Home
ಸುದ್ದಿಜಾಲ

ಹತ್ತನೇ ಸ್ಥಾನದಲ್ಲಿದ್ದ ಟೆಲಿಗ್ರಾಮ್‌ ನಂಬರ್‌ ಒನ್‌ ಪಟ್ಟ ಪಡೆದುಕೊಂಡಿದ್ದು ಹೇಗೆ?

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಕಳೆದ ಒಂದು ತಿಂಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಪಡೆದುಕೊಂಡ ಅಪ್ಲಿಕೇಶನ್‌ ಆಗಿದೆ. ವಾಟ್ಸಾಪ್‌ ಹೊಸ ಸೇವಾ ನಿಯಮ ವಿವಾದದ ನಂತರ ಟೆಲಿಗ್ರಾಮ್‌ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಹಾಗಂತ ಟೆಲಿಗ್ರಾಮ್‌ ಹೊಸದಾಗಿ ಪರಿಚಿತವಾದ ಅಪ್ಲಿಕೇಶನ್‌ ಅಲ್ಲ. ಈಗಾಗಲೇ ವಾಟ್ಸಾಪ್‌ಗೆ ಪ್ರತಿಸ್ಫರ್ಧಿಯಾಗಿದ್ದ ಮೆಸೇಜಿಂಗ್‌ ಅಪ್ಲಿಕೇಶನ್‌. ಆದರೆ ಇಂದು ಹತ್ತನೇ ಸ್ಥಾನದಲ್ಲಿ ಟೆಲಿಗ್ರಾಮ್‌ ಇಂದು ಮೊದಲನೇ ಸ್ಥಾನಕ್ಕೆ ಬಂದು ಕೂತಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಡೌನ್‌ಲೋಡ್‌ ಮಾಡಲಾದ ಗೇಮಿಂಗ್‌ ಅಲ್ಲದ ಅಪ್ಲಿಕೇಶನ್‌ ಆಗಿದೆ. ಅದರಲ್ಲೂ ಹೆಚ್ಚಿನ ಡೌನ್‌ಲೋಡ್‌ ಭಾರತದಲ್ಲಿಯೇ ಆಗಿರುವುದು ಇನ್ನೂ ವಿಶೇಷ. ಯಾವಾಗ ವಾಟ್ಸಾಪ್‌ ತನ್ನ ಬಳಕೆದಾರರು ತನ್ನ ಹೊಸ ಸೇವಾ ನಿಯಮ ಒಪ್ಪಲೇಬೇಕೆಂದು ಹೇಳಿತು. ಆಗಲೇ ಬಳಕೆದಾರರು ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ ಕಡೆಗೆ ಗಮನ ನೀಡಿದ್ದಾರೆ. ಇದರ ಫಲವಾಗಿ ಟೆಲಿಗ್ರಾಮ್‌ ತನ್ನ ಡೌನ್‌ಲೋಡ್‌ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಹಾಗಾದ್ರೆ ಟೆಲಿಗ್ರಾಮ್‌ ಬೆಳವಣಿಗೆಗೆ ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಜನವರಿಯಲ್ಲಿ 63 ಮಿಲಿಯನ್ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ. ಇದು ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಆಗಿದೆ. ಅತಿ ಹೆಚ್ಚು ಟೆಲಿಗ್ರಾಮ್ ಡೌನ್‌ಲೋಡ್‌ ಮಾಡಿದ ದೇಶಗಳ ಸ್ಥಾನದಲ್ಲಿ ಭಾರತವು ಶೇಕಡಾ 24 ರಷ್ಟಿದ್ದರೆ, ಇಂಡೋನೇಷ್ಯಾ ಶೇಕಡಾ 10 ರಷ್ಟಿದೆ ಎಂದು ಸೆನ್ಸರ್ ಟವರ್ ವರದಿ ತಿಳಿಸಿದೆ. ಅದರಲ್ಲೂ ಭಾರತದಿಂದ 15 ದಶಲಕ್ಷ ಡೌನ್‌ಲೋಡ್‌ಗಳು ಬಂದಿವೆ. ಇನ್ನು ಕಳೆದ ಮೂರು ತಿಂಗಳುಗಳ ಸಂಖ್ಯೆಗಳನ್ನು ನೋಡಿದರೆ, ಟೆಲಿಗ್ರಾಮ್ ಯಾವಾಗಲೂ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದಾಗಿತ್ತು, ಆದರೆ ಇದೀಗ ತನ್ನ ಸ್ಥಾನವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ ಕಳೆದ ಡಿಸೆಂಬರ್ 2020 ಮತ್ತು ನವೆಂಬರ್ 2020 ರಲ್ಲಿ, ಇದು ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಲಾದ ಒಂಬತ್ತನೇ ಅಪ್ಲಿಕೇಶನ್ ಆಗಿದೆ. ಕುತೂಹಲಕಾರಿಯಾಗಿ ನವೆಂಬರ್‌ನಲ್ಲಿ, ವಾಟ್ಸಾಪ್ 58 ಮಿಲಿಯನ್ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಆಗಿದೆ. ಅಲ್ಲದೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ 2020 ರಲ್ಲಿ, ಟೆಲಿಗ್ರಾಮ್ ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಿದ 10 ನೇ ಅಪ್ಲಿಕೇಶನ್ ಆಗಿದೆ. ಇದೀಗ ವಾಟ್ಸಾಪ್‌ ಮಾಡಿಕೊಂಡ ಎಡವಟ್ಟಿನ ಪರಿಣಾಮ, ಜನವರಿಯಲ್ಲಿ ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ.

ವಾಟ್ಸಾಪ್

ಟೆಲಿಗ್ರಾಮ್‌ನ ಈ ಏರಿಕೆಯಲ್ಲಿ ವಾಟ್ಸಾಪ್ ಮಾಡಿಕೊಂಡ ಎಡವಟ್ಟಿನ ನಿರ್ಧಾರಗಳೇ ಕಾರಣ ಅನ್ನೊದು ಸ್ಪಷ್ಟವಾಗಿ ಕಾಣುತ್ತದೆ. ಕಳೆದ ಜನವರಿಯಲ್ಲಿ ವಾಟ್ಸಾಪ್ ಬಳಕೆದಾರರಿಗೆ ಅದರ ನವೀಕರಿಸಿದ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿತ್ತು. ಇದೇ ಕಾರಣದಿಂದಾಗಿ ಹೆಚ್ಚಿನ ಜನರು ವಾಟ್ಸಾಪ್‌ ತೊರೆದು ಅನ್ಯ ಅಪ್ಲಿಕೇಶನ್‌ಗಳತ್ತ ಹೆಜ್ಜೆ ಹಾಕಲು ಕಾರಣವಾಗಿದೆ.

Best Mobiles in India

English summary
Telegram is the most downloaded app in the world.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+