ಬಳಕೆದಾರರಿಗೆ ಕಂಪ್ಯೂಟರ್‌ನಲ್ಲಿ ಸಂದೇಶವನ್ನು ಟೈಪ್ ಮಾಡಲು ಅನುಮತಿಸುತ್ತದೆ. ನಂತರ ಫೋನ್‌ನಿಂದ ಫೋಟೋವನ್ನು ಲಗತ್ತಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಕಳುಹಿಸಬಹುದಾಗಿದೆ. ಇದಲ್ಲದೆ ಫುಲ್‌ಸ್ಕ್ರೀನ್ ಎಫೆಕ್ಟ್‌ಗಳೊಂದಿಗೆ ಬಳಕೆದಾರರು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಸಹ ಪಡೆದುಕೊಳ್ಳಲಿದ್ದಾರೆ.

Best Mobiles in India

Read more about:
English summary
Telegram is rolling out a new update that includes multiple features to make using the app easier.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X